
ಗುರುಪುರ: ಅಡ್ಡೂರು ಸೆಂಟ್ರಲ್ ಕಮಿಟಿ (ರಿ.) ಆಶ್ರಯದಲ್ಲಿ ನೂತನ ಅಡ್ಡೂರು ಕಮ್ಯೂನಿಟಿ ಸೆಂಟರ್ ಸೆ.1 ರಂದು ಅಡ್ಡೂರಿನ ರಾಯಲ್ ವಿಲೇಜ್ ಬಳಿ ಇರುವ ಸಾರ ಸ್ಕ್ವೇರ್ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಳ್ಳಲಿದೆ.ಮಾದಕ ದ್ರವ್ಯ, ಡ್ರಗ್ಸ್ ವಿರುದ್ಧ ಜಾಗೃತಿ ಕಾರ್ಯಕ್ರಮ ಕೂಡಾ ಈ ಸಂದರ್ಭದಲ್ಲಿ ನಡೆಯಲಿದೆ

ಅಡ್ಡೂರು ಸೆಂಟ್ರಲ್ ಕಮಿಟಿ ಅಲ್ ಜುಬೈಲ್ ಘಟಕದ ಅಧ್ಯಕ್ಷ ಅಬ್ದುಲ್ ರಹಮಾನ್ ಕಮ್ಯೂನಿಟಿ ಸೆಂಟರ್ ಉದ್ಘಾಟಿಸಲಿರುವರು. ಮಕ್ಕಳ ಮನಶಾಸ್ತ್ರಜ್ಞೆ, ಶಿಕ್ಷಣ ತರಬೇತುದಾರೆ ಮತ್ತು ಪ್ರೇರಣಾತ್ಮಕ ಮಾತುಗಾರ್ತಿ ಡಾ.ರುಕ್ಷನಾ ಹಸನ್ ಅವರು ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಲಿರುವರು. ಕಾರ್ಯಕ್ರಮದಲ್ಲಿ ಅಡ್ಡೂರು ಸೆಂಟ್ರಲ್ ಕಮಿಟಿ ಪದಾಧಿಕಾರಿಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಕೆರಿಯರ್ ಗೈಡೆನ್ಸ್ ಅಸೆಸ್ ಮೆಂಟ್, ಸ್ಟಡಿ ಸ್ಕಿಲ್, ಮೋಟಿವೇಶನ್, ಪೇರೆಂಟಿಂಗ್, ಸಪೂರ್ಟಿವ್ ಸಿಸ್ಟಂ, ಸ್ಕಾಲರ್ ಶಿಪ್, ಗೋಲ್ ಸೆಟ್ಸ್ ಪ್ರೋಗ್ರಾಂಗಳನ್ನು ಹೊಂದಿರುವ ಅಡ್ಡೂರು ಕಮ್ಯೂನಿಟಿ ಸೆಂಟರ್ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳ ಕೌನ್ಸಿಲಿಂಗ್ ಕೂಡ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.

