ಆ ದಿನ ಬಂದೇ ಬಿಟ್ಟಿದೆ. ಚಂದ್ರಯಾನ-3 ಯೋಜನೆಯ ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ನೆಲಕ್ಕಿಳಿದು ಇತಿಹಾಸ ಬರೆಯಲು ಸನ್ನದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಂಜೆ 6.04 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಕಾಲೂರಲಿದೆ.
| Edited By: Ashraf Kammaje
Updated on: Aug 23, 2023 | 8:10 AM

Chandrayaan-3: ಚಂದ್ರನ ಗುಳಿ ಕೆನ್ನೆಗೆ ವಿಕ್ರಮ್ ಲ್ಯಾಂಡರ್ ಮುತ್ತಿಕ್ಕಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಇಡೀ ವಿಶ್ವದ ಚಿತ್ತ ಭಾರತದತ್ತ ನೆಟ್ಟಿದೆ. ಚಂದಿರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗೋ ಮೂಲಕ ಹೊಸ ಇತಿಹಾಸ ನಿರ್ಮಿಸಲಿದೆ. ಈ ನಡುವೆಯೇ ದೇಶಾದ್ಯಂತ ಮಂದಿರ-ಮಸೀದಿಗಳಲ್ಲಿ ಪ್ರಾರ್ಥನೆ ನಡೆಯುತ್ತಿದೆ.

ಆ ದಿನ ಬಂದೇ ಬಿಟ್ಟಿದೆ. ಚಂದ್ರಯಾನ-3 ಯೋಜನೆಯ ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ನೆಲಕ್ಕಿಳಿದು ಇತಿಹಾಸ ಬರೆಯಲು ಸನ್ನದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಂಜೆ 6.04 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಕಾಲೂರಲಿದೆ. ತನ್ಮೂಲಕ ಅಲ್ಲಿಗೆ ತಲುಪಿದ ಮೊದಲ ದೇಶ ಎಂಬ ಶ್ರೇಯಕ್ಕೆ ಪಾತ್ರವಾಗಲಿದೆ. ಯೋಜನೆಯ ಹೊಣೆ ಹೊತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 140 ಕೋಟಿ ಭಾರತೀಯರ ಜೊತೆ ಈ ರೋಚಕ ಕ್ಷಣಕ್ಕಾಗಿ ಉಸಿರು ಬಿಗಿಹಿಡಿದು ಕಾದಿದ್ದರೆ, ಇಡೀ ವಿಶ್ವ ಭಾರತದತ್ತ ಕುತೂಹಲದ ದೃಷ್ಟಿ ನೆಟ್ಟಿದೆ.
- 600 ಕೋಟಿ: ಚಂದ್ರಯಾನ-3 ಯೋಜನೆ ಕೈಗೊಳ್ಳಲು ಇಸ್ರೋಗೆ ತಗುಲಿದ ವೆಚ್ಚ
- ನಂ.4: ಲ್ಯಾಂಡರ್ ಇಳಿಕೆ ಯಶಸ್ವಿಯಾದರೆ ಚಂದ್ರನ ನೆಲಕ್ಕಿಳಿದ 4ನೇ ದೇಶ ಭಾರತ
- ನಂ.1: ಅಲ್ಲದೆ, ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಆಗಲಿದೆ ಭಾರತ
- 41 ದಿನ: ಜು.14ಕ್ಕೆ ಭೂಮಿಯಿಂದ ಜಿಗಿದು 41 ದಿನ ಪಯಣಿಸಿರುವ ಚಂದ್ರಯಾನ ನೌಕೆ
- 3.84 ಲಕ್ಷ ಕಿಮೀ: ಕಳೆದ 41 ದಿನಗಳಲ್ಲಿ ಚಂದ್ರಯಾನ-3 ಕ್ರಮಿಸಿರುವ ಒಟ್ಟಾರೆ ದೂರ
- 1758 ಕೆ.ಜಿ.: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿರುವ ವಿಕ್ರಂ ಲ್ಯಾಂಡರ್‌ನ ತೂಕ
- 26 ಕೆ.ಜಿ.: ಚಂದ್ರನ ನೆಲದ ಮೇಲೆ 14 ದಿನ ಓಡಾಡಲಿರುವ ಪ್ರಜ್ಞಾನ್ ರೋವರ್ ತೂಕ
- 5 ಉಪಕರಣ: ಲ್ಯಾಂಡರ್, ರೋವರಲ್ಲಿರುವ 5 ಉಪಕರಣ ಬಳಸಿ ಚಂದ್ರನ ಅಧ್ಯಯನ
ಇಳಿಕೆ ಸವಾಲು ಏಕೆ?
- ಚಂದ್ರನಿಂದ 30 ಕಿ.ಮೀ. ಎತ್ತರದಲ್ಲಿ ಹಾರುತ್ತಿದ್ದಾಗ ಅಡ್ಡಲಾಗಿ ಇರುತ್ತದೆ ವಿಕ್ರಂ ಲ್ಯಾಂಡರ್
- ಆದರೆ, ಕೆಳಕ್ಕಿಳಿಯುವಾಗ ಲ್ಯಾಂಡರ್ ನೇರಗೊಳ್ಳಬೇಕು. ಇದು ಅತ್ಯಂತ ಕ್ಲಿಷ್ಟವಾದ ಪ್ರಕ್ರಿಯೆ
- ಲ್ಯಾಂಡರ್‌ನ 4 ಎಂಜಿನ್ ಬಳಸಿ ವೇಗ ತಗ್ಗಿಸಿ, ಇತರೆ 8 ಎಂಜಿನ್ ಬಳಸಿ ದಿಕ್ಕು ಬದಲಿಸಬೇಕು
- ಎಂಜಿನ್, ಇಂಧನ ಬಳಕೆ, ದೂರ ಲೆಕ್ಕಾಚಾರ, ಎಲ್ಲ ಉಪಕರಣಗಳ ಸುಸ್ಥಿತಿ ಪಕ್ಕಾ ಆಗಿರಬೇಕು
- 2 ರೀತಿಯ ಬ್ರೇಕಿಂಗ್, ಲ್ಯಾಂಡಿಂಗ್ ಸ್ಥಳ ಪರಿಶೀಲನೆ ಬಳಿಕ ಅಂತಿಮವಾಗಿ ನೆಲಕ್ಕಿಳಿಯಬೇಕು
- ಯಾವುದೇ ಹಂತದಲ್ಲಿ ತುಸು ವ್ಯತ್ಯಾಸ ಉಂಟಾದರೂ ಲ್ಯಾಂಡಿಂಗ್ ಪ್ರಕ್ರಿಯೆ ಬುಡಮೇಲು
- ಹಾಗಾಗಿಯೇ ಈ ಪ್ರಕ್ರಿಯೆಯನ್ನು ಇಸ್ರೋ ‘ಆತಂಕದ 20 ನಿಮಿಷ’ ಎಂದು ಬಣ್ಣಿಸಿರುವುದು
ಇಂದು ಆಗದಿದ್ದರೆ 27ಕ್ಕೆ ಮರುಯತ್ನ
ಒಂದು ವೇಳೆ, ಅನಿರೀಕ್ಷಿತ ಕಾರಣದಿಂದ ಬುಧವಾರ ಸಂಜೆ ಚಂದ್ರನ (Moon)ಮೇಲೆ ಇಳಿಯುವ ಪ್ರಕ್ರಿಯೆ ನಡೆಸಲು ಸಾಧ್ಯವಾಗದಿದ್ದರೆ, ಆ.27ರ ಭಾನುವಾರದಂದು ಮರು ಯತ್ನ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.