
ದೆಹಲಿ : ಭಾರತದ ಹೊಸ ಸಂಸತ್ನಲ್ಲಿ ನಡೆದ ಕಲಾಪದ ಮೊದಲ ದಿನವಾದ ಇಂದು ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಿದ್ದು, ಇದನ್ನು ನಾರಿ ಶಕ್ತಿ ವಂದನ್ ಅಧಿನಿಯಂ ಎಂದು ಕರೆಯಲಾಗುವುದು. ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಸೇರಬೇಕೆಂದು ನಾವು ಬಯಸುತ್ತೇವೆ. ದೇಶದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿ ಪ್ರಕ್ರಿಯೆಯನ್ನು ಜಗತ್ತು ಗುರುತಿಸಿದೆ. ಇದು ಕ್ರೀಡೆಯಿಂದ ಸ್ಟಾರ್ಟ್ ಅಪ್‌ಗಳವರೆಗೆ ಜೀವನದ ವಿವಿಧ ಆಯಾಮಗಳಲ್ಲಿ ಭಾರತೀಯ ಮಹಿಳೆಯರು ನೀಡಿದ ಕೊಡುಗೆಗಳಿಗೆ ಸಾಕ್ಷಿಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
.jpeg)
ಭಾರತದ ಹೊಸ ಸಂಸತ್ನಲ್ಲಿ ಇಂದು ಪ್ರಧಾನಿ ಮೋದಿ ತಮ್ಮ ಮೊದಲ ಭಾಷಣದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಘೋಷಿಸಿದ್ದು, ಇದನ್ನು ‘ನಾರಿ ಶಕ್ತಿ ವಂದನ್ ಅಧಿನಿಯಂ’ ಎಂದು ಕರೆಯಲಾಗುವುದು ಎಂದು ಮೋದಿ ಹೇಳಿದ್ದಾರೆ. ನಾರಿಶಕ್ತಿ ವಂದನ್ ಅಧಿನಿಯಂ ಅನ್ನು ಪರಿಚಯಿಸುವ ಸಂದರ್ಭದಲ್ಲಿ ಪ್ರಧಾನಿಯವರು ಎಲ್ಲಾ ಶಾಸಕರಲ್ಲಿ ಒಮ್ಮತವನ್ನು ಕೇಳಿದ್ದಾರೆ.

ಹಳೇ ಸಂಸತ್ ಭವನಕ್ಕೆ ವಿದಾಯ ಹೇಳಿ ಇದೀಗ ಹೊಸ ಸಂಸತ್ ಭವನದಲ್ಲಿ ಅಧಿವೇಶನ ಆರಂಭಗೊಂಡಿದ್ದು, ಹೊಸ ಸಂಸತ್ ಭವನದ ಮೊದಲ ಅಧಿವೇಶನದಲ್ಲಿ ಪ್ರಧಾನಿ ಮೋದಿ ಮೊದಲ ಭಾಷಣ ಮಾಡಿದ್ದಾರೆ. ಈ ವೇಳೆ ಹೊಸ ಸಂಸತ್ ಭವನದ ವಿಶೇಷತೆ, ಸೆಂಗೋಲ್ ಪ್ರತೀಕ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಪ್ರಮುಖವಾಗಿ ಪ್ರಧಾನಿ ಮೋದಿ ಮಹಿಳಾ ಮೀಸಲಾತಿ ಬಿಲ್ ತರಲು ನಾವು ಬದ್ಧರಾಗಿದ್ದೇವೆ. ಮಹಿಳಾ ಸಬಲೀಕರ, ಮಹಿಳಾ ಸಶಕ್ತಿಕರಣಕ್ಕೆ ಮತ್ತಷ್ಟು ಶಕ್ತಿ ತುಂಬ ಕೆಲಸ ಮಾಡುವ ಅವಕಾಶ ನನಗೆ ಒಲಿದು ಬಂದಿದೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ ಕಾನೂನು ತರುವುದು ನನಗೆ ಒಲಿದ ಭಾಗ್ಯ ಎಂದು ಮೋದಿ ಹೇಳಿದ್ದಾರೆ. ಕಳೆದ 27 ವರ್ಷಗಳಲ್ಲಿ ಹಲವಾರು ಬಾರಿ ಮಸೂದೆಯನ್ನು ಮಂಡಿಸಲಾಗಿದೆ ಆದರೆ ಪದೇ ಪದೇ ಅದಕ್ಕೆ ತಡೆಯೊಡ್ಡಲಾಗಿತ್ತು.

ಮಹಿಳಾ ಮೀಸಲು ಮಹತ್ವ ?
- ಚುನಾಯಿತ ಪ್ರತಿನಿಧಿಗಳಲ್ಲಿ ಮಹಿಳೆಯರ ಕೊರತೆ
- ಮಹಿಳೆಯರಿಗೆ ಹೆಚ್ಚು ರಾಜಕೀಯ ಪ್ರಾತಿನಿಧ್ಯ ಸಿಗಲಿದೆ
- 543 MPಗಳ ಪೈಕಿ ಮಹಿಳೆಯರು 78 ಮಂದಿ ಇದ್ದಾರೆ
- ಒಟ್ಟಾರೆ ಲೆಕ್ಕಕ್ಕೆ ಬಂದರೆ ಇದು ಶೇ.15ರಷ್ಟು ಮಾತ್ರ
- ರಾಜ್ಯಸಭೆಯಲ್ಲೂ ಮಹಿಳಾ ಪ್ರಾತಿನಿಧ್ಯ ಶೇ.14ರಷ್ಟಿದೆ
- ಬಹುತೇಕ ರಾಜ್ಯಗಳಲ್ಲಿ ಮಹಿಳಾ ಪ್ರಾತಿನಿಧ್ಯ ಶೇ.10 ದಾಟಿಲ್ಲ
- ಆಂಧ್ರ, ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಗುಜರಾತ್
- ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ
- ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಒಡಿಶಾ, ಸಿಕ್ಕಿಂ
- ತಮಿಳುನಾಡು, ತೆಲಂಗಾಣ, ಪುದುಚೇರಿಯಲ್ಲಿ ಕಡಿಮೆ ಪ್ರಮಾಣ
- ಬಿಹಾರ, ಪಂಜಾಬ್ ಸೇರಿ ಹಲವು ರಾಜ್ಯಗಳಲ್ಲಿ ಶೇ.12ರಷ್ಟಿದೆ
- ಛತ್ತೀಸ್ಗಢ, ಪಶ್ಚಿಮ ಬಂಗಾಳ, ಜಾರ್ಖಂಡ್ನಲ್ಲಿ ಶೇ.15ರಷ್ಟಿದೆ
- ಶೇ.33ರಷ್ಟು ಮಹಿಳಾ ಶಾಸಕರು, ಸಂಸದರ ಆಯ್ಕೆ ಉದ್ದೇಶ ಬಿಲ್ನಲ್ಲಿದೆ
- ಕರ್ನಾಟಕದಲ್ಲಿ ಹಾಲಿ 10 ಮಂದಿ ಶಾಸಕಿಯರಿದ್ದಾರೆ
- ಶೇ.33ರಷ್ಟು ಮೀಸಲು ಜಾರಿಯಾದರೆ 74 ಮಹಿಳೆಯರು ಆಯ್ಕೆಯಾಗ್ತಾರೆ
- 28 ಲೋಕಸಭೆ ಕ್ಷೇತ್ರಗಳ ಪೈಕಿ 9 ಸ್ಥಾನ ಮಹಿಳೆಗೆ ಸಿಗಲಿದೆ
