
ಮಂಗಳೂರು: ಕಿಡಿಗೇಡಿಗಳು ಗಣಪತಿ ಕಟ್ಟೆಯಲ್ಲಿ ಮುಸ್ಲಿಮರ ಹಸಿರು ಬಾವುಟವಿಟ್ಟು (Green Colour Flag) ಗಲಭೆಗೆ ಯತ್ನಿಸಿದ್ದ ಘಟನೆ ಮೂಡಬಿದ್ರೆಯ ಪುಚ್ಚೆಮೊಗೇರು ಎಂಬಲ್ಲಿ ನಡೆದಿದೆ.
ಮೂಡಬಿದಿರೆಯ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿಯವರ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಕಳೆದ ಸೆ.28 ರ ಈದ್ ಮಿಲಾದ್ ದಿನ ಕಿಡಿಗೇಡಿಗಳು ಮೂಡಬಿದಿರೆಯ ಪುಚ್ಚೆಮೊಗರು ಗಣಪತಿ ಕಟ್ಟೆಯಲ್ಲಿ ಹಸಿರು ಬಣ್ಣದ ಮುಸ್ಲಿಮರ ಬಾವುಟ ಹಾಕಿದ್ದರು. ತಕ್ಷಣ ಗಮನಿಸಿದ ಸ್ಥಳೀಯರು ಅಲ್ಲಿನ ಹೊಸಬೆಟ್ಟು ಗ್ರಾಮ ಪಂಚಾಯತ್‍ನ ಪಿಡಿಓ ಶೇಖರ್ ಅವರ ಗಮನಕ್ಕೆ ತಂದಿದ್ದರು. ಆದರೂ ಪಿಡಿಓ ಕ್ರಮಕೈಗೊಳ್ಳದೆ ಎರಡು ದಿನಗಳ ಕಾಲ ಬಾವುಟ ಅದೇ ಜಾಗದಲ್ಲಿತ್ತು.

ಸೆ.30 ರಂದು ವಿಚಾರ ತಿಳಿದ ಮೂಡಬಿದ್ರೆ ಠಾಣಾ ಇನ್ಸ್‍ಪೆಕ್ಟರ್ ಸಂದೇಶ್ ಪಿ.ಜಿ ಸಿಬ್ಬಂದಿ ಜೊತೆ ಸ್ಥಳಕ್ಕೆ ಬಂದಿದ್ದು, ಪಿಡಿಓ ಶೇಖರ್ ಅವರನ್ನೂ ಕರೆಸಿದ್ದರು. ಪಿಡಿಓ ವರ್ತನೆಗೆ ಕೆಂಡಾಂಮಡಲವಾದ ಇನ್ಸ್‍ಪೆಕ್ಟರ್, ಇದರ ಮೇಲೆ ಬಾವುಟ ಹಾಕಲು ಅನುಮತಿ ಇದ್ಯಾ?, ಅನುಮತಿ ಇಲ್ಲದೆ ಹಾಕಿದ್ದರೆ ಪೆÇಲೀಸ್ ದೂರು ನೀಡಬೇಕಿತ್ತು. ನಿನ್ನ ಅಧಿಕಾರ ಏನು ಅನ್ನೋದು ನಿನಗೆ ಗೊತ್ತಿಲ್ಲ, ನನಗೇನು ಸಂಬಂಧ ಇಲ್ಲ ಅನ್ನೋ ನೀನು ಪಿಡಿಓ ಆಗಿದ್ಯಾಕೆ?, ಇವನನ್ನೇ ಆರೋಪಿ ಮಾಡಬೇಕೆಂದು ಕೆಂಡಾಮಂಡಲವಾಗಿ ಇನ್ಸ್‍ಪೆಕ್ಟರ್ ಬೈದಿದ್ದಾರೆ. ಬಳಿಕ ಸಿಬ್ಬಂದಿ ಮೂಲಕ ಬಾವುಟವನ್ನು ಇನ್ಸ್‍ಪೆಕ್ಟರ್ ತೆರವುಗೊಳಿಸಿದ್ದಾರೆ.

ಇದೀಗ ಇನ್ಸ್ ಪೆಕ್ಟರ್ ಅವರ ಸಮಯ ಪ್ರಜ್ಞೆಯ ವೀಡಿಯೋ ವೈರಲ್ ಆಗಿದ್ದು ಅನಾಹುತ ತಪ್ಪಿಸಿದ ಇನ್ಸ್‍ಪೆಕ್ಟರ್ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
