
ಮಂಗಳೂರು: ಪಶ್ಚಿಮ ವಲಯ ಡಿಐಜಿಯಾಗಿ ಅಮಿತ್ ಸಿಂಗ್ ಅವರು ಇಂದು (ಸೋಮವಾರ) ಅಧಿಕಾರ ಸ್ವೀಕರಿಸಿದರು.ಈ ಕುರಿತು ಮಾತನಾಡಿದ ಅವರು ಡ್ರಗ್ಸ್, ಕೋಮುವಾದ ಸಹಿತ ಕಾನೂನು ಬಾಹಿರ ಕೃತ್ಯಗಳನ್ನು ಸಹಿಸುವುದಿಲ್ಲ. ಸೈಬರ್ ಕ್ರೈಂ ಬಗ್ಗೆ ಯೂ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.

ಈ ಮೊದಲು ಡಿಐಜಿಯಾಗಿದ್ದ ಚಂದ್ರಗುಪ್ತ ಅವರು ಬೆಂಗಳೂರಿಗೆ ವರ್ಗಾವಣೆ ಗೊಂಡಿದ್ದಾರೆ.
ದಕ್ಷಿಣಕನ್ನಡ ಎಸ್ ಪಿಸಿಬಿ ರಿಷ್ಯಂತ್, ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಉಪಸ್ಥಿರಿದ್ದರು.
