
ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ, ಪೊಲೀಸರಿಂದ ಲಾಠಿಚಾರ್ಜ್
ಉಡುಪಿ: ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಅರುಣ್ ಚೌಗಲೆ(39) ನನ್ನು ಪೊಲೀಸರು ಸ್ಥಳ ಮಹಜರುಗೆ ಕರೆದುಕೊಂಡ ಬಂದ ವೇಳೆ ಗುಂಪೊಂದು ಆರೋಪಿಗೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ
ಘಟನೆ ಬೆನ್ನಲ್ಲೇ ಆ ಭಾಗದಲ್ಲಿ ರಸ್ತೆ ತಡೆ ಮಾಡಲಾಯಿತು. ಕೆಲ ಕಾಲ ಟ್ರಾಫಿಕ್ ದಟ್ಟನೆ ಉಂಟಾಯಿತು.ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನೂ ಕೂಡಲೇ ಕರೆಸಿಕೊಳ್ಳಲಾಗಿದೆ.

ಬುಧವಾರ ಪ್ರವೀಣ್ ಚೌಗಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು, ನ್ಯಾಯಾಲಯ 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಬೆಳಗ್ಗೆಯಿಂದಲೇ ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದು, 11.30 ಗಂಟೆಗೆ ಆರೋಪಿಯನ್ನು ಸ್ಥಳ ಮಹಜರು ಸ್ಥಳಕ್ಕೆ ಬರುವುದಾಗಿ ಹೇಳಲಾಗಿತ್ತು. ಆದರೆ ಸಂಜೆ 4.30 ಕ್ಕೆ ಆರೋಪಿಯನ್ನು ಕರೆತರಲಾಗಿತ್ತು.

ಈ ಹತ್ಯೆ ಪ್ರಕರಣದ ತನಿಖೆ ಸಂಬಂಧಿಸಿದಂತೆ ಆರೋಪಿಯನ್ನು ಸ್ಥಳ ಮಹಜರು ಮಾಡಲು ಕರೆತಂದ ಸಂದರ್ಭ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಆರೋಪಿ ಪ್ರವೀಣ್ ಚೌಗಲೆಯನ್ನು ಪೊಲೀಸರು ಬಿಗಿ ಬಂದೋ ಬಸ್ತ್ ನಲ್ಲಿ ಕಪ್ಪು ವಸ್ತ್ರದಲ್ಲಿ ಮುಖ ಕಾಣದಂತೆ ಹತ್ಯೆಗೈದ ಮನೆಗೆ ಕರೆತಂದಿದ್ದಾರೆ.
ಸ್ಥಳಕ್ಕೆ ಎಸ್ಪಿ ಮತ್ತು ಡಿಸಿ ಬರಬೇಕು ಎಂದು ಆಗ್ರಹಿಸಿ, ರಸ್ತೆ ತಡೆದು ಸಾರ್ವಜನಿಕರು ಪ್ರತಿಭಟನೆ ಮಾಡಿದ್ದಾರೆ. ಹಾಗಾಗಿ ಉಡುಪಿಯ ತೃಪ್ತಿನಗರದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜನಾಕ್ರೋಶದ ನಡುವೆ ಪೊಲೀಸರು ಮಹಜರು ಮುಗಿಸಿ ತೆರಳಿದ್ದಾರೆ.