First Published Sep 7, 2023, 10:16 AM IST

ವಧುವಿನ ಕುಟುಂಬದಿಂದ ವರದಕ್ಷಿಣೆ ತೆಗೆದುಕೊಂಡು ಮದುವೆಯಾಗೋ ಸಂಪ್ರದಾಯದ ಬಗ್ಗೆ ನೀವು ಕೇಳಿರಬಹುದು. ಆದರೆ ಹದಿಹರೆಯದ ಹುಡುಗಿಯರನ್ನು ಬಿಡ್ಡಿಂಗ್ ಮೂಲಕ ಮದುವೆಯಾಗುವ ಮಾರುಕಟ್ಟೆಯನ್ನು ನೀವು ಎಂದಾದರೂ ನೋಡಿದ್ದೀರಾ?
ಪ್ರಪಂಚದಾದ್ಯಂತ ಅನೇಕ ರೀತಿಯ ಪದ್ಧತಿಗಳಿವೆ. ಅವುಗಳ ಬಗ್ಗೆ ಕೇಳಿ ಜನರು ಶಾಕ್ ಆಗ್ತಾರೆ. ಭಾರತದಲ್ಲಿಯೂ ಇಂಥ ಅನೇಕ ಪದ್ಧತಿಗಳ ಬಗ್ಗೆ ನೀವು ಕೇಳಿರಬಹುದು. ಅದರಲ್ಲೂ ವಿಚಿತ್ರ ಮದುವೆ ಸಂಪ್ರದಾಯಗಳ (wedding tradition) ಬಗ್ಗೆಯೂ ತಿಳಿದಿರಬಹುದು ಅಲ್ವಾ? ವಿಶ್ವದ ಅನೇಕ ದೇಶಗಳಲ್ಲಿ ಮಹಿಳೆಯರಿಗಾಗಿ ಬಹಳ ಸಂಪ್ರದಾಯವಾದಿ ಪದ್ಧತಿಗಳಿವೆ. ಅದರ ಬಗ್ಗೆ ಕೇಳಿದರೆ ನಿಮಗೆ ಆಘಾತವಾಗಬಹುದು. ಈ ಪದ್ಧತಿಗಳ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಅವುಗಳನ್ನು ನಿಲ್ಲಿಸಲಾಗುವುದಿಲ್ಲ ಅಥವಾ ಯಾರೂ ಅದರ ಬಗ್ಗೆ ತಪ್ಪಾಗಿ ಯೋಚಿಸೋದೂ ಇಲ್ಲ. .

ವಿಚಿತ್ರ ಮದುವೆಯ ಒಂದು ಪದ್ಧತಿ ಬಲ್ಗೇರಿಯಾದಲ್ಲಿದೆ, ಅಲ್ಲಿ ವಧುಗಳನ್ನು ಮಾರಲಾಗುತ್ತದೆ. ಈ ಪದ್ಧತಿಯು ಸುಮಾರು 3000 ವರ್ಷಗಳಷ್ಟು ಹಳೆಯದಾಗಿದ್ದು, ಇದು ಇಲ್ಲಿನ ನಗರಗಳಲ್ಲಿ ಇಂದಿಗೂ ನಡೆಯುತ್ತೆ . 20 ವರ್ಷದೊಳಗಿನ ಹುಡುಗಿಯರನ್ನು ಇಲ್ಲಿ ಬಿಡ್ ಮಾಡಲಾಗುತ್ತದೆ ಮತ್ತು ಹುಡುಗಿಯರನ್ನು ಅವರ ಕುಟುಂಬದ ಸದಸ್ಯರೇ ಬಿಡ್ (bid of bride) ಮಾಡ್ತಾರೆ ಅಂದ್ರೆ ನೀವು ನಂಬಲೇಬೇಕು.

ಒಂದು ನಿರ್ದಿಷ್ಟ ಸಮುದಾಯದ ಪದ್ಧತಿ
ಈ ಪದ್ಧತಿಯನ್ನು ಅನುಸರಿಸುವ ಕಲೈಡ್ಝಿ ಸಮುದಾಯವಿದೆ. ಅವರು ಈ ಪದ್ಧತಿಯ ಬಗ್ಗೆ ತುಂಬಾ ಹೆಮ್ಮೆಪಡುತ್ತದೆ. ಈ ಸಮುದಾಯವು ಮೂಲತಃ ತಾಮ್ರ ಮತ್ತು ಹಿತ್ತಾಳೆ ಶಿಲ್ಪಗಳನ್ನು ತಯಾರಿಸುವ ಕೆಲಸ ಮಾಡ್ತಾರೆ. ಅವರ ಪ್ರಕಾರ, ಈ ಪದ್ಧತಿಯು ಹುಡುಗರು ಮತ್ತು ಹುಡುಗಿಯರು ಇಬ್ಬರಿಗೂ ಪ್ರಯೋಜನಕಾರಿ. ಈ ಪದ್ಧತಿ ಮೂಲಕ, ಬಡ ಕುಟುಂಬಗಳ ಜನರು ತಮ್ಮ ಮಕ್ಕಳನ್ನು ಚೆನ್ನಾಗಿ ಮದುವೆಯಾಗಬಹುದು.

ಈ ಸಂಪ್ರದಾಯವನ್ನು ಅನುಸರಿಸುವ ಜನರನ್ನು ಬಲ್ಗೇರಿಯಾದ ರೋಮಾ ಜನರು ಎಂದೂ ಕರೆಯುತ್ತಾರೆ. ಈ ಸಮುದಾಯವು 12 ರಿಂದ 14ನೇ ಶತಮಾನಗಳಲ್ಲಿ ಬಲ್ಗೇರಿಯಾಕ್ಕೆ (Gypsy Bride Market) ವಲಸೆ ಬಂದಿತು. ಇನ್ನು ಹುಡುಗಿಯರನ್ನು ಸುಮ್ಮನೆ ಮಾರುವುದಿಲ್ಲ. ಹುಡುಗಿಯರನ್ನು ಮಾರಲು ತುಂಬಾ ಕಟ್ಟುನಿಟ್ಟಾದ ನಿಯಮಗಳಿವೆ.

ಸ್ವಂತ ಸಮುದಾಯವನ್ನು ಹೊರತುಪಡಿಸಿ ಬೇರೆ ಯಾವುದೇ ಸಮುದಾಯದ ಹುಡುಗನನ್ನು ಭೇಟಿಯಾಗಲು ಸಾಧ್ಯವಿಲ್ಲ.
ಪ್ರೇಮ ವಿವಾಹಗಳನ್ನು ಮಾಡಿಕೊಂಡಿರುವ ಹುಡುಗಿಯರನ್ನು ಬಹಿಷ್ಕರಿಸಲಾಗುತ್ತದೆ
ಹುಡುಗಿಯರು ತಮ್ಮ ಆಯ್ಕೆಯ ವರನನ್ನು ಆಯ್ಕೆ ಮಾಡದಂತೆ ಮತ್ತು ಅವರ ಕನ್ಯತ್ವಕ್ಕೆ ಯಾವುದೇ ಅಪಾಯವಾಗದಂತೆ ಇಂತಹ ನಿಯಮಗಳನ್ನು ಮಾಡಲಾಗಿದೆ. ಬಲ್ಗೇರಿಯಾದ ಈ ಸಮುದಾಯದಲ್ಲಿ, ಹುಡುಗಿಯರು ಕನ್ಯೆಯರಲ್ಲದಿದ್ದರೆ, ಅವರ ಮದುವೆ ಸರಿಯಾಗಿ ನಡೆಯುವುದಿಲ್ಲ ಮತ್ತು ಅವರ ಬೆಲೆ ಕಡಿಮೆ ಇರುತ್ತದೆ ಎಂದು ನಂಬಲಾಗಿದೆ.

ಹುಡುಗಿಯರಿಗಾಗಿ ಮಾಡಿದ ಕೆಲವು ನಿಯಮಗಳು ಇಲ್ಲಿವೆ, ಅವುಗಳನ್ನು ಈಗ ಪ್ರಪಂಚದಾದ್ಯಂತ ಸಂಪ್ರದಾಯವಾದಿ ಎಂದು ಪರಿಗಣಿಸಲಾಗುತ್ತದೆ. ಅವುಗಳ ಬಗ್ಗೆ ನೋಡೋಣ.
ಹುಡುಗಿಯರು ಯಾರೊಂದಿಗೂ ಡೇಟಿಂಗ್ ಮಾಡಬಾರದು.
12-13 ವರ್ಷದ ಬಾಲಕಿಯರನ್ನು ಶಾಲೆಯಿಂದ ಬಿಡಿಸಲಾಗುತ್ತದೆ. ಈಗ ಆ ವಯಸ್ಸನ್ನು ಸ್ವಲ್ಪ ಹೆಚ್ಚಿಸಲಾಗಿದೆ..
ಕುಟುಂಬ ಸದಸ್ಯರಿಲ್ಲದೆ ಹುಡುಗಿಯರು ಎಲ್ಲಿಯಾದರೂ ಹೋಗುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ.
ಯಾವುದೇ ಪುರುಷನೊಂದಿಗೆ ಸಂವಹನವನ್ನು (communication) ಹೆಚ್ಚಿಸಲು ಸಾಧ್ಯವಿಲ್ಲ.

ಸುಂದರ ಹುಡುಗಿಯರಿಗೆ ಲಕ್ಷಾಂತರ ವೆಚ್ಚವಾಗುತ್ತದೆ
ಈ ಮಾರುಕಟ್ಟೆಯಲ್ಲಿ, ಹುಡುಗಿಯರನ್ನು ಅವರ ವಯಸ್ಸು, ನೋಟ ಮತ್ತು ಆಕರ್ಷಣೆಯನ್ನು ನೋಡಿ ಬಿಡ್ ಮಾಡಲಾಗುತ್ತದೆ. ಅವರು ತುಂಬಾ ಹೆವಿ ಮೇಕಪ್ (Heavy Makeup Look) ಧರಿಸಬೇಕು ಮತ್ತು ಅವರ ಆಕಾರವನ್ನು ಉತ್ತಮವಾಗಿ ಕಾಣುವಂತೆ ಮಾಡುವ ಬಟ್ಟೆ ಧರಿಸಬೇಕು ಮತ್ತು ಅವರು ವರರನ್ನು ತಮ್ಮತ್ತ ಆಕರ್ಷಿಸಬಹುದು. ಅನೇಕ ಹುಡುಗಿಯರು ಇಲ್ಲಿ ವಿವಿಧ ರೀತಿಯ ವರ್ಣರಂಜಿತ ಮೇಕಪ್ನಲ್ಲಿ ಕಾಣಿಸಿಕೊಳ್ಳುತ್ತಾರೆ.

ಮಾರುಕಟ್ಟೆ ಉತ್ತಮವಾಗಿರಲಿ ಅಥವಾ ಇಲ್ಲದಿರಲಿ, ಆದರೆ ಸುಂದರ ಹುಡುಗಿಯರಿದ್ದರೆ, ಅವರಿಗೆ ಉತ್ತಮ ಬೆಲೆ ವಿಧಿಸಲಾಗುತ್ತದೆ. ಹುಡುಗನು ಹುಡುಗಿಯನ್ನು ಇಷ್ಟಪಟ್ಟ ನಂತರ, ಹುಡುಗಿಯ ಕುಟುಂಬವು ಹುಡುಗನ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತದೆ.

ಡೈಲಿ ಮೇಲ್ ಮತ್ತು ವೈಸ್ ಏಷ್ಯಾ ವರದಿಯ ಪ್ರಕಾರ, ಇಲ್ಲಿನ ಹುಡುಗಿಯರನ್ನು 6 ಲಕ್ಷದಿಂದ 98 ಲಕ್ಷ ರೂ.ಗೆ ಮಾರಲಾಗುತ್ತದೆ. ಬಡ ಕುಟುಂಬಗಳ ಹುಡುಗರು ಕಡಿಮೆ ಸುಂದರವಾದ ಹುಡುಗಿಯರನ್ನು ಆಯ್ಕೆ ಮಾಡುತ್ತಾರೆ ಇದರಿಂದ ಅವರು ಕಡಿಮೆ ಹಣದಲ್ಲಿಯೂ ತಮಗಾಗಿ ಉತ್ತಮ ಹೆಂಡತಿಯನ್ನು ಕಂಡುಕೊಳ್ಳಬಹುದು.