ನವದೆಹಲಿ: ಕೇಂದ್ರ ಸರಕಾರದ ಕೃಷಿ ಮಸೂದೆ ವಿರುದ್ಧ ರೈತ ಸಂಘಟನೆಗಳು ದೇಶದಾದ್ಯಂತ ಇಂದು ಬಂದ್ಗೆ ಕರೆ ಕೊಟ್ಟಿದೆ. ಸರಕಾರದ ಜೊತೆ ಹಲವು ಸುತ್ತಿನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಈ ಬಂದ್ಗೆ ಕರೆಕೊಡಲಾಗಿದೆ.
ವಿವಿಧ ರಾಜ್ಯಗಳಲ್ಲಿ ವಿವಿಧ ಸ್ವರೂಪಗಳಲ್ಲಿ ಬಂದ್ ನಡೆಯಲಿದ್ದು, ಮಂಗಳವಾರದಾದ್ಯAತ ಇದು ಮುಂದುವರಿಯಲಿದೆ. ಆದರೆ ದೆಹಲಿಯಲ್ಲಿ ರಸ್ತೆ ತಡೆ ಸಂಜೆ ಮೂರು ಗಂಟೆಯ ವೇಳೆಗೆ ಮಾತ್ರ ನಡೆಯಲಿದೆ ಎಂದು ಕ್ರಾಂತಿಕಾರಿ ಕಿಸಾನ್ ಸಂಘ ತಿಳಿಸಿದೆ.
ಇನ್ನು ಬಂದ್ಗೆ ಕಾಂಗ್ರೆಸ್ ಸಹಿತ ಹಲವು ಸಂಘ ಸಂಸ್ಥೆಗಳು, ಪಕ್ಷಗಳು ಬೆಂಬಲ ನೀಡಿದ್ದು, ಬಹುತೇಕ ದೇಶ ಸ್ಥಬ್ಧವಾಗುವ ಸಾಧ್ಯತೆ ಇದೆ.
