Ashraf Kammaje |
Updated on:Sep 17, 2023 | 7:30 AM

ಬ್ರೆಜಿಲ್‌ನ ಉತ್ತರ ಅಮೆಜಾನ್ ರಾಜ್ಯದಲ್ಲಿ ಶನಿವಾರ ನಡೆದ ವಿಮಾನ ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜ್ಯದ ರಾಜಧಾನಿ ಮನೌಸ್‌ನಿಂದ ಸುಮಾರು 400 ಕಿಮೀ (248 ಮೈಲುಗಳು) ದೂರದಲ್ಲಿರುವ ಬಾರ್ಸೆಲೋಸ್ ಪ್ರಾಂತ್ಯದಲ್ಲಿ ಈ ಅಪಘಾತ ಸಂಭವಿಸಿದೆ.

ಬ್ರೆಜಿಲ್(Brazil)ನ ಉತ್ತರ ಅಮೆಜಾನ್(Amazon) ರಾಜ್ಯದಲ್ಲಿ ಶನಿವಾರ ನಡೆದ ವಿಮಾನ ಅಪಘಾತ (Plane Crash)ದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜ್ಯದ ರಾಜಧಾನಿ ಮನೌಸ್‌ನಿಂದ ಸುಮಾರು 400 ಕಿಮೀ (248 ಮೈಲುಗಳು) ದೂರದಲ್ಲಿರುವ ಬಾರ್ಸೆಲೋಸ್ ಪ್ರಾಂತ್ಯದಲ್ಲಿ ಈ ಅಪಘಾತ ಸಂಭವಿಸಿದೆ.

ಶನಿವಾರ ಬಾರ್ಸೆಲೋಸ್ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ 12 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸಾವಿಗೆ ಅಮೆಜನಾಸ್ನ ಗವರ್ನರ್ ವಿಲ್ಸನ್ ಲಿಮಾ ವಿಷಾಧ ವ್ಯಕ್ತಪಡಿಸಿದ್ದಾರೆ.
ಅಪಘಾತದಲ್ಲಿ ಯಾರೂ ಕೂಡ ಬದುಕುಳಿದಿಲ್ಲ ಎಂದು ಬ್ರೆಜಿಲ್ ಮಾಧ್ಯಮಗಳು ವರದಿ ಮಾಡಿವೆ. ರಾಜ್ಯದ ರಾಜಧಾನಿ ಮನೌಸ್‌ನಿಂದ ಬಾರ್ಸೆಲೋಸ್‌ಗೆ ಸುಮಾರು 90 ನಿಮಿಷಗಳ ಹಾರಾಟ ನಡೆಸಬೇಕಿತ್ತು

ಅಗತ್ಯ ನೆರವು ನೀಡಲು ನಮ್ಮ ತಂಡಗಳು ಕೆಲಸ ಆರಂಭಿಸಿವೆ ಎಂದು ಅಮೆಜಾನ್ ಗವರ್ನರ್ ತಿಳಿಸಿದ್ದಾರೆ. ಎಂಬ್ರೇರ್ ಪಿಟಿ-ಎಸ್‌ಒಜಿ ವಿಮಾನವು ಅಮೆಜಾನ್ ಮನೌಸ್‌ನಿಂದ ಹೊರಟಿತ್ತು. ಭಾರೀ ಮಳೆಯ ನಡುವೆಯೇ ವಿಮಾನ ಲ್ಯಾಂಡ್ ಆಗಲು ಯತ್ನಿಸಿದ್ದು, ಅಪಘಾತ ಸಂಭವಿಸಿ ವಿಮಾನದಲ್ಲಿದ್ದ 14 ಮಂದಿ ಸಾವನ್ನಪ್ಪಿದ್ದಾರೆ.

ಗೌಪ್ಯತೆಯ ಕಾರಣದಿಂದಾಗಿ ನಾವು ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಮನೌಸ್ ಏರೋಟ್ಯಾಕ್ಸಿ ಏರ್‌ಲೈನ್ ಹೇಳಿದೆ. ತನಿಖೆ ಮುಂದುವರೆದಂತೆ ಎಲ್ಲಾ ಅಗತ್ಯ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದೆ. ಮೃತಪಟ್ಟವರಲ್ಲಿ ಅಮೆರಿಕದ ನಾಗರಿಕರು ಕೂಡ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.