
ಅಯೋಧ್ಯೆ: ಬಾಬರೀ ಮಸೀದಿಗೆಂದು ಹಂಚಿಕೆಯಾದ 5 ಎಕರೆ ಜಾಗದಲ್ಲಿ ವಿವಿಧ ಸಾಮುದಾಯಿಕ ಸೇವೆಗಳಿರುವ ಬೃಹತ್ ಮಸೀದಿಯೊಂದು ನಿರ್ಮಾಣವಾಗಲಿದ್ದು, ಇದರ ನೀಲ ನಕಾಶೆ ಹೊರಬಂದಿದೆ.
ದನ್ನಿಪುರ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಈ ಬೃಹತ್ ಮಸೀದಿಯು ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಅಡುಗೆಕೋಣೆ ಮತ್ತು ಮ್ಯೂಸಿಯಂ ಅನ್ನು ಒಳಗೊಳ್ಳಲಿದೆ.
ಆದರೆ ಈ ಮಸೀದಿಯಲ್ಲಿ ಯಾವುದೇ ಇಸ್ಲಾಮಿಕ್ ಶೈಲಿಯ ವಿನ್ಯಾಸಗಳೋ, ವಾಸ್ತುಶಿಲ್ಪವೋ ಇರುವುದಿಲ್ಲ.
ಈ ಮಸೀದಿಯು ಬಾಬರಿ ಮಸೀದಿಗಿಂತ 4 ಪಟ್ಟು ದೊಡ್ಡದಿರಲಿದ್ದು, ಏಕಕಾಲದಲ್ಲಿ 2000 ಮಂದಿಗೆ ಇಲ್ಲಿ ನಮಾಝ್ ಮಾಡಬಹುದು.
ಈ ಮಸೀದಿ ಒಳಗೊಂಡಿರುವ 300 ಬೆಡ್‌ಗಳ ಆಸ್ಪತ್ರೆಯು ಬಾಬರಿ ಮಸೀದಿಯ 6 ಪಟ್ಟು ದೊಡ್ಡದಿದೆ.

