
Ashraf Kammaje updated on 3aug 2023, thursday
ವಿದ್ಯುತ್ ಶಾಕ್ನಿಂದ ಮಗು ಅಸ್ವಸ್ಥ ಆಗಿರುವುದನ್ನು ನೋಡಿದ ಮನೆಯವರು ತಕ್ಷಣ ಆ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು
ಕಾರವಾರ(ಆ.03): ಬಾಯಿಯಲ್ಲಿ ಮೊಬೈಲ್ ಚಾರ್ಜರ್ ಇಟ್ಟುಕೊಂಡಿದ್ದ 8 ತಿಂಗಳ ಮಗು ವಿದ್ಯುತ್ ಪ್ರವಹಿಸಿ ಮೃತಪಟ್ಟ ದುರ್ಘಟನೆ ತಾಲೂಕಿನ ಸಿದ್ದರದಲ್ಲಿ ಬುಧವಾರ ನಡೆದಿದೆ.

ಸಂಜನಾ ಮತ್ತು ಸಂತೋಷ ಕಲ್ಗುಟಕರ್ ದಂಪತಿಯ ಮಗು ಸಾನಿಧ್ಯ ಮೃತಪಟ್ಟಿದೆ. ಮನೆಯಲ್ಲಿ ಸ್ವಿಚ್ ಬೋರ್ಡ್ಗೆ ಹಾಕಿದ್ದ ಮೊಬೈಲ್ ಚಾರ್ಜರ್ನ ವಿದ್ಯುತ್ ಬಂದ್ ಮಾಡಿರಲಿಲ್ಲ. ಈ ವೇಳೆ ಆಟವಾಡುತ್ತಿದ್ದ ಮಗು ಆನ್ ಆಗಿದ್ದ ಚಾರ್ಜರಿನ ವೈಯರ್ನ್ನು ಬಾಯಲ್ಲಿ ಇಟ್ಟುಕೊಂಡಿದೆ. ಈ ವೇಳೆ ವಿದ್ಯುತ್ ಪ್ರವಹಿಸಿದೆ.
ವಿದ್ಯುತ್ ಶಾಕ್ನಿಂದ ಮಗು ಅಸ್ವಸ್ಥ ಆಗಿರುವುದನ್ನು ನೋಡಿದ ಮನೆಯವರು ತಕ್ಷಣ ಆ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
