
ರೈತನು ಕಷ್ಟಪಟ್ಟು ಬೆಳೆದಿದ್ದ ಟೋಮೋಟೋ ಬೆಳಗೆ ಕಿಡಿಗೇಡಿಗಳು ಆಸಿಡ್ ಸುರಿದು ನಾಶಪಡಿಸಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಂಗ್ರಾಪುರ ಗ್ರಾಮದಲ್ಲಿ ನಡೆದಿದೆ
- ಟೊಮಾಟೊ ಬೆಳೆ ಗ್ರಾಮದ ಮಹಾದೇವಸ್ವಾಮೀ ಅವರಿಗೆ ಸೇರಿದ್ದೆನ್ನಲಾಗಿದ್ದು, ಸುಮಾರು 500ಕ್ಕೂ ಅಧಿಕ ಟಮಾಟೋ ಗಿಡಗಳಿಗೆ ಆಸಿಡ್ ಸುರಿದು ನಾಶಪಡಿಸಿದ್ದಾರೆ ಎನ್ನಲಾಗಿದೆ.
- ಆ ರೈತನ ಮೇಲಿನ ದ್ವೇಷದಿಂದಲೇ ಈ ಕಿಡಿಗೇಡಿಗಳು ಈ ಕೃತ್ಯ ಎಸೆಗಿದ್ದಾರೆ ಎನ್ನಲಾಗಿದೆ.
- ಈಗ ರೈತನು ಮಳವಳ್ಳಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಮಂಡ್ಯ: ರೈತನು ಕಷ್ಟಪಟ್ಟು ಬೆಳೆದಿದ್ದ ಟೋಮೋಟೋ ಬೆಳಗೆ ಕಿಡಿಗೇಡಿಗಳು ಆಸಿಡ್ ಸುರಿದು ನಾಶಪಡಿಸಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಂಗ್ರಾಪುರ ಗ್ರಾಮದಲ್ಲಿ ನಡೆದಿದೆ.
ಸದ್ಯ ಮಾರುಕಟ್ಟೆಯಲ್ಲಿ ಟೊಮಾಟೊಗೆ ಉತ್ತಮ ಬೇಡಿಕೆ ಇದ್ದು, ಈಗ ಕಟಾವಿಗೆ ಬಂದಿದ್ದ ವೇಳೆ ಬೆಳೆಯನ್ನು ನಾಶಪಡಿಸಿರುವುದು ರೈತನನ್ನು ಕಂಗಾಲುಗೆಡಿಸಿದೆ.

ಟೊಮಾಟೊ ಬೆಳೆ ಗ್ರಾಮದ ಮಹಾದೇವಸ್ವಾಮೀ ಅವರಿಗೆ ಸೇರಿದ್ದೆನ್ನಲಾಗಿದ್ದು, ಸುಮಾರು 500ಕ್ಕೂ ಅಧಿಕ ಟಮಾಟೋ ಗಿಡಗಳಿಗೆ ಆಸಿಡ್ ಸುರಿದು ನಾಶಪಡಿಸಿದ್ದಾರೆ ಎನ್ನಲಾಗಿದೆ

ಆ ರೈತನ ಮೇಲಿನ ದ್ವೇಷದಿಂದಲೇ ಈ ಕಿಡಿಗೇಡಿಗಳು ಈ ಕೃತ್ಯ ಎಸೆಗಿದ್ದಾರೆ ಎನ್ನಲಾಗಿದೆ. ಈಗ ರೈತನು ಮಳವಳ್ಳಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.