
ಬಾಬ್ರಿ ಮಸೀದಿ ನಿರ್ನಾಮ ಮಾಡಿದಂತೆ ಭಟ್ಕಳದಲ್ಲಿ ಮಾಡುವುದು ಖಂಡಿತ. ಇದು ಹಿಂದೂ ಸಮಾಜದ ತೀರ್ಮಾನವೇ ವಿನಃ ಅನಂತಕುಮಾರ್ ಹೆಗಡೆ ತೀರ್ಮಾನ ಅಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಕುಮಟಾದಲ್ಲಿ ಹೇಳಿಕೆ .

ಕುಮಟಾ, ಜನವರಿ 13: ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೆ ಕೆಲವೇ ದಿನ ಬಾಕಿ ಇರುವ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.ಕುಮಟಾದಲ್ಲಿ (Kumta) ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದ (Bhatkal) ಚಿನ್ನದ ಪಳ್ಳಿಯೂ ಆಗಲಿದೆ. ಇದನ್ನು ಬೇಕಾದರೆ ಬೆದರಿಕೆ ಎಂದು ಬೇಕಾದರೂ ತಿಳಿಯಿರಿ ಎಂದು ಹೇಳಿದರು .

ಬಾಬ್ರಿ ಮಸೀದಿ ನಿರ್ನಾಮ ಮಾಡಿದಂತೆ ಭಟ್ಕಳದಲ್ಲಿ ಮಾಡುವುದು ಖಂಡಿತ. ಇದು ಹಿಂದೂ ಸಮಾಜದ ತೀರ್ಮಾನವೇ ವಿನಃ ಅನಂತಕುಮಾರ್ ಹೆಗಡೆ ತೀರ್ಮಾನ ಅಲ್ಲ. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಮಾರುತಿ ದೇವಸ್ಥಾನವಾಗಿತ್ತು ಎಂದು ಅವರು ಹೇಳಿದರು.

ದೇಶದ ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ. ಅದನ್ನು ಕಿತ್ತುಹಾಕೋ ತನಕ ಈ ಹಿಂದೂ ಸಮಾಜ ಸುಮ್ಮನಿರಲ್ಲ. ಈಗ ರಣಭೈರವ ಎದ್ದಾಗಿದೆ, ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದೇ ಇದ್ರೆ ಇದು ಹಿಂದೂ ರಕ್ತವೇ ಅಲ್ಲ. ಹಿಂದೂ ಧರ್ಮ ಋಣ ಇಟ್ಟಿಕೊಳ್ಳುವ ಧರ್ಮ ಅಲ್ಲವೇ ಅಲ್ಲ. ಜಾತಿಯ ಹೆಸರಿನಲ್ಲಿ ಹಿಂದೂ ಸಮಾಜ ಓಡೆದರು ಎಂದು ವಿವಾದತ್ಮಕ ಹೇಳಿಕೆ ನೀಡಿದ ಸಂಸದ,ಹಿಂದುತ್ವದ ವಿಷ ಬೀಜ ಸಾಮಾನ್ಯ ಜನರ ಮನಸಲ್ಲಿ ಬಿತ್ತುವ ಪ್ರಯತ್ನವನ್ನು ಸಂಸದ ಮಾಡುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಹೆಗಡೆ ವಾಗ್ದಾಳಿ
ಅಯೋಧ್ಯೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಅನಂತಕುಮಾರ್ ಹೆಗಡೆ, ‘ನೀನು ಬರ್ಲಿ, ಇಲ್ಲ ಬಿಡಲಿ, ರಾಮ ಜನ್ಮಭೂಮಿ ಏನೂ ನಿಲ್ಲೋದಿಲ್ಲ ಮಗನೇ’ ಎಂದು ನಿಂದಿಸಿದರು. ನಾನು ಅಯೋಧ್ಯೆಗೆ ಹೋಗುತ್ತೇನೆ, ಆದರೆ 22 ಕ್ಕೆ ಹೋಗಲ್ಲ ಆಮೇಲೆ ಹೊಗುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಮೊದಲು ಹೋಗಲ್ಲ ಅಂದಿದ್ದವರು ಈಗ ಹೋಗುತ್ತೇನೆ ಎನ್ನುತ್ತಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು, ದಮ್ ಎಂದು ಹೆಗಡೆ ಹೇಳಿದರು.
