ಜೈಪುರ: ಒಂದು ಘಂಟೆ ಅವಧಿಯಲ್ಲಿ 9 ನವಜಾತ ಶಿಶುಗಳು ಮೃತಪಟ್ಟಿರುವ ಘಟನೆ ರಾಜಸ್ಥಾನದ ಕೋಟಾದ ಜೆ.ಕೆ.ಲಾನ್ ಸರಕಾರಿ ಆಸ್ಪತ್ರೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಇದು ಸಹಜ ಸಾವು, ಸಾವಿಗೆ ಯಾವುದೇ ಗಂಭೀರ ಕಾರಣ ಅಥವಾ ಸೋಂಕು ಇರಲಿಲ್ಲ ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಸುರೇಶ್ ದುರಾಲಾ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಡಿವಿಜನಲ್ ಕಮಿಷನರ್ ಕೆ.ಸಿ.ಮೀನಾ ಹಾಗೂ ಜಿಲ್ಲಾಧಿಕಾರಿ ಉಜ್ವಲ್ ರಾಥೋಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ, ಸಭೆ ನಡೆಸಿದರು.
