
- ಬಂಟ್ವಾಳ, ಜು 24 (HAYATH TV): ನಿರಂತರ ಭಾರೀ ಗಾಳಿ ಮಳೆಯಿಂದಾಗಿ ಬಂಟ್ವಾಳದ ಅಡ್ಡೂರಿನಲ್ಲಿ ಸುಮಾರು 10 ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿರುವ ಘಟನೆ ನಡೆದಿದೆ.
ನಿರಂತರ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಬಂಟ್ವಾಳದ ಅಡ್ಡೂರು, ಪೊಳಲಿ ಪರಿಸರದಲ್ಲೂ ಭಾರೀ ಮಳೆಗೆ ಅಪಾರ ಹಾನಿ ಆಗಿರುವ ಬಗ್ಗೆ ವರದಿಯಾಗಿದೆ.ಇನ್ನು ಅಡ್ಡೂರಿನಲ್ಲಿ ಸುಮಾರು 10 ವಿದ್ಯುತ್ ಕಂಬಗಳು ಧರೆಗೆ ಉರುಲಿದ್ದು, ಎರಡು ದಿನಗಳ ಕಾಲ ವಿದ್ಯುತ್ ಮೊಟಕುಗೊಂಡಿದ್ದು ಮೆಸ್ಕಾಂ ಇಲಾಖೆ ಸಿಬ್ಬಂದಿ ಬಂದು ವಿದ್ಯುತ್ ಕಂಬಗಳನ್ನು ಸರಿಪಡಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಬಂಟ್ವಾಳದ ಅಡ್ಡೂರಿನಲ್ಲಿ ಸುಮಾರು 10 ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿದೆ.
ನಿರಂತರ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಬಂಟ್ವಾಳದ ಅಡ್ಡೂರು, ಪೊಳಲಿ ಪರಿಸರದಲ್ಲೂ ಭಾರೀ ಮಳೆಗೆ ಅಪಾರ ಹಾನಿ ಆಗಿರುವ ಬಗ್ಗೆ ವರದಿಯಾಗಿದೆ.ಅಡ್ಡೂರಿನಲ್ಲಿ ಸುಮಾರು 10 ವಿದ್ಯುತ್ ಕಂಬಗಳು ಧರೆಗೆ ಉರುಲಿದ್ದು, ಎರಡು ದಿನಗಳ ಕಾಲ ವಿದ್ಯುತ್ ಮೊಟಕುಗೊಂಡಿತು.
ಬಳಿಕ ಮೆಸ್ಕಾಂ ಇಲಾಖೆ ಸಿಬ್ಬಂದಿ ಬಂದು ವಿದ್ಯುತ್ ಕಂಬಗಳನ್ನು ಸರಿಪಡಿಸಿದ್ದಾರೆ.
ಕೆಸರು ನೀರಿನಲ್ಲಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಸಿಬ್ಬಂದಿ ಹಾಗೂ ಊರಿನ ನಾಗರಿಕರ ಹರಸಾಹಸ ಪಟ್ಟರು.

