
ಮೈಸೂರು : ಕನ್ನಡಿಗರು ಕನ್ನಡ ಸಿನಿಮಾ ನೋಡಲ್ಲ, ಹೋರಾಟಕ್ಕೆ ಮಾತ್ರ ಕರೀತೀರಿ. ತಮಿಳು ಸಿನಿಮಾ ನೋಡ್ತೀರಿ, ಅವರನ್ನೇ ಹೋರಾಟಕ್ಕೆ ಕರೆಯಿರಿ ಎಂದು ಮೈಸೂರಿನ ಬನ್ನೂರಿನ ಕಾರ್ಯಕ್ರಮ ವೊಂದರಲ್ಲಿ ನಟ ದರ್ಶನ್ ದುರಂಹಕಾರದ ಮಾತುಗಳನ್ನಾಡಿದ್ಧಾರೆ.

ದರ್ಶನ್ ಹೋರಾಟಕ್ಕೆ ಬನ್ನಿ ಅಂದವರ ಮೇಲೆ ಗೂಬೆ ಕೂರಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ತಮಿಳು ಚಿತ್ರ ಕನ್ನಡಿಗರು ನೋಡಿದ್ರು. ಕರ್ನಾಟಕದಲ್ಲಿ ಆ ಚಿತ್ರದ ವಿತರಕರು 37 ಕೋಟಿ ಮಾಡಿಕೊಂಡ್ರು, ತಮಿಳರಿಗೆ ಲಾಭ ಕೊಟ್ಟು, ಕನ್ನಡ ಕಲಾವಿದರನ್ನು ಯಾಕೆ ಕರೀತೀರಿ? ತಮಿಳು ಸಿನಿಮಾಕ್ಕೆ 37 ಕೋಟಿ ಕೊಟ್ರಲ್ಲಾ ಅವರನ್ನೇ ಕರೆಯಿರಿ. ಕನ್ನಡಿಗರು ಸಿನಿಮಾ ಮಾಡಿದ್ರೆ ಅದನ್ನ ನೀವು ನೋಡಲ್ಲ ಎಂದಿದ್ದಾರೆ. ದರ್ಶನ್ ಮಾತು ಕೇಳಿ ಮಂಡ್ಯದ ರೈತರು ಅವಕ್ಕಾಗಿದ್ದಾರೆ.

ಮಾಧ್ಯಮದವರ ಕ್ಷಮೆ ಕೇಳಿದ ಬಳಿಕವೂ ಬದಲಾಗದ ದರ್ಶನ್ ವರ್ತನೆ. ಹೋರಾಟಗಾರರು ಕಾವೇರಿ ಚಳವಳಿಗೆ ಚಿತ್ರರಂಗದ ಸ್ಟಾರ್ ಗಳನ್ನು ಕರೆದಿದ್ದರು. ಜೋಡೆತ್ತು ಬಾರದಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ. ನಟ ದರ್ಶನ್ಗೆ ಕಾವೇರಿಗಿಂತ ಸಿನಿಮಾದ ಲಾಭನೇ ಮುಖ್ಯವಾಗೋಯ್ತಾ? ಇಷ್ಟು ದಿನ ಬೆಳೆಸಿದ ಕನ್ನಡಿಗರಿಗೆ ದರ್ಶನ್ ಕೊಡ್ತಿರೋ ಗೌರವ ಇಷ್ಟೇನಾ? ಕನ್ನಡಿಗರು ಕನ್ನಡ ಸಿನಿಮಾ ನೋಡದೆ ದರ್ಶನ್ ಇಷ್ಟೆಲ್ಲಾ ಸಂಪಾದಿಸಿದ್ರಾ
