
ಬೆಂಗಳೂರು : ಅಭಿನವ ಹಾಲಶ್ರೀ ಒಂದೇ ದಿನದಲ್ಲಿ ಡೀಲ್ ಹಿಸ್ಟರಿಯನ್ನೇ ಬಾಯ್ಬಿಟ್ಟಿದ್ದಾರೆ. ಸಿಸಿಬಿ ಕೋರ್ಟ್ಗೆ ಸ್ವಾಮೀಜಿಯ ಸ್ಟೇಟ್ಮೆಂಟ್ ಸಲ್ಲಿಸುತ್ತಿದ್ದಾರೆ. ಅಷ್ಟಕ್ಕೂ ಡೀಲ್ನಲ್ಲಿ ಹಾಲಶ್ರೀ ಪಾಲೆಷ್ಟು ಗೊತ್ತಾ..? ಹಾಲಶ್ರೀ ಕೊಟ್ಟಿರುವ ಸ್ಟೇಟ್ಮೆಂಟ್ನಲ್ಲಿ ಏನಿದೆ ಗೊತ್ತಾ..? ಹಾಲಶ್ರೀ CCB ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆದಿದೆ.

ಹಾಲಶ್ರೀ ಪರಿಚಯಸ್ಥನ ಮನೆಯಲ್ಲಿ 50 ಲಕ್ಷ ಕ್ಯಾಶ್ , ಬೇನಾಮಿ ವ್ಯಕ್ತಿ ಹೆಸರಿನಲ್ಲಿ 1 ಕೋಟಿ ಮೌಲ್ಯದ ಭೂಮಿ ಖರೀದಿ ಮಾಡಲಾಗಿದೆ. ಹಾಲಶ್ರೀ ಡೀಲ್ನಲ್ಲಿ ಬಂದ ಹಣದಲ್ಲಿ ಹಿರೇಹಡಗಲಿಯ ಹಾಲ ಮಠದ ಬಳಿಯೇ ಬೇನಾಮಿ ಹೆಸರಲ್ಲಿ ಜಮೀನು ಮಾಡಿದ್ದಾರೆ. ಸ್ಥಳೀಯ ಪೊಲೀಸರು ಹಣ ಇಟ್ಟಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಕಸ್ಟಡಿಗೆ ಕೊಟ್ಟ ಕೂಡಲೇ ಹಿರೇಹಡಗಲಿಗೆ ಹಾಲಶ್ರೀಯನ್ನ ಕರೆದೊಯ್ಯಲಿದ್ದಾರೆ. CCB ಹಣ ಮತ್ತು ಆಸ್ತಿಯ ಪತ್ರವನ್ನು ವಶಕ್ಕೆ ಪಡೆದು ಮಹಜರ್ ಮಾಡಲಿದ್ದಾರೆ. CCB ಅಧಿಕಾರಿಗಳ ಮುಂದೆ ಹಾಲಶ್ರೀ ಸ್ವಯಂ ಹೇಳಿಕೆ ನೀಡಿದ್ದಾರೆ.

