
ನಿನ್ನೆಯವರೆಗೆ 50 ಕೋಟಿ ರೂಪಾಯಿಗಳವರೆಗಿನ ನೋಟುಗಳ ಎಣಿಕೆ ಪೂರ್ಣಗೊಂಡಿದೆ. ಆದರೆ ನೋಟುಗಳ ಸಂಖ್ಯೆ ತುಂಬಾ ಹೆಚ್ಚಾಗಿರುವುದರಿಂದ ಯಂತ್ರಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ ಎಂದು ಒಡಿಶಾ ಮತ್ತು ಜಾರ್ಖಂಡ್ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ ಮೂಲಗಳು ಹೇಳಿವೆ.

ದೆಹಲಿ ಡಿಸೆಂಬರ್ 07: ಆದಾಯ ತೆರಿಗೆ ಇಲಾಖೆಯು(Income Tax Department) ಒಡ್ಡಿಶಾ (Odisha) ಮತ್ತು ಜಾರ್ಖಂಡ್ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ನಲ್ಲಿ (Boudh Distilleries Pvt Ltd) ದಾಳಿ ನಡೆಸಿದೆ .ನಿನ್ನೆಯವರೆಗೆ ಕಂಪನಿಯೊಂದಿಗೆ ಸಂಬಂಧಹೊಂದಿರುವ ಆವರಣದಿಂದ ಅಪಾರ ಪ್ರಮಾಣದ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದೆ ಎಂದು ಐಟಿ ಇಲಾಖೆ ಮೂಲಗಳು ಗುರುವಾರ (ಡಿಸೆಂಬರ್ 7) ತಿಳಿಸಿವೆ. ಅಧಿಕಾರಿಗಳ ಪ್ರಕಾರ, ಒಡಿಶಾದ ಬೋಲಂಗಿರ್ ಮತ್ತು ಸಂಬಲ್ಪುರ ಮತ್ತು ಜಾರ್ಖಂಡ್ನ ರಾಂಚಿ, ಲೋಹರ್ದಗಾದಲ್ಲಿ ಶೋಧ ನಡೆಸಲಾಗಿದೆ.

ನಿನ್ನೆಯವರೆಗೆ 50 ಕೋಟಿ ರೂಪಾಯಿಗಳವರೆಗಿನ ನೋಟುಗಳ ಎಣಿಕೆ ಪೂರ್ಣಗೊಂಡಿದೆ. ಆದರೆ ನೋಟುಗಳ ಸಂಖ್ಯೆ ತುಂಬಾ ಹೆಚ್ಚಾಗಿರುವುದರಿಂದ ಯಂತ್ರಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ” ಎಂದು ಮೂಲಗಳು ತಿಳಿಸಿವೆ.

ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವೆಬ್ಸೈಟ್ ಪ್ರಕಾರ, ಇದು ಒಡಿಶಾದಲ್ಲಿ ಗ್ರೂಪ್ ಪ್ರಧಾನ ಕಚೇರಿಯನ್ನು ಹೊಂದಿದೆ, 6 ವ್ಯಾಪಾರ ವಿಭಾಗಗಳಲ್ಲಿ 4 ಕಂಪನಿಗಳನ್ನು ಒಳಗೊಂಡಿದೆ. ಗುಂಪು ಒಡಿಶಾದಾದ್ಯಂತ ಕಾರ್ಯನಿರ್ವಹಿಸುತ್ತದೆ.
“ಕಂಪನಿಗಳಲ್ಲಿ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ (ENA, CO2, DDGS), ಬಾಲ್ಡಿಯೊ ಸಾಹು ಇನ್ಫ್ರಾ ಪ್ರೈವೇಟ್ ಲಿಮಿಟೆಡ್ (ಫ್ಲೈ ಆಶ್ ಬ್ರಿಕ್ಸ್) ಕ್ವಾಲಿಟಿ ಬಾಟ್ಲರ್ಸ್ ಪ್ರೈವೇಟ್ ಲಿಮಿಟೆಡ್ (IMFL ಬಾಟ್ಲಿಂಗ್) ಮತ್ತು ಕಿಶೋರ್ ಪ್ರಸಾದ್ ಬಿಜಯ್ ಪ್ರಸಾದ್ ಬೆವರೇಜಸ್ ಪ್ರೈವೇಟ್ ಲಿಮಿಟೆಡ್ (ಸೇಲ್ಸ್ & IMFL ಬ್ರ್ಯಾಂಡ್ ಮಾರ್ಕೆಟಿಂಗ್) ಸೇರಿದೆ ಎಂದು ವೆಬ್ಸೈಟ್ ಹೇಳಿದೆ.