
ವಿಜ್ಞಾನಿಗಳನ್ನು ನೋಡಲು ಬಂದಿದ್ದೇನೆ. ನನ್ನನ್ನು ಸ್ವಾಗತಿಸಲು ಶಿಷ್ಟಾಚಾರದ ಪ್ರಕಾರ ವಿಮಾನ ನಿಲ್ದಾಣಕ್ಕೆ ಬರೋದು ಬೇಡ ಎಂದು ಸಿಎಂ,ಡಿಸಿಎಂ ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ
ಬೆಂಗಳೂರು (ಆ.26): ಇಂದು ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಕಾಣುತ್ತಿರುವ ದೃಶ್ಯವನ್ನೇ ನಾನು ಗ್ರಿಸ್ ಹಾಗೂ ಜೊಹಾನ್ಸ್‌ಬರ್ಗ್‌ನಲ್ಲಿ ಕಂಡಿದ್ದೇನೆ. ಇಲ್ಲಿ ಬೆಂಗಳೂರಿಗರು ಉತ್ಸಾದಿಂದ ಬಂದಿದ್ದೇನೆ. ಇದು ಭವಿಷ್ಯವನ್ನು ನೋಡುವವರು ಸಂಭ್ರಮಿಸುವ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಇಲ್ಲಿ ಶಿಷ್ಟಾಚಾರದ ಪಾಲನೆ ಮಾಡುವ ಅಗತ್ಯವಿಲ್ಲ ಎಂದು ನಾನೇ ಇಲ್ಲಿನ ಸಿಎಂ ಹಾಗೂ ಡಿಸಿಎಂ, ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದೆ ಎಂದು ಹೇಳಿದರು. ಇಲ್ಲಿ ವಿಜ್ಞಾನಿಗಳನ್ನು ನೋಡುವುದು ನನ್ನ ಉದ್ದೇಶ. ಶಿಷ್ಟಾಚಾರದ ಅಗತ್ಯ ಬೇಡ ಎಂದಾಗ ಸಿಎಂ ಹಾಗೂ ಡಿಸಿಎಂ ಕೂಡ ಇದಕ್ಕೆ ಸಹಯೋಗ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಎಚ್‌ಎಚ್‌ಎಲ್ ವಿಮಾನ ನಿಲ್ದಾಣದಲ್ಲಿ 10 ನಿಮಿಷದ ಭಾಷಣದಲ್ಲಿ ಹೇಳಿದ್ದಾರೆ.

ಗ್ರೀಸ್, ಜೊಹಾನ್ಸ್‌ಬರ್ಗ್‌ನಲ್ಲಿ ಕಂಡ ದೃಶ್ಯಗಳೇ ಬೆಂಗಳೂರಿನಲ್ಲಿ ಕಾಣುತ್ತಿದ್ದೇನೆ. ಭಾರತೀಯರು ಮಾತ್ರವಲ್ಲ, ವಿಜ್ಞಾನದಲ್ಲಿ ವಿಶ್ವಾವಿಟ್ಟವರು, ಭವಿಷ್ಯವನ್ನು ನೋಡುವವರು, ಮಾನವತೆಗೆ ಸಮರ್ಪಿತರಾದ ಎಲ್ಲಾ ವ್ಯಕ್ತಿಗಳಿಗೂ ವಿಶ್ವಾಸ ತುಂಬಿ ಹೋಗಿದೆ. ನೀವು ಇಷ್ಟು ಬೆಳಗ್ಗೆ ಇಲ್ಲಿಗೆ ಬಂದಿದ್ದೀರಿ. ಭಾರತಕ್ಕೆ ಯಾವಾಗ ಅದರಲ್ಲೂ ಮೊದಲು ಬೆಂಗಳೂರಿಗೆ ಯಾವಾಗ ಹೋಗುತ್ತೇನೆ ನನಗೆ ಅನಿಸಿಬಿಟ್ಟಿತ್ತು. ಮೊಟ್ಟಮೊದಲಿಗೆ ಆ ವಿಜ್ಞಾನಿಗಳಿಗೆ ನಾನು ನಮಿಸುತ್ತೇನೆ. ಇಷ್ಟು ದೂರದಿಂದ ಬಂದಾಗ, ಕೆಲವು 5-10 ನಿಮಿಷ ಆಕಡೆ ಈಕಡೆ ಆಗುತ್ತಿದೆ. ನಾನು ಬೆಂಗಳೂರಿಗೆ ಬರುವಾಗಲೇ ಸಿಎಂ, ಡಿಸಿಎಂ ಹಾಗೂ ರಾಜ್ಯಪಾಲರಿಗೆ ನಾನು ಮನವಿ ಮಾಡಿದ್ದೆ. ಇಸ್ರೋಗೆ ವಿಜ್ಞಾನಿಗಳನ್ನು ಭೇಟಿ ಮಾಡುವ ನಿಟ್ಟಿನಲ್ಲಿ ನಾನು ಬೆಳಗ್ಗೆಯೇ ಬೆಂಗಳೂರಿಗೆ ಬರುತ್ತಿದ್ದೇನೆ. ಈ ಹಂತದಲ್ಲಿ ಅಷ್ಟು ಬೇಗ ನೀವು ಶಿಷ್ಟಾಚಾರದ ಪ್ರಕಾರ ಬರೋದು ಬೇಡ ಎಂದು ಹೇಳಿದ್ದೆ. ವಿಜ್ಞಾನಿಗಳನ್ನು ಮಾತನಾಡಿಸಿ ನಾನು ದೆಹಲಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದೆ ಎಂದಿದ್ದಾರೆ.
ಬೆಂಗಳೂರಿನ ನಾಗರಿಕರು ಈಗಲೂ ಕೂಡ, ಚಂದ್ರಯಾನದ ಆ ಕ್ಷಣವನ್ನು ಇಂದಿಗೂ ಅನುಭವಿಸಿಕೊಂಡು ಬದುಕುತ್ತಿದ್ದಾರೆ. ಇಷ್ಟು ಬೆಳಗ್ಗೆ ನನ್ನನ್ನು ಸ್ವಾಗತಿಸಲು ಇಷ್ಟು ಚಿಕ್ಕ ಚಿಕ್ಕ ಮಕ್ಕಳು ಕೂಡ ಬಂದಿದ್ದಾರೆ. ಇದು ಭಾರತದ ಭವಿಷ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

