Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    ಸೋಲುವ ಭಯ.. ಒಮಾನ್​ ವಿರುದ್ಧ ಗೆಲ್ಲಲು ಹರಸಾಹಸಪಟ್ಟ ಸೂರ್ಯಕುಮಾರ್​ ಪಡೆ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಷ್ಟ್ರೀಯ

ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

editor tv by editor tv
August 8, 2023
in ರಾಷ್ಟ್ರೀಯ
0
ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
1.9k
VIEWS
Share on FacebookShare on TwitterShare on Whatsapp

ತಿರುವನಂತಪುರಂ: ಏಕರೂಪ ನಾಗರಿಕ ಸಂಹಿತೆಯನ್ನು (Uniform Civil Code) ವಿರೋಧಿಸಿ ಕೇರಳ ವಿಧಾನಸಭೆ (Kerala Assembly ಮಂಗಳವಾರ ಸರ್ವಾನುಮತದ ನಿರ್ಣಯವನ್ನು (Resolution) ಅಂಗೀಕರಿಸಿದೆ.

ಸದನದಲ್ಲಿ ನಿರ್ಣಯ ಮಂಡಿಸಿದ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಯುಸಿಸಿ ಏಕಪಕ್ಷೀಯ ಮತ್ತು ಆತುರದ ಕ್ರಮ ಎಂದು ಟೀಕಿಸಿದರು.

ಫೆಬ್ರವರಿಯಲ್ಲಿ ಮಿಜೋರಾಂ ವಿಧಾನಸಭೆ ದೇಶದಲ್ಲಿ ಯುಸಿಸಿಯನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಿತ್ತು. ಈಗ ಈ ಪಟ್ಟಿಗೆ ಎರಡನೇ ರಾಜ್ಯವಾಗಿ ಕೇರಳ ವಿಧಾನಸಭೆ ಸೇರ್ಪಡೆಯಾಗಿದೆ. ಸಿಎಂ ಮಂಡಿಸಿದ ನಿರ್ಣಯಕ್ಕೆ ಎಡ ಪ್ರಜಾಸತ್ತಾತ್ಮಕ ವೇದಿಕೆ (LDF) ಮತ್ತು ಸಂಯುಕ್ತ ಪ್ರಜಾಸತ್ತಾತ್ಮಕ ವೇದಿಕೆಯ (UDF) ಸದಸ್ಯರು ಬೆಂಬಲ ವ್ಯಕ್ತಪಡಿಸಿದರು

Today, the Kerala Assembly resoundingly passed a resolution against the Union Government's unilateral and hasty move to impose the #UniformCivilCode. The implementation of the UCC without engaging in democratic debate or seeking consensus poses a significant threat to the unity… pic.twitter.com/zFk4pn7fWH

— Pinarayi Vijayan (@pinarayivijayan) August 8, 2023

ಯುಸಿಸಿಯ ಪರವಾಗಿರುವ ಬಿಜೆಪಿ (BJP) ಯಾವೊಬ್ಬ ಸದಸ್ಯರು ಕೇರಳ ವಿಧಾನಸಭೆಯಲ್ಲಿ ಇಲ್ಲ. ಹೀಗಾಗಿ ನಿರ್ಣಯಕ್ಕೆ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. 

ಇದು ಸಂವಿಧಾನದ (Constitution) ಪ್ರಕಾರ ಯುಸಿಸಿಯಲ್ಲ. ಸಂಘ ಪರಿವಾರದ ಹಿಂದೂ ಕಾನೂನು (Hindu Law) ಮನುಸ್ಮೃತಿಯನ್ನು ಆಧರಿಸಿದೆ. ಕೇಂದ್ರದ ಕ್ರಮ ಜಾತ್ಯಾತೀತ ಸ್ವರೂಪವನ್ನು ಕಸಿದುಕೊಳ್ಳುವ ಏಕಪಕ್ಷೀಯ ಮತ್ತು ಆತುರದ ನಿರ್ಧಾರವಾಗಿದೆ. ಸಂವಿಧಾನವು ಸಾಮಾನ್ಯ ನಾಗರಿಕ ಕಾನೂನನ್ನು ರಾಜ್ಯ ನಿರ್ದೇಶನ ತತ್ವವಾಗಿ ಮಾತ್ರ ಉಲ್ಲೇಖಿಸುತ್ತದೆ. ಆದರೆ ಅದನ್ನು ಕಡ್ಡಾಯ ಮಾಡಿಲ್ಲ ಎಂದು ವಿಜಯನ್ ಹೇಳಿದರು

ಸಾಂಸ್ಕೃತಿಕ ವೈವಿಧ್ಯತೆಯನ್ನು ಅಳಿಸಿಹಾಕುವ ಮೂಲಕ ‘ಒಂದು ರಾಷ್ಟ್ರ, ಒಂದು ಸಂಸ್ಕೃತಿ’ ಎಂಬ ಬಹುಸಂಖ್ಯಾತ ಕೋಮುವಾದಿ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಯುಸಿಸಿಯನ್ನು ಜಾರಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಿದಾಗ ಮತ್ತು ಧಾರ್ಮಿಕ ವೈಯಕ್ತಿಕ ನಿಯಮಗಳನ್ನು ಅನುಸರಿಸುವ ಮತ್ತು ಆಚರಿಸುವ ಹಕ್ಕನ್ನು ಒಳಗೊಂಡಿರುವಾಗ, ಯಾವುದೇ ಕಾನೂನನ್ನು ನಿಷೇಧಿಸುವುದು ಸಂವಿಧಾನದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದರು.

ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿಯೂ ಸಹ ಯುಸಿಸಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿತ್ತು. ಬಿಆರ್ ಅಂಬೇಡ್ಕರ್ ಅವರ ಅಂದಿನ ನಿಲುವು ಸಂಸತ್ತು ಸಾಮಾನ್ಯ ನಾಗರಿಕ ಕಾನೂನನ್ನು ತರಲು ಪ್ರಯತ್ನಿಸಬಹುದು ಎಂದು ಹೇಳಿದ್ದರೆ ಹೊರತು ಅದನ್ನು ಕಡ್ಡಾಯಗೊಳಿಸಬೇಕೆಂದು ಅವರು ಒತ್ತಾಯ ಮಾಡಿರಲಿಲ್ಲ ಎಂದು ಪಿಣರಾಯಿ ವಾದಿಸಿದರು.

Previous Post

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥಾಪನಾ ದಿನ. ಇಂದು ಯಶಸ್ವಿ ಏಳು ವರ್ಷ ಪೂರೈಸಿ ಎಂಟನೇ ವರ್ಷಕ್ಕೆ ಪಾದಾರ್ಪಣೆ

Next Post

ಕಾರ್ಕಳ: ಅಕ್ರಮ ಗೋ-ಸಾಗಾಟ – ನಾಲ್ವರ ಬಂಧನ

Next Post

ಕಾರ್ಕಳ: ಅಕ್ರಮ ಗೋ-ಸಾಗಾಟ - ನಾಲ್ವರ ಬಂಧನ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.