Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    ಸೋಲುವ ಭಯ.. ಒಮಾನ್​ ವಿರುದ್ಧ ಗೆಲ್ಲಲು ಹರಸಾಹಸಪಟ್ಟ ಸೂರ್ಯಕುಮಾರ್​ ಪಡೆ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಷ್ಟ್ರೀಯ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್‌ಗೆ ಬಿಜೆಪಿ ಉಪಾಧ್ಯಕ್ಷ ಪಟ್ಟ

editor tv by editor tv
July 29, 2023
in ರಾಷ್ಟ್ರೀಯ
0
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್‌ಗೆ ಬಿಜೆಪಿ ಉಪಾಧ್ಯಕ್ಷ ಪಟ್ಟ
1.9k
VIEWS
Share on FacebookShare on TwitterShare on Whatsapp

ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (Aligarh Muslim University) ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್ (Tariq Mansoor) ಅವರಿಗೆ ಬಿಜೆಪಿ ಉಪಾಧ್ಯಕ್ಷ (BJP Vice-President) ಪಟ್ಟ ನೀಡಿದೆ.

ಉತ್ತರ ಪ್ರದೇಶದ (Uttar Pradesh) ಪಸ್ಮಾಂಡ ಮುಸ್ಲಿಂ ಸಮುದಾಯದ ತಾರಿಕ್ ಮನ್ಸೂರ್ ಜೆಎನ್‌ ಮೆಡಿಕಲ್‌ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದ್ದಾರೆ. 1982ರಲ್ಲಿ  ಅದೇ ಕಾಲೇಜಿನಲ್ಲೇ ಎಂಎಸ್‌ ಓದಿದ್ದರು. ಉತ್ತರ ಪ್ರದೇಶ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯರಾಗಿರುವ ಮನ್ಸೂರ್‌ ಈ ವರ್ಷ ಉಪಕುಲಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

2017ರ ಮೇ 17 ರಂದು ಉಪ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರ ಅಧಿಕಾರ ಅವಧಿ ಮೇ 2022ಕ್ಕೆ ಕೊನೆಯಾಗಬೇಕಿತ್ತು. ಆದರೆ ಕೋವಿಡ್‌ ಇತ್ಯಾದಿ ಕಾರಣಗಳಿಂದಾಗಿ ಕೇಂದ್ರ ಸರ್ಕಾರ ಇವರ ಅಧಿಕಾರ ಅವಧಿಯನ್ನು 1 ವರ್ಷ ವಿಸ್ತರಿಸಿತ್ತು.

ಉತ್ತರ ಪ್ರದೇಶದ ಮತದಾರರ ಪೈಕಿ ಸರಿಸುಮಾರು 19% ರಷ್ಟು ಮುಸ್ಲಿಂ ಮತದಾರರಿದ್ದಾರೆ. ಕನಿಷ್ಠ 30 ಲೋಕಸಭಾ ಸ್ಥಾನಗಳಲ್ಲಿ ಗಣನೀಯ ಅಸ್ತಿತ್ವವನ್ನು ಹೊಂದಿರುವ ಮುಸ್ಲಿಮರು ಈ ಪೈಕಿ 15 ರಿಂದ 20 ಕ್ಷೇತ್ರಗಳಲ್ಲಿ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಎಎಂಯು ಉಪ ಕುಲಾಪತಿಯಾಗುವ ಮೊದಲು ತಾರಿಕ್ ಮನ್ಸೂರ್ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಎಎಂಯುನಲ್ಲಿ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಸುಮಾರು ನಾಲ್ಕು ದಶಕಗಳ ಬೋಧನೆ, ಸಂಶೋಧನೆ, ಕ್ಲಿನಿಕಲ್ ಮತ್ತು ಆಡಳಿತಾತ್ಮಕ ಅನುಭವ ಹೊಂದಿದ್ದಾರೆ

ಮನ್ಸೂರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು 2023ರ ಪದ್ಮ ಪ್ರಶಸ್ತಿ ಸಮಿತಿಯ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದರು.  ಭಾರತೀಯ ವೈದ್ಯಕೀಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಲಕ್ನೋ), ಮೌಲಾನಾ ಆಜಾದ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ (ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಭಾರತ ಸರ್ಕಾರ) ಮತ್ತು ಶಿಕ್ಷಣ ಸಚಿವಾಲಯದ ಅಲ್ಪಸಂಖ್ಯಾತರ ಶಿಕ್ಷಣದ ರಾಷ್ಟ್ರೀಯ ಮೇಲ್ವಿಚಾರಣಾ ಸಮಿತಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

ಉತ್ತರ ಅಮೆರಿಕ ಯುರೋಪ್, ಪಶ್ಚಿಮ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದ ಪ್ರಮುಖ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ತಾರಿಕ್ ಮನ್ಸೂರ್ ಭೇಟಿ ನೀಡಿದ್ದಾರೆ

भाजपा राष्ट्रीय अध्यक्ष श्री @JPNadda ने निम्नलिखित केंद्रीय पदाधिकारियों के नामों की घोषणा की है- pic.twitter.com/0aaArxHF30

— BJP (@BJP4India) July 29, 2023

ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ರಕ್ಷಣಾ ಸಚಿವ ಎಕೆ ಆಂಟನಿ (AK Antony) ಅವರ ಪುತ್ರ ಅನಿಲ್ ಆಂಟನಿ (Anil Antony) ಅವರಿಗೂ ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡಿದೆ. ಕೇರಳದ ಕಾಂಗ್ರೆಸ್ (Kerala Congress) ನಾಯಕರಾಗಿದ್ದ ಅನಿಲ್ ಆಂಟನಿ ಅವರು 2002ರ ಗುಜರಾತ್ ಗಲಭೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯ (Narendra Modi) ಕುರಿತು ಬಿಬಿಸಿಯ ಸಾಕ್ಷ್ಯಚಿತ್ರದ (BBC Documentary) ವಿವಾದದ ನಂತರ ಜನವರಿಯಲ್ಲಿ ಪಕ್ಷವನ್ನು ತೊರೆದಿದ್ದರು.

Previous Post

ಶಾಸಕ ಯಶ್ಪಾಲ್ ಸುವರ್ಣನಿಂದ‌‌ ವಿವಾದಾತ್ಮಕ ಹೇಳಿಕೆ | ಪ್ರಜ್ಞಾಸಿಂಗ್ ಸೇರಿದಂತೆ ಉಳಿದವರೆಲ್ಲಾ ಬಾಂಬ್ ಇಡುವ ಮೊದಲು ಕ್ಯಾಮರಾ ಇಟ್ಟು ತರಬೇತಿ ಪಡೆದಿದ್ರಾ?: SDPI ಟಾಂಗ್

Next Post

ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲೆ ರೇಪ್ ಆಗಿದೆ, ಇಲ್ಲಿ ಕ್ಯಾಮೆರಾ ಎನ್ನುತ್ತೀರಾ: ಬಿಜೆಪಿ ವಿರುದ್ಧ ಸಿಎಂ ಇಬ್ರಾಹಿಂ ಕಿಡಿ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.