
ನೂತನ ಅಧ್ಯಕ್ಷರಾಗಿ ಉಸ್ಮಾನ್ ಗುರುಪುರ ಆಯ್ಕೆ
ಸುರತ್ಕಲ್: ಆಗಸ್ಟ್ 18 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ 2021-2024 ಸಾಲಿನ ಮಧ್ಯಂತರ ಕ್ಷೇತ್ರ ಪ್ರತಿನಿಧಿಗಳ ಸಭೆಯು ನಿರ್ಗಮಿತ ಅಧ್ಯಕ್ಷರಾದ ಯಾಸೀನ್ ಅರ್ಕುಳ ರವರ ಅಧ್ಯಕ್ಷತೆಯಲ್ಲಿ ಚೊಕ್ಕಬೆಟ್ಟುವಿನ ಎಂ.ಜೆ.ಎಂ ಹಾಲ್ ನಲ್ಲಿ ನಡೆಯಿತು.

ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆಯವರು ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆಯನ್ನು ನೇತೃತ್ವ ವಹಿಸಿ ನಡೆಸಿಕೊಟ್ಟರು.

2021-2023ರ ಪಕ್ಷದ ಬಲವರ್ಧನೆ, ಕ್ಷೇತ್ರ ವ್ಯಾಪ್ತಿಯ ಪಕ್ಷದ ಚಟುವಟಿಕೆಯ ಬಗ್ಗೆ ಪ್ರತಿನಿಧಿಗಳು ಮುಂದಿಟ್ಟು ಕಳೆದ ಎರಡೂವರೆ ವರ್ಷಗಳಿಂದ ಪಕ್ಷದ ಕಾರ್ಯಚಟುವಟಿಕೆಯ ಬಗ್ಗೆ ವರದಿಯನ್ನು ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಝರ್ ಉಳಾಯಿಬೆಟ್ಟು ರವರು ಮಂಡಿಸಿದರು.

ಕಾರಣಾಂತರಗಳಿಂದ ತೆರವಾಗಿದ್ದ ಸ್ಧಾನಕ್ಕೆ ಆಂತರಿಕ ಚುನಾವಣೆಯ ಮೂಲಕ ಕ್ಷೇತ್ರದ ಸಮಿತಿಯನ್ನು ಪುನರ್ ರಚಿಸಲಾಯಿತು.
ಈ ಮೂಲಕ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಉಸ್ಮಾನ್ ಗುರುಪುರ, ಉಪಾಧ್ಯಕ್ಷರಾಗಿ ನಾಸಿರ್ ಉಳಾಯಿಬೆಟ್ಟು, ಕಾರ್ಯದರ್ಶಿಯಾಗಿ ಅಝರ್ ಉಳಾಯಿಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಅಝರ್ ಚೊಕ್ಕಬೆಟ್ಟು, ಸಿದ್ದೀಕ್ ಅಂಗರಗುಂಡಿ ಕೋಶಾಧಿಕಾರಿಯಾಗಿ ನೌಶಾದ್ ಚೊಕ್ಕಬೆಟ್ಟು ಹಾಗೂ ಸಮಿತಿ ಸದಸ್ಯರಾಗಿ ಯಾಸೀನ್ ಅರ್ಕುಳ, ನೂರುಲ್ಲ ಕುಳಾಯಿ, ಫಯಾಝ್ ಕಾಟಿಪಳ್ಳ, ಸಂಶುದ್ದೀನ್ ಕೃಷ್ಣಾಪುರ, ಇರ್ಫಾನ್ ಕಾನ ಆಯ್ಕೆಯಾದರು.

ಈ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್ ಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ- ಉಪಾಧ್ಯಕ್ಷರಿಗೆ ಸನ್ಮಾನಿಸಲಾಯಿತು
ಸಭೆಯಲ್ಲಿ SDPI ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಕ್ಷೇತ್ರ ವ್ಯಾಪ್ತಿಯ ಬ್ಲಾಕ್ ಪದಾಧಿಕಾರಿಗಳು, ಕ್ಷೇತ್ರ ಸಮಿತಿಯ ನಾಯಕರು ಈ ಸಂದರ್ಭದಲ್ಲಿ ಉಪಸ್ಧಿತರಿದ್ದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮಿತಿ ಸದಸ್ಯರಾದ ಇರ್ಫಾನ್ ಕಾನ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.