ಕೋಲಾರ: ಉಜಿರೆಯ 8 ವರ್ಷದ ಬಾಲಕನನ್ನು ಅಪಹರಿಸಿದ ನಾಲ್ವರು ಅಪಹರಣಕಾರರ ಸಹಿತ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲಾರದ ಮಾಲೂರು ತಾಲೂಕಿನ ಕೂರ್ನಹೊಸಹಳ್ಳಿಯ ಮನೆಯೊಂದರಲ್ಲಿ ಬಾಲಕನನ್ನು ಬಚ್ಚಿಡಲಾಗಿದ್ದು, ಇಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ನಾಲ್ವರು ಅಪಹರಣಕಾರರು ಮತ್ತು ಅವರಿಗೆ ನೆರವು ನೀಡಿದ್ದ ಇಬ್ಬರನ್ನು ಬಂಧಿಸಿದ್ದು, ಬಾಲಕನನ್ನು ರಕ್ಷಿಸಿದ್ದಾರೆ.
ಅಪರಣಕಾರರು ಬಾಲಕನನ್ನು ಈ ಮನೆಯಲ್ಲಿ ಬಂಧನದಲ್ಲಿರಿಸಿದ್ದು, ಬಳಿಕ ಬಾಲಕನ ಪೋಷಕರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
ನಡೆದದ್ದೇನು?: ಉಜಿರೆಯ ತನ್ನ ಮನೆಯ ಗೇಟ್ ಬಳಿ ಇದ್ದ 8 ವರ್ಷದ ಬಾಲಕನನ್ನು ಡಿಸೆಂಬರ್ 17ರಂದು ಸಂಜೆ ಅಪರಿಚಿತರ ತಂಡ ಕಾರೊಂದರಲ್ಲಿ ಅಪಹರಿಸಿತ್ತು. ಈ ಕುರಿತಂತೆ ಅಲ್ಲೇ ಇದ್ದ ಬಾಲಕನ ಅಜ್ಜ ಪೊಲೀಸರಿಗೆ ದೂರು ನೀಡಿದ್ದು, ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು.
ಇದೀಗ ಕೋಲಾರ ಎಸ್ಪಿಯ ನೆರವಿನೊಂದಿಗೆ ಆರೋಪಿಗಳ ಬಂಧನವಾಗಿದೆ.
