
ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಯುದ್ದದಲ್ಲಿ ಹಲವು ಕುಟುಂಬಗಳು ಸಾವನ್ನಪ್ಪುತ್ತಿದ್ದು, ಸಾವಿಗೀಡಾದ ಕುಟುಂಬವೊಂದರಲ್ಲಿ ಪುಟ್ಟ ಕಂದಮ್ಮ ಒಂದು ಬದುಕುಳಿದಿದೆ.

ಗಾಜಾದ ಕಟ್ಟಡದ ಮೇಲೆ ಬಾಂಬ್ ದಾಳಿ ನಡೆಸಿದಾಗ ಇಡೀ ಕುಟುಂಬವೇ ಸಾವನ್ನಪ್ಪಿದ್ದು, ಸದ್ಯ ಹಸುಗೂಸೊಂದು ಜೀವಂತವಾಗಿ ನೋವಿನಿಂದ ನರಳುತ್ತಾ ಇತ್ತು. ಇದನ್ನ ಕಂಡ ಸ್ಥಳೀಯರು ಆ ಮಗುವನ್ನ ಆಸ್ಪತ್ರೆಗೆ ಕರೆತಂದು ಕಂದಮ್ಮನ ಜೀವ ಉಳಿಸಿದ್ದಾರೆ. ಆದರೆ ಪುಟ್ಟ ಕಂದಮ್ಮ ಆಸ್ಪತ್ರೆಯಲ್ಲೀಗ ತನ್ನವರಿಲ್ಲದೇ ಅನಾಥವಾಗಿದೆ.

ಹಮಾಸ್ ದಾಳಿಗೆ 9 ಸಾವಿರಕ್ಕೂ ಹೆಚ್ಚು ಜನರಿಗೆ ಗಾಯ
ಭೀಕರ ಯುದ್ಧದಾಗಿ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಲೇ ಇದೆ. ದಾಳಿ-ಪ್ರತಿದಾಳಿಯಲ್ಲಿ ಇಸ್ರೇಲ್ ಮತ್ತು ಪ್ಯಾಲೇಸ್ತೀನ್ ಎರಡೂ ಕಡೆ ಸುಮಾರು 4 ಸಾವಿರಕ್ಕೂ ಹೆಚ್ಚು ಹೆಚ್ಚು ಮಂದಿ ಅಸುನೀಗಿದ್ದಾರೆ. ಇಸ್ರೇಲ್ನ ಕಡೆ ನಾಗರಿಕರೇ ಹೆಚ್ಚು ಸಾವನ್ನಪ್ಪಿದ್ದಾರೆ. ಇನ್ನು ಈ ಯುದ್ಧದ ಪರಿಸ್ಥಿತಿಯಲ್ಲಿ ಉಭಯ ಕಡೆಗಳಲ್ಲಿ ಸುಮಾರು 9 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್ನಲ್ಲಿ ಒಟ್ಟು 3 ಸಾವಿರದ 200 ಮಂದಿ ಗಾಯಗೊಂಡಿದ್ದಾರೆ. ಇನ್ನು ನೇತನ್ಯಾಹು ಪಡೆ ಕೌಂಟರ್ ಅಟ್ಯಾಕ್ ತೀವ್ರಗೊಳಿಸಿರೋ ಹಿನ್ನೆಲೆ ಪ್ಯಾಲೆಸ್ತೈನ್ನಲ್ಲಿ ಒಟ್ಟು 6,200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಹಮಾಸ್ ದಾಳಿಗೆ ಇಸ್ರೇಲ್ ರಕ್ತಸಿಕ್ತವಾಗಿ ಕಟ್ಟಡಗಳು ನೆಲಸಮವಾಗಿವೆ. ಈ ಬೆಳವಣಿಗೆ ನೋಡಿದರೆ ಮುಂದಿನ ದಿನಗಳ ಯುದ್ಧ ಮತ್ತಷ್ಟು ಭೀಕರತೆ ಪಡೆಯುವ ಸಾಧ್ಯತೆ ಇದೆ.