
Kullu Landslide: ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕುಲುವಿನಲ್ಲಿ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿದ್ದ 8 ರಿಂದ 9 ಕಟ್ಟಡಗಳು ಕುಸಿದು ಬಿದ್ದಿವೆ.
- ಕುಲುವಿನಲ್ಲಿ ಭೀಕರ ಭೂಕುಸಿತ
- 8 ರಿಂದ 9 ಕಟ್ಟಡಗಳು ಕುಸಿದು ಬಿದ್ದಿವೆ.
- ಭಯಾನಕ ವಿಡಿಯೋ ಇಲ್ಲಿದೆ
Kullu Landslide: ಹಿಮಾಚಲ ಪ್ರದೇಶದ ಕುಲುವಿನಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಹಲವು ಮನೆಗಳು ಕುಸಿದಿವೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕುಲುವಿನಲ್ಲಿ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿದ್ದ 8 ರಿಂದ 9 ಕಟ್ಟಡಗಳು ಕುಸಿದು ಬಿದ್ದಿವೆ. ಒಂದು ವಾರದ ಹಿಂದೆ ಆಡಳಿತ ಮಂಡಳಿ ಈ ಕಟ್ಟಡಗಳನ್ನು ತೆರವು ಮಾಡಿದ್ದರಿಂದ ಅವಘಡದ ಸಂದರ್ಭದಲ್ಲಿ ಯಾರೂ ಈ ಕಟ್ಟಡಗಳಲ್ಲಿ ಇರಲಿಲ್ಲ ಎನ್ನುವುದು ಸಮಾಧಾನಕರ ಸಂಗತಿ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭೂಕುಸಿತ ಉಂಟಾಗಿ ಈ ಅವಘಡ ಸಂಭವಿಸಿದೆ.

ಈ ದಿನಗಳಲ್ಲಿ ಹಿಮಾಚಲ ಪ್ರದೇಶ ಮಳೆಯಾಗುತ್ತಿದ್ದು, ಅಲ್ಲಿನ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆ ಸೃಷ್ಟಿಸಿರುವ ಅನಾಹುತದಿಂದ ಆತಂಕ ಎದುರಾಗಿದೆ. ಇಲ್ಲಿನ ಸಿರಾಜ್ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಹಲವು ಮನೆಗಳು ಕೊಚ್ಚಿ ಹೋಗಿವೆ. ಇದೇ ವೇಳೆ ಕಂಗ್ರಾದ ಕೋಟ್ಲಾದಲ್ಲೂ ಪ್ರಕೃತಿ ವಿಕೋಪ ಸೃಷ್ಟಿಸಿದೆ. ಇದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಭೂಕುಸಿತದ ನಂತರ ಪರ್ವತಗಳಿಂದ ಹರಿಯುವ ಅವಶೇಷಗಳಿಂದಾಗಿ ಸಾಕಷ್ಟು ಮನೆಗಳು ಹಾನಿಗೊಳಗಾಗಿವೆ.
