
ಗಾಂಧಿನಗರ: ವೀಸಾ (Visa) ಅವಧಿ ಮುಗಿದ ಬಳಿಕವೂ ಗುಜರಾತ್ನಲ್ಲಿ (Gujarat) ಅಕ್ರಮವಾಗಿ ನೆಲೆಸಿದ್ದ ಹಿಂದೂ (Hindu) ಸಮುದಾಯದ 45 ಪಾಕಿಸ್ತಾನದ ಪ್ರಜೆಗಳನ್ನು (pakistani) ಬಂಧಿಸಲಾಗಿದೆ.

ಗುಜರಾತ್ನ ಬನಸ್ಕಾಂತದಲ್ಲಿ ಪಾಕಿಸ್ತಾನಿ ಪ್ರಜೆಗಳ ವೀಸಾ ಮುಗಿದಿದ್ದು, ಅವರು ನಂತರ ದೀರ್ಘಾವಧಿಯ ವೀಸಾಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದನ್ನು ತಿರಸ್ಕರಿಸಲಾಗಿದ್ದು, ಅಕ್ರಮವಾಗಿ ನೆಲೆಸಿರುವುದಕ್ಕೆ 45 ಪಾಕಿಸ್ತಾನಿ ಹಿಂದೂಗಳನ್ನು ಬಂಧಿಸಲಾಗಿದೆ.

ಪಾಕಿಸ್ತಾನಿ ಪ್ರಜೆಗಳನ್ನು ಅಕೋಲಿ ಗ್ರಾಮದಿಂದ ಬಂಧಿಸಲಾಗಿದೆ. ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸ್ಥಳೀಯ ಗುಪ್ತಚರ ಬ್ಯೂರೋ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್ ಧೋಬಿ ತಿಳಿಸಿದ್ದಾರೆ

ವರದಿಗಳ ಪ್ರಕಾರ ಈ ಪಾಕಿಸ್ತಾನಿ ಪ್ರಜೆಗಳು ಉತ್ತರಾಖಂಡದ ಹರಿದ್ವಾರಕ್ಕೆ ಭೇಟಿ ನೀಡಲು ಭಾರತಕ್ಕೆ ಆಗಮಿಸಿದ್ದರು. ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಬಳಿಕ ಅವರು ಬನಸ್ಕಾಂತಕ್ಕೆ ಬಂದರು. ಅವರು ಮಾನ್ಯ ವೀಸಾದಲ್ಲಿ ಕಳೆದ 2 ತಿಂಗಳಿನಿಂದ ಭಾರತದಲ್ಲಿದ್ದರು. ಪ್ರಸ್ತುತ ಅವರ ವೀಸಾಗಳ ಅವಧಿ ಮುಗಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ