
ಖ್ಯಾತ ಪತ್ರಕರ್ತ, ಕವಿ, ಲೇಖಕ, ಆ್ಯಂಕರ್ ಶಂಶೀರ್ ಬುಡೋಳಿ ಇವರಿಗೆ ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ವತಿಯಿಂದ ‘ಕಾವ್ಯ ಸಿರಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮಂಗಳೂರು ನಗರದ ಜೆಪ್ಪು ಸೈಂಟ್ ಜೋಸೆಫ್ ಚರ್ಚ್ ನ ಮರಿಯಾ ಜಯಂತಿ ಸಭಾಂಗಣದಲ್ಲಿ ರವಿವಾರ ನಡೆದ ಭಾವೈಕ್ಯ ಸಮ್ಮಿಲನ, ಕವಿಗೋಷ್ಟಿ, ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶಂಶೀರ್ ಬುಡೋಳಿ ಅವರು ಸಾಹಿತ್ಯ, ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇತ್ತೀಚಿಗೆ ಮೂಲ್ಕಿಯ ಪುನರೂರಲ್ಲಿ ನಡೆದ 13 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಇವರು ‘ಕರ್ನಾಟಕ ಯುವ ರತ್ನ’ ಪ್ರಶಸ್ತಿಯನ್ನು ಪಡೆದಿದ್ದರು.
ಇನ್ನು ಇದೇ ವೇಳೆ ಆರೋಗ್ಯ ನಿರೀಕ್ಷಕಿ, ಲೇಖಕಿ ಆಯಿಶಾ ಪೆರ್ನೆ ಇವರಿಗೂ ‘ಕಾವ್ಯ ಸಿರಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಇವರು ಕರಾವಳಿ ಜಿಲ್ಲೆಯ ಪ್ರಪ್ರಥಮ ಮುಸ್ಲಿಂ ಮಹಿಳಾ ಹೆಲ್ತ್ ಇನ್ಸ್ ಪೆಕ್ಟರ್ ಆಗಿದ್ದಾರೆ. ಇವರು ಶಂಶೀರ್ ಬುಡೋಳಿ ಅವರ ಪತ್ನಿಯಾಗಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ
ಸಾಧನೆ ಮಾಡಿರುವ ಇವರು ಪ್ರವೃತ್ತಿಯಲ್ಲಿ
ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಅನೇಕ ಕಥೆ, ಕವನ, ಲೇಖನಗಳನ್ನು ಬರೆದಿದ್ದಾರೆ.


