
MLA Munirathna: ಆರ್.ಆರ್.ನಗರದ ವಾರ್ಡ್ವೊಂದರಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಮಾಜಿ ಸಚಿವ ಮುನಿರತ್ನ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರ ಬಳಿ ದೂರು ದಾಖಲಾಗಿದೆ. ಯುವಕನೋರ್ವ ದೂರು ನೀಡಿದ್ದು ಡ್ರಗ್ಸ್ ಸಂಬಂಧ ಕ್ರಮ ಕೈಗೊಳ್ಳುವಂತೆ ಸಿಸಿಬಿಗೆ ಮನವಿ ಮಾಡಿದ್ದಾನೆ.

ಬೆಂಗಳೂರು, ಅ.01: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಾಂಜಾ (Cannabis) ಹಾವಳಿ ಹೆಚ್ಚಾಗಿದ್ದು ಮಾಜಿ ಸಚಿವ, ಶಾಸಕ ಮುನಿರತ್ನ (Munirathna) ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಆರ್.ಆರ್.ನಗರದ (RR Nagara) ವಾರ್ಡ್ವೊಂದರಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಮಾಜಿ ಸಚಿವ ಮುನಿರತ್ನ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರ (Bengaluru CCB Police) ಬಳಿ ದೂರು ದಾಖಲಾಗಿದೆ. ಯುವಕನೋರ್ವ ದೂರು ನೀಡಿದ್ದು ಡ್ರಗ್ಸ್ ಸಂಬಂಧ ಕ್ರಮ ಕೈಗೊಳ್ಳುವಂತೆ ಸಿಸಿಬಿಗೆ ಮನವಿ ಮಾಡಿದ್ದಾನೆ. ಸದ್ಯ ದೂರು ಪಡೆದಿರುವ ಸಿಸಿಬಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ತಮ್ಮ ಕ್ಷೇತ್ರದ ವಾರ್ಡ್ ಒಂದರಲ್ಲೇ 14 ಕೆಜಿ ಗಾಂಜಾ ಮಾರಾಟವಾಗುತ್ತದೆ ಎಂದು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಘಂಟಾಘೋಷವಾಗಿ ಮುನಿರತ್ನ ಅವರು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಂತೋಷ್ ಎಂಬ ಯುವಕ ಸಿಸಿಬಿಗೆ ದೂರು ನೀಡಿದ್ದು ಡ್ರಗ್ ಪೆಡ್ಲರ್ಗಳು ಪೊಲೀಸರ ಜೊತೆಗೇ ಸೆಲ್ಫಿ ತೆಗೆದುಕೊಳ್ಳುತ್ತಾರೆ ಎಂದೂ ಗಂಭೀರ ಆರೋಪ ಮಾಡಿದ್ದಾನೆ. ಅಲ್ಲದೆ ಮುನಿರತ್ನ ಹಾಗೂ ಮಾಜಿ ಕಾರ್ಪೋರೇಟರ್ ಜಿಕೆ ವೆಂಕಟೇಶ ವಿರುದ್ದ ದೂರು ನೀಡಿದ್ದಾನೆ. ಮಾಹಿತಿ ಪಡೆದು ಡ್ರಗ್ ಪೆಡ್ಲರ್ ಗಳನ್ನು ಬಂಧಿಸುವಂತೆ ಸಿಸಿಬಿಗೆ ಸಂತೋಷ್ ದೂರು ನೀಡಿದ್ದಾನೆ.
