
ಆರ್‌ಎಸ್‌ಎಸ್ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವಲ್ಲ. ಆರ್‌ಎಸ್‌ಎಸ್ ಎಂದರೆ ಬರೀ ಸುಳ್ಳನ್ನೇ ಪ್ರಚಾರ ಮಾಡುವ ರಾಷ್ಟ್ರೀಯ ಸುಳ್ಳುಗಾರರ ಸಂಘವಾಗಿದೆ.
ಮೈಸೂರು (ಆ.17): ದೇಶದಲ್ಲಿ ಸಂಘಟನೆಗೆ ಆರ್‌ಎಸ್‌ಎಸ್ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವಲ್ಲ. ಆರ್‌ಎಸ್‌ಎಸ್ ಎಂದರೆ ಬರೀ ಸುಳ್ಳನ್ನೇ ಪ್ರಚಾರ ಮಾಡುವ ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದು ಪ್ರೊಫೆಸರ್ ಕೆ.ಎಸ್. ಭಗವಾನ್ ಹೇಳಿದ್ದಾರೆ.
ಮೈಸೂರಿನಲ್ಲಿ ಗುರುವಾರ ನಡೆದ ಮಹಿಷ ದರಸಾ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಆರ್‌ಎಸ್‌ಎಸ್ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವಲ್ಲ. ಅದರ ಬದಲಾಗಿ ಅದು ರಾಷ್ಟ್ರೀಯ ಸುಳ್ಳುಗಾರರ ಸಂಘ. ಬರೀ ಸುಳ್ಳನ್ನೇ ಪ್ರಚಾರ ಮಾಡುವ ಸಂಘ ಆರ್‌ಎಸ್‌ಎಸ್ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಇದಕ್ಕಿಂತ ಮೊದಲು ಮಾತನಾಡಿದ ಪ್ರೊಫೆಸರ್ ಮಹೇಶ್ ಚಂದ್ರಗುರು ಅವರು, ರಾಜ್ಯದಲ್ಲಿ ಹಿಂದುತ್ವ ವಾದಿಗಳು ಮಹಿಷ ದಸರಾ ಆಚರಣೆಯನ್ನು ವಿರೋಧಿಸುತ್ತಿದ್ದಾರೆ. ಸಂಘ ಪರಿವಾರದವರು ಸೃಷ್ಟಿ ಮಾಡುವ ಸುಳ್ಳಿನ ಸರಮಾಲೆಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಮಹಿಷ ಪ್ರಾಧಿಕಾರ ರಚನೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಮಹಿಷ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ಗುಲ್ಬರ್ಗ, ಮೈಸೂರು, ಬೆಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ಇತರ ವಿಶ್ವವಿದ್ಯಾಲಯಗಳಲ್ಲಿ ಮಹಿಷ ಅಧ್ಯಯನ ಪೀಠ ಸ್ಥಾಪನೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

ಇನ್ನು ಮಹಿಷ ಬೌದ್ಧನಾಗಿದ್ದಾನೆ. ಹೀಗಾಗಿ ಮಹಿಷ ಬೌದ್ಧ ದಸರಾವನ್ನು ಆಚರಿಸುತ್ತೇವೆ. ಈ ಮೂಲಕ ವಿರೋಧಿಸುವವರಿಗೆ ತಕ್ಕ ಉತ್ತರ ಕೊಡುತ್ತೇವೆ. ಸಂಸದ ಪ್ರತಾಪ್ ಸಿಂಹ ಕಟ್ಟರ್ ಹಿಂದುತ್ವವಾದಿ ಆಗಿದ್ದಾರೆ. ನಾವು ಮನವತಾ ವಾದಿಗಳು. ಮನವತಾವಾದಿಗಳಾಗಿರುವ ನಮ್ಮ ಮುಂದೆ ಕಟ್ಟರ್ ಹಿಂದುತ್ವ ವಾದಿ ಪ್ರತಾಪ್ ಸಿಂಹ ಆಟ ನಡೆಯುವುದಿಲ್ಲ. ರಾಜ್ಯದಲ್ಲಿರುವುದು ಅಹಿಂದ ಪರವಾದ ಸರ್ಕಾರವಲ್ಲ, ಇದು ಮೇಲ್ವರ್ಗದ ಪರವಾದ ಸರ್ಕಾರ ಎಂದು ಟೀಕೆ ಮಾಡಿದರು
