ರಿಯಾದ್: ಅಂತಾರಾಷ್ಟಿಯ ವಿಮಾನಗಳಿಗೆ ಸೌದಿ ಅರೇಬಿಯಾ ಮತ್ತೆ ಒಂದು ವಾರಗಳ ನಿರ್ಬಂಧ ವಿಧಿಸಿದೆ. ಹೊಸ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಈ ನಿರ್ಧಾರವನ್ನು ಕೈಗೊಂಡಿದ್ದು, ಅಂತಾರಾಷ್ಟಿಯ ಜಲ ಮಾರ್ಗ ಮತ್ತು ರಸ್ತೆಗಳಿಗೂ ಈ ನಿರ್ಬಂಧ ಅನ್ವಯವಾಗಲಿದೆ.
ಸೌದಿಯಲ್ಲಿರುವ ವಿದೇಶಿಯರಿಗೆ ಹೊರಹೋಗಲು ಅನುಮತಿಯನ್ನು ನೀಡಲಾಗಿದ್ದು, ಹೊರದೇಶದವರಿಗೆ ಸೌದಿ ಪ್ರವೇಶ ನಿರ್ಬಂಧಿಸಲಾಗಿದೆ.
