ನ್ಯೂಯಾರ್ಕ್: ಇಲ್ಲಿನ ಚರ್ಚ್ ವೊಂದರಲ್ಲಿ ಬಂಧೂಕುಧಾರಿಯು ಗುಂಡಿನ ದಾಳಿ ನಡೆಸಿದ್ದು ಆತನ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನ್ಯೂಯಾರ್ಕ್ ನ ಸೇಂಟ್ ಜಾನ್ ದಿ ಡಿವೈನ್ ಕ್ಯಾಥೆಡ್ರಲ್ ಚರ್ಚ್ನಲ್ಲಿ ಭಾನುವಾರ ಸಂಜೆ ನಡೆದಿದೆ.
ಚರ್ಚ್ನಲ್ಲಿ ಆಯೋಜಿಸಲಾಗಿದ್ದ 45 ನಿಮಿಷದ ಕ್ರಿಸ್ಮಸ್ ಸಂಗೀತ ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ ಚರ್ಚ್ ನಿಂದ ಜನರು ಹೊರ ನಡೆಯುತ್ತಿದ್ದ ವೇಳೆ ಗುಂಡಿನ ಶಬ್ದ ಕೇಳಿ ಬಂದಿದ್ದು, ಭಯಭೀತಗೊಂಡಿದ್ದ ಜನರು ಓಡಲು ಪ್ರಾರಂಭಿಸಿದರು. ಈ ವೇಳೆ ಗುಂಡಿನ ದಾಳಿ ನಡೆಸಿದ ಬಂದೂಕುಧಾರಿಯನ್ನು ನಿಯಂತ್ರಿಸಲು ಭದ್ರತೆಗಾಗಿ ನಿಯೋಜಿಸಲಾಗಿದ್ದ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ಆತನ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
