
ಯತ್ನಾಳ್ ಸಿಡಿಸಿದ ಐಸಿಸ್ ಬಾಂಬ್ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ಆರೋಪದ ಕಿಡಿ ಹೊತ್ತಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರು ಯತ್ನಾಳ್ ವಿರುದ್ದ ಮಾತಿನ ಮಳೆ ಗರೆಯುತ್ತಿದ್ದಾರೆ. ಅತ್ತ ಒಂದು ವಾರದೊಳಗೆ ಆರೋಪ ಸಾಬೀತು ಪಡಿಸಿ ಎಂದು ಯತ್ನಾಳ್ಗೆ ಮುಸ್ಲಿಂ ಧರ್ಮಗುರು ಸವಾಲು ಸಹ ಹಾಕಿದ್ದಾರೆ.
ಏನಿದು ಆರೋಪ..?
ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಐಸಿಸ್ ಸಂಪರ್ಕದಲ್ಲಿರುವ ವ್ಯಕ್ತಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಅನ್ನೋ ಯತ್ನಾಳ್ ಆರೋಪದ ಸಿಡಿಗುಂಡು ಕೈಪಾಳಯವನ್ನ ಕೆರಳಿ ಕೆಂಡವಾಗಿಸಿದೆ. ಯತ್ನಾಳ್ ಅರೋಪದ ಅಲೆ ಎಬ್ಬಿಸ್ತಾ ಇದ್ದಂತೆ ಕಾಂಗ್ರೆಸ್ನ ಜೋಡೆತ್ತುಗಳು ಯತ್ನಾಳ್ ವಿರುದ್ಧ ಮಾತಿನ ಮಲ್ಲಯುದ್ಧಕ್ಕಿಳಿದಿದ್ದಾರೆ.

ಯತ್ನಾಳ್ ಆರೋಪದ ಬಗ್ಗೆ ಸಿಎಂ ಸಿದ್ದರಾಮಯ್ಯ ಗರಂ
ಬೆಳಗಾವಿಯಲ್ಲಿ ಬೀಡು ಬಿಟ್ಟಿರೋ ಸಿಎಂ ಸಿದ್ದರಾಮಯ್ಯಗೆ ಯತ್ನಾಳ್ ಆರೋಪದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಫುಲ್ ಗರಂ ಆಗಿದ್ದಾರೆ. ಮಾಧ್ಯಮದವರು ಯತ್ನಾಳ್ ಅನ್ನುತ್ತಿದ್ದಂತೆ ಏ ನಡಿಯಪ್ಪ ಅಂತ ಗುಟುರು ಹಾಕುತ್ತಲೇ ಹೊರನಡೆದಿದ್ದಾರೆ.

ಯತ್ನಾಳ್ರನ್ನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸೋಣ’
ಸಿಎಂ ವಿರುದ್ಧ ಯತ್ನಾಳ್ ಮಾಡಿರೋ ಆರೋಪದ ಬಗ್ಗೆ ಡಿಸಿಎಂ ನಿಗಿ ನಿಗಿ ಕೆಂಡವಾಗಿದ್ದಾರೆ.. ಯತ್ನಾಳ್ರನ್ನ ಒಳ್ಳೆ ಆಸ್ಪತ್ರೆಗೆ ಸೇರಿಸೋಣ, ನಿಮ್ಹಾನ್ಸ್ಗೋ ಅಥವಾ ಬೇರೆ ಆಸ್ಪತ್ರೆಗೋ ಸೇರಿಸೋಣ ಅಂತ ಡಿ.ಕೆ. ಶಿವಕುಮಾರ್ ಡಿಚ್ಚಿ ಕೊಟ್ಟಿದ್ದಾರೆ. ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಹ ಅಸಮಾಧಾನ ಹೊರಹಾಕಿದ್ದಾರೆ.. ಪಾಪ್ಯುಲಾರಿಟಿಗೆ ಮಾತಾಡೋದು ಎಷ್ಟು ಸರಿ ಅಂತ ಪ್ರಶ್ನಿಸಿದ್ದಾರೆ.
ಯತ್ನಾಳ್ ಆರೋಪಕ್ಕೆ ಸವಾಲೆಸೆದ ಮುಸ್ಲಿಂ ಧರ್ಮಗುರು
ಯತ್ನಾಳ್ ಆರೋಪದ ಬಗ್ಗೆ ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಸಹ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರೋ ತನ್ವೀರ್ ಪೀರಾ, ಯತ್ನಾಳ್ ಆರೋಪಕ್ಕೆ ಸವಾಲು ಎಸೆದಿದ್ದಾರೆ.. ಒಂದು ವಾರದೊಳಗೆ ಆರೋಪ ಸಾಬೀತು ಪಡಿಸುವಂತೆ ಯತ್ನಾಳ್ಗೆ ಗಡುವು ನೀಡಿದ್ದಾರೆ. ಒಂದು ವೇಳೆ ಯತ್ನಾಳ್ ಆರೋಪ ಸಾಬೀತಾದರೆ, ನಾನು ದೇಶವನ್ನ ಬಿಟ್ಟು ಹೋಗುತ್ತೇನೆ. ಸಾಬೀತು ಮಾಡದಿದ್ದರೆ ಯತ್ನಾಳ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕು ಅಂತ ತನ್ವೀರ್ ಪೀರಾ ಸವಾಲು ಹಾಕಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದ ಯತ್ನಾಳ್
ಮುಸ್ಲಿಂ ಧರ್ಮಗುರು ತನ್ವೀರ ಪೀರಾ ಅವರಿಗೆ ಐಸಿಸ್ ಜೊತೆ ಲಿಂಗ್ ಇದೆ ಅನ್ನೋ ಬಗ್ಗೆ ಎನ್ಐಎ ತನಿಖೆ ಆಗಬೇಕು ಅಂತ ಯತ್ನಾಳ್ ಕೇಂದ್ರ ಸಚಿವ ಸಮಿತ್ ಶಾಗೆ ಪತ್ರ ಬರೆದಿದ್ದಾರೆ.. ತನ್ವೀರ ಪೀರಾ ಐಸಿಸ್ ಬೆಂಬಲ ಇರುವ ವ್ಯಕ್ತಿಯಾಗಿದ್ದು, ಬೇರೆ ಬೇರೆ ದೇಶದಲ್ಲಿ ಅಂತಹ ವ್ಯಕ್ತಿಗಳನ್ನು ತನ್ವೀರ್ ಪೀರಾ ಭೇಟಿ ಆಗಿದ್ದಾರೆ.. ಆದ್ರಿಂದ ಎನ್ಐಎ ತನಿಖೆ ಮಾಡಿ ಕ್ರಮ ಜರುಗಿಸುವಂತೆ ಯತ್ನಾಳ್ ಮನವಿ ಮಾಡಿದ್ದಾರೆ.
ಒಟ್ನಲ್ಲಿ ಯತ್ನಾಳ್ ಹೂಡಿದ ಆರೋಪದ ಬಾಣ ಸದ್ಯ ಕೈ ನಾಯಕರನ್ನು ಮಾತಿನ ಮಲ್ಲಯುದ್ದಕ್ಕೆ ಆಮಂತ್ರಿಸಿದೆ. ಆರೋಪ ಸಾಬೀತು ಪಡಿಸಿ ಅನ್ನೋ ತನ್ವೀರ್ ಪೀರ್ ಅವರ ಸವಾಲು ಯತ್ನಾಳ್ಗೆ ಅಗ್ನಿಪರೀಕ್ಷೆಯನ್ನ ತಂದೊಡ್ಡಿದೆ. ಒಂದು ವಾರದಲ್ಲಿ ಆರೋಪ ಸಾಬೀತು ಪಡಿಸಿ ತಮ್ಮ ಮಾತಿನ ಮೇಲೆ ಯತ್ನಾಳ್ ನಿಲ್ತಾರಾ ಕಾದು ನೋಡ್ಬೇಕಿದೆ.

ತನ್ವೀರ್ ಪೀರ್ ಮನೆಗೆ ಸಿದ್ದು ಭೇಟಿ ಫೋಟೋಸ್ ವೈರಲ್
ಐಸಿಸ್ ನಂಟಿನ ಆರೋಪ-ಪ್ರತ್ಯಾರೋಪದ ನಡುವೆ ಸಿಎಂ ಸಿದ್ದರಾಮಯ್ಯ ತನ್ವೀರ್ ಪೀರ್ ಮನೆಗೆ ಭೇಟಿ ನೀಡಿದ್ದ ಪೋಟೋಗಳು ಎಲ್ಲೆಡೆ ವೈರಲ್ ಆಗ್ತಿವೆ. ಕಳೆದ ನವೆಂಬರ್ 20ರಂದು ಸಿಎಂ ಸಿದ್ದರಾಮಯ್ಯ ವಿಜಯಪುರ ಪ್ರವಾಸದ ವೇಳೆ, ಮುಸ್ಲಿಂ ಧರ್ಮಗುರು ತನ್ವಿರಾ ಪೀರಾ ಅವರನ್ನು ಭೇಟಿ ಮಾಡಿದ್ರು.. ಈ ಭೇಟಿಯ ಫೋಟೊಗಳು ವೈರಲ್ ಆಗ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.