
ಕಾವೇರಿ ಹೋರಾಟದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ನಿಂದಿಸಿ ಎಕ್ಸ್ನಲ್ಲಿ (ಟ್ವಿಟ್ಟರ್) ಚಕ್ರವರ್ತಿ ಸೂಲಿಬೆಲೆ ಅವರು ಹಾಕಿದ್ದ ಪೋಸ್ಟ್ ಈಗ ಅವರಿಗೆಯೇ ತಿರುಗು ಬಾಣವಾಗಿದೆ. ಸೂಲಿಬೆಲೆ ಅವರನ್ನು ಬೆಂಬಲಿಸುತ್ತಿದ್ದ ಅವರ ಅಭಿಮಾನಿಗಳೇ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ.

ಮೈಸೂರು, ಸೆ.27: ಸಿಎಂ ಸಿದ್ದರಾಮಯ್ಯರನ್ನು ನಿಂದಿಸಿ ಚಕ್ರವರ್ತಿ ಸೂಲಿಬೆಲೆ (chakravarthy sulibele) ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಜ್ಯದಲ್ಲಿ ಕಾವೇರಿ ಕಿಚ್ಚು ಭುಗಿಲೆದ್ದಿದೆ. ರಾಜಕಾರಣ, ದ್ವೇಷ ಮರೆತು ಎಲ್ಲರೂ ಒಂದಾಗಿ ಕಾವೇರಿ ನೀರನ್ನು ಉಳಿಸಿಕೊಳ್ಳಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ಕಾವೇರಿ ಹೋರಾಟದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ನವರನ್ನು (siddaramaiah) ನಿಂದಿಸಿ ಎಕ್ಸ್ನಲ್ಲಿ (ಟ್ವಿಟ್ಟರ್) ಚಕ್ರವರ್ತಿ ಸೂಲಿಬೆಲೆ ಅವರು ಹಾಕಿದ್ದ ಪೋಸ್ಟ್ ಈಗ ಅವರಿಗೆಯೇ ತಿರುಗು ಬಾಣವಾಗಿದೆ. ಸೂಲಿಬೆಲೆ ಅವರನ್ನು ಬೆಂಬಲಿಸುತ್ತಿದ್ದ ಅವರ ಅಭಿಮಾನಿಗಳೇ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ.

ಸಿದ್ರಾಮ’ ಹೆಸರನ್ನು ಹಿಂಬದಿಯಿಂದ ಓದಿದರೆ ಗೊತ್ತಾಗುತ್ತೆ ಸಿದ್ದರಾಮಯ್ಯ ಯಾಕೆ ತಮಿಳುನಾಡಿಗೆ ನೀರು ಬಿಟ್ಟರು ಎಂದು ಚಕ್ರವರ್ತಿ ಸೂಲಿಬೆಲೆ ಅವರು ಟ್ವೀಟ್ ಮಾಡಿದ್ದಾರೆ. ಸಿದ್ರಾಮ ಎಂಬುದನ್ನು ಹಿಂಬದಿಯಿಂದ ಓದಿದರೆ ಮದ್ರಾಸಿ ಎಂಬಂತಾಗುತ್ತದೆ ಎಂದು ಪೋಸ್ಟ್ ಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದು ಹಿಗ್ಗಾಮಗ್ಗಾ ಜಾಡಿಸಿದ್ದಾರೆ. ಸೂಲಿಬೆಲೆ ಟ್ವೀಟ್ಗೆ ಹಲವರು ಆಕ್ರೋಶಗೊಂಡಿದ್ದಾರೆ.

ಸೂಲಿಬೆಲೆ ಅವರಿಗೆ ನೆಟ್ಟಿಗರ ಪ್ರಶ್ನೆ
ನೀವಾದ್ರೂ ಲ್ಯಾಪ್ ಟಾಪ್ ಕನೆಕ್ಟ್ ಮಾಡಿ ಮೋದಿಗೆ ಹೇಳಿ ಕರ್ನಾಟಕ ನೀರನ್ನು ಉಳಿಸಿ ಎಂದು. ಈ ತರ ಚೀಪ್ ಪೋಸ್ಟ್ ಮಾಡಬೇಡಿ, ನಿಮ್ಮ ಘನತೆಯನ್ನು ಕಾಪಾಡಿಕೊಳ್ಳಿ ಎಂದು ನೆಟ್ಟಿಗರು ಸಲಹೆ ಕೊಟ್ಟಿದ್ದಾರೆ. ಹಾಗೂ ಕಾವೇರಿ ಹೋರಾಟಕ್ಕೆ ನಿನ್ನ ಬೆಂಬಲ ಎಂದು ಒಂದಾದರು ಪೋಸ್ಟ್ ಮಾಡಿಲ್ವಲ್ಲೋ ಮಾರಾಯ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶಕ್ತಿಯಿರುವ ವಿಶ್ವಗುರುವಿಗೆ ಕಾವೇರಿ ಸಮಸ್ಯೆಯೇಕೆ ಕಾಣುತ್ತಿಲ್ಲಾ? ನಿಮ್ಮ ಪಕ್ಷದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಪ್ರಲ್ಹಾದ್ ಜೋಶಿ, BL ಸಂತೋಶ್ ರವರುಗಳು ಏಕೆ ಕಾವೇರಿ ವಿಚಾರವಾಗಿ ಮೌನ ತಾಳಿದ್ದಾರೆ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
