
ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ಎಟಿಎಂ ಆಗಿ ಮಾಡಿಕೊಂಡಿದೆ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ. ಇತ್ತೀಗೆ ಐಟಿ ದಾಳಿ ನಡೆದಾಗ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಸಂಬಂಧಿಕರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಮೇಲೇ ಎಟಿಎಂ ಆರೋಪ ನಿಜವಾಗಿದೆ ಎಂದು ಜರಿದಿದೆ. ಸದ್ಯ ಈ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್, ಬಿಜೆಪಿ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು ಎಂದು ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿದ ರಾಜ್ಯ ಕಾಂಗ್ರೆಸ್ ಘಟಕ, ಸಿಎಂ ಹುದ್ದೆಗೆ 2,500 ಕೋಟಿ, ಮಂತ್ರಿಗಿರಿಗೆ 70 ರಿಂದ 80 ಕೋಟಿ, ಬಿಜೆಪಿ ಟಿಕೆಟ್ಗೆ 7 ಕೋಟಿ. ಇಂತಹ ಭ್ರಷ್ಟ ಬಿಜೆಪಿಯ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು! ಕಲೆಕ್ಷನ್ ಗಿರಾಕಿ ಮೋದಿ ಕರ್ನಾಟಕಕ್ಕೆ ಮೂರು ದಿನಕ್ಕೊಮ್ಮೆ ಬಂದಿದ್ದು ಕಲೆಕ್ಷನ್ ಮಾಡುವುದಕ್ಕಾಗಿಯೇ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.
ಸಿಎಂ ಹುದ್ದೆಗೆ 2,500 ಕೋಟಿ ಮಂತ್ರಿಗಿರಿಗೆ 70 ರಿಂದ 80 ಕೋಟಿ ಬಿಜೆಪಿ ಟಿಕೆಟ್ ಗೆ 7 ಕೋಟಿ ಇಂತಹ ಭ್ರಷ್ಟ ಬಿಜೆಪಿಯ ಹೈಕಮಾಂಡ್ ಕರ್ನಾಟಕವನ್ನು ರಿಸರ್ವ್ ಬ್ಯಾಂಕ್ ಮಾಡಿಕೊಂಡಿತ್ತು!

ಇತ್ತ ಸರಣಿ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ಕಾಂಗ್ರೆಸ್ ಬಂದರೆ ಕಲೆಕ್ಷನ್ ಮಾಡಲಿದೆ, ಕಾಂಗ್ರೆಸ್ ಬಂದರೆ ಕಮಿಷನ್ ದಂಧೆ ಆರಂಭವಾಗಲಿದೆ, ಕಾಂಗ್ರೆಸ್ ಬಂದರೆ ಕರ್ನಾಟಕ ಹೈಕಮಾಂಡ್ ಪಾಲಿಗೆ #ATM ಆಗಲಿದೆ, ಕಾಂಗ್ರೆಸ್ ಬಂದರೆ ಅರಾಜಕತೆ ಶುರುವಾಗಲಿದೆ, ಕಾಂಗ್ರೆಸ್ ಬಂದರೆ ಕರ್ನಾಟಕ ಜಿಹಾದಿಗಳ ಅಡಗುತಾಣವಾಗಲಿದೆ ಎಂಬ ಆರೋಪಗಳನ್ನೆಲ್ಲಾ ಇಂದು ಸ್ವತಃ ಕಾಂಗ್ರೆಸ್ ನಿಜ ಮಾಡಿದೆ ಎಂದಿದೆ.