
ಮುಸಲ್ಮಾನರ ಪ್ರಾರ್ಥನೆ ‘ಬಿಸ್ಮಿಲ್ಲಾ’ (ಸೃಷ್ಟಿಕರ್ತನ ನಾಮದಿಂದ, ಅಲ್ಲಾಹನ ನಾಮದಿಂದ )ಪಠಿಸಿ ಹಂದಿ ಮಾಂಸ ಸೇವಿಸಿದ ಟಿಕ್‌ಟಾಕ್ ಸ್ಟಾರ್ ಮಹಿಳೆಯೋರ್ವಳಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಇಂಡೋನೇಷ್ಯಾ (ಸೆ.21): ಇಸ್ಲಾಂ ಧರ್ಮದ ಪ್ರಾರ್ಥನೆ ‘ಬಿಸ್ಮಿಲ್ಲಾ’ (ಅಲ್ಲಾಹನ ನಾಮದಿಂದ )ಪಠಿಸಿ ಹಂದಿ ಮಾಂಸ ಸೇವಿಸಿದ ಟಿಕ್‌ಟಾಕ್ ಸ್ಟಾರ್ ಮಹಿಳೆಯೋರ್ವಳಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಹಂದಿ ಮಾಂಸ ಸೇವನೆ ಇಸ್ಲಾಂನಲ್ಲಿ ಹರಾಮ್ (ನಿಷೇಧಿತ) ಆಗಿದೆ. ಹೀಗಿದ್ದೂ ಲೀನಾ ಮುಖರ್ಜಿ ಎಂಬಾಕೆ ಮುಸ್ಲಿಂ ಪ್ರಾರ್ಥನೆ “ಬಿಸ್ಮಿಲ್ಲಾ” ಅನ್ನು ಓದಿದ ನಂತರ ಪೋರ್ಕ್ ಸೇವನೆ ಮಾಡಿದ್ದಾಳೆ. ಅಷ್ಟೇ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾಳೆ. ಈ ವಿಡಿಯೋ ಇಂಡೋನೇಷ್ಯಾದ ಬಾಲಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.

ಬಿಸ್ಮಿಲ್ಲಾ ಪಠಿಸಿ ಪೋರ್ಕ್ ಸೇವನೆ ಮಾಡಿರುವ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾದ 33 ವರ್ಷದ ಮಹಿಳೆ ಲೀನಾ ಮುಖರ್ಜಿ ಈ ವರ್ಷದ ಮಾರ್ಚ್‌ನಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿ ಲೀನಾ ಮುಖರ್ಜಿ ಹಂದಿ ಮಾಂಸ ತಿನ್ನುತ್ತಿದ್ದಾಳೆ ಅದಕ್ಕೂ ಮೊದಲು ಮುಸಲ್ಮಾನರ ಪವಿತ್ರ ಪ್ರಾರ್ಥನೆಯಾದ ಬಿಸ್ಮಿಲ್ಲಾ ಪಠಿಸಿದ್ದಾಳೆ. ಅಲ್ಲಾಹನ ಹೆಸರಿನಲ್ಲಿ ಹಂದಿಮಾಂಸ ಸೇವಿಸುತ್ತಿದ್ದೇನೆ ಎಂಬರ್ಥದಲ್ಲಿ ವಿಡಿಯೋ ಮಾಡಲಾಗಿದೆ. ಆದರೆ ಇಸ್ಲಾಂನಲ್ಲಿ ಹಂದಿಮಾಂಸ ಸೇವನೆ ಹರಾಮ್ ಆಗಿದೆ. ಇದು ಅವಳಿಗೆ ತಿಳಿದಿರಬೇಕಿತ್ತು ಎಂದು ಸಮುದಾಯ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

ಮಹಿಳೆಗೆ ಎರಡು ವರ್ಷಗಳ ಜೈಲು ಶಿಕ್ಷೆ
ತನ್ನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಮಹಿಳೆಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಪಾಲೆಂಬಾಂಗ್‌ನ ನ್ಯಾಯಾಲಯದಲ್ಲಿ “ಧಾರ್ಮಿಕ ವ್ಯಕ್ತಿಗಳು ಮತ್ತು ನಿರ್ದಿಷ್ಟ ಗುಂಪುಗಳ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಗುರಿಯನ್ನು ಹೊಂದಿರುವ ಮಾಹಿತಿಯನ್ನು ಹರಡಿದ” ಮಹಿಳೆಯು ತಪ್ಪಿತಸ್ಥಳೆಂದು ಕಂಡುಬಂದ ಹಿನ್ನೆಲೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ ಮಹಿಳೆ ನನಗೆ ಈ ಬಗ್ಗೆ ಏನು ಗೊತ್ತಿಲ್ಲವೆಂದು ಕ್ಷಮಿಸುವಂತೆ ಕೇಳಿಕೊಂಡಿದ್ದಾಳೆ.

