Edited By: Ashraf kammaje
Updated on: Aug 13, 2023 | 9:06 PM

Mangaluru News: ಎಂಡಿಎಂಎ ಸಾಗಿಸುತ್ತಿದ್ದ ಕುಖ್ಯಾತ ಡ್ರಗ್ ಪೆಡ್ಲರ್ ಸೇರಿ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದು, 9 ಲಕ್ಷ ರೂಪಾಯಿ ಮೌಲ್ಯದ 170 ಗ್ರಾಂ ಎಂಡಿಎಂಎ, ರಿಟ್ಜ್ ಕಾರು, 6 ಮೊಬೈಲ್, ಡಿಜಿಟಲ್ ಮಾಪಕ ವಶಕ್ಕೆ ಪಡೆಯಲಾಗಿದೆ.
ಮಂಗಳೂರು, ಆಗಸ್ಟ್ 13: ಎಂಡಿಎಂಎ (MDMA)ಸಾಗಿಸುತ್ತಿದ್ದ ಕುಖ್ಯಾತ ಡ್ರಗ್ ಪೆಡ್ಲರ್ ಸೇರಿ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದು, 9 ಲಕ್ಷ ರೂಪಾಯಿ ಮೌಲ್ಯದ 170 ಗ್ರಾಂ ಎಂಡಿಎಂಎ, ರಿಟ್ಜ್ ಕಾರು, 6 ಮೊಬೈಲ್, ಡಿಜಿಟಲ್ ಮಾಪಕ ವಶಕ್ಕೆ ಪಡೆಯಲಾಗಿದೆ. ಮೂಡುಶೆಡ್ಡೆಯ ಇಮ್ರಾನ್, ಮಂಜನಾಡಿಯ ಅಬ್ದುಲ್ ಬಶೀರ್ ಅಬ್ಬಾಸ್, ಉಡುಪಿಯ ಬಡಗಬೆಟ್ಟು ನಿವಾಸಿ ಅಮ್ಜತ್ ಖಾನ್ ಬಂಧಿತರು. ಬೆಂಗಳೂರಿನಲ್ಲಿ MDMA ಖರೀದಿಸಿ ಮಂಗಳೂರಿಗೆ ತಂದಿದ್ದು, ಬೊಂದೆಲ್ ಪಡುಶೆಡ್ಡೆ ಪ್ರದೇಶದಲ್ಲಿ ಮಾರಾಟಕ್ಕೆ ಯತ್ನಿಸಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಸಿಸಿಬಿ ಪೊಲೀಸರಿಂದ ಹುಡುಕಾಟ ನಡೆಸಲಾಗುತ್ತಿದೆ. ಕ್ರಿಮಿನಲ್ ಹಿನ್ನೆಲೆಯ ಇಮ್ರಾನ್ ವಿರುದ್ಧ ಈಗಾಗಲೇ 9 ಕೇಸ್ ಇದೆ. ವಾರದ ಹಿಂದಷ್ಟೇ ಜಾಮೀನಿನ ಮೇಲೆ ಜೈಲ್ನಿಂದ ಹೊರಬಂದಿದ್ದ. ಡ್ರಗ್ಸ್ ಜಪ್ತಿ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ

