
ಮಂಗಳೂರು, ಆಗಸ್ಟ್ 6: ನಗರದ ಬಿಲ್ಡರ್ ಒಬ್ಬರು ಬಹುಮಹಡಿ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರವಿವಾರ ನಡೆದಿದೆ.
ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಹೊರಗೆ ಹೋಗಿದ್ದ ಮೋಹನ್ ಅಮೀನ್ ತಮ್ಮ ಮನೆ ಇರುವ ಅಟ್ಲಾಂಟಿಕ್ ಅಪಾರ್ಟ್ಮೆಂಟಿಗೆ ಬಂದು 17ನೇ ಮಹಡಿಯಿಂದ ಹೊರಕ್ಕೆ ಹಾರಿದ್ದಾರೆ ಎನ್ನಲಾಗುತ್ತಿದೆ. ತಲೆಯ ಭಾಗ ಛಿದ್ರಗೊಂಡಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯವಾಹಿನಿ ಎಂಬ ಹೆಸರಿನ ಟಿಪ್ಪರ್, ಕ್ವಾರಿ, ಜಲ್ಲಿ ಕಲ್ಲು ಬಿಸಿನೆಸ್ ಹೊಂದಿದ್ದ ಮೋಹನ್ ಅಮೀನ್ ನಗರದ ಮಲ್ಲಿಕಟ್ಟೆಯಲ್ಲಿ ಕಚೇರಿ ಹೊಂದಿದ್ದರು.

ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ. ಪತ್ನಿ, ಮಕ್ಕಳಿಗೆ ಸಾರಿ ಎಂದಷ್ಟೇ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ರಿ ಪೊಲೀಸರು ಸ್ಥಳದಲ್ಲಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಗುರುಪುರ ಪರಾರಿ ಮೂಲದ ಮೋಹನ್ ಅವರು, ಮಂಗಳೂರು, ವಾಮಂಜೂರು ಭಾಗದಲ್ಲಿ ವ್ಯವಹಾರ ಹೊಂದಿದ್ದರು. ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
