
ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಬಿಲ್ ಪ್ರತಿಯನ್ನು ಹರಿದು ಹಾಕಿದ ಬಿಜೆಪಿಯ ಒಟ್ಟು ಶಾಸಕರನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು (ಜು.19): ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಬಿಲ್ ಪ್ರತಿಯನ್ನು ಹರಿದು ಹಾಕಿದ ಬಿಜೆಪಿಯ ಒಟ್ಟು ಶಾಸಕರನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮಧ್ಯಾಹ್ನದ ಅಅಧಿವೇಶನ ಆರಂಭವಾದ ಬೆನ್ನಲ್ಲೇ ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಸಭೆಯನ್ನು ನಡೆಸಿಕೊಡುವಾಗ ಸರ್ಕಾರದ ಬಿಲ್ ಪ್ರತಿಯೊಂದನ್ನು ಬಿಜೆಪಿಯ ಹತ್ತಕ್ಕೂ ಅಧಿಕ ಶಾಸಕರು ಹರಿದು ಸ್ಪೀಕರ್ ಮೇಲೆ ಎಸೆದಿದ್ದಾರೆ. ಇನ್ನು ವಿಧಾನಸಭಾ ಅಧಿವೇಶನದಲ್ಲಿ ಅಶಿಸ್ತಿನಿಂದ ನಡೆದುಕೊಮಡಿ ಹಿನ್ನೆಲೆಯಲ್ಲಿ ಬಿಜೆಪಿಯ 10 ಶಾಸಕರನ್ನು ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದೆ. ಇನ್ನು ಇದರ ಬೆನ್ನಲ್ಲೇ ಶಾಸಕರನ್ನು ಅಧಿವೇಶನದಿಂದ ಹೊರ ಹಾಕಲಾಗಿದೆ.

ವಿಧಾನಸಭಾ ಅಧಿವೇಶನದಿಂದ ಅಮಾನತ್ತಾದ ಶಾಸಕರು:
- ಆರ್ ಅಶೋಕ
- ಸುನೀಲ್ ಕುಮಾರ್
- ವೇದವ್ಯಾಸ ಕಾಮತ್
- ಅಶ್ವಥ್ ನಾರಾಯಣ
- ಯಶ್ಪಾಲ್ ಸುವರ್ಣ
- ಧೀರಜ್ ಮುನಿರಾಜ್
- ಅರವಿಂದ್ ಬೆಲ್ಲದ್
- ಉಮಾನಾಥ್ ಕೋಟ್ಯಾನ್
- ಅರಗ ಜ್ಞಾನೇಂದ್ರ
- ಭರತ್ ಶೆಟ್ಟಿ
ರಾಜ್ಯದ ಜನತೆಗೆ ಕಪ್ಪು ಚುಕ್ಕೆ ತರಲು ಬಿಡೊಲ್ಲ: ಸಂಸದೀಯ ವ್ಯವಸ್ಥೆಯಲ್ಲಿ ಸದನ ಅತ್ಯಂತ್ಯ ಗೌರವ ಮತ್ತು ಪವಿತ್ರವಾದ್ದು ಆಗಿದೆ. ಈ ವ್ಯವಸ್ಥೆಗೆ ಧಕ್ಕೆ ತರುವಂತಹ ಅಗೌರವಯುತವಾಗಿ, ಅಶಿಸ್ತಿನಿಂದ ನಡೆದುಕೊಂಡು ನಮ್ಮ ರಾಜ್ಯದ ಜನತೆಗೆ ಕಪ್ಪು ಚುಕ್ಕೆ ಭರುವಂತೆ ನಡೆದುಕೊಂಡಲ್ಲಿ ಅದನ್ನು ಸದನವು ಸಹಿಸುವುದಿಲ್ಲ ಎಂದು ಹೇಳುತ್ತಾರೆ. ಇದರ ಬೆನ್ನಲ್ಲೇ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ವಿಧಾನಸಭಾಧ್ಯಕ್ಷರ ಪ್ರಸ್ತಾವನೆಯನ್ನು ನಾನು ಮಂಡಿಸುತ್ತೇನೆ. ಒಟ್ಟು ಬಿಜೆಪಿಯ 10 ಸದಸ್ಯರನ್ನು ಸದಸನದಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದರಿಂದ ವಿಧಾನಸಭೆಯ ನಡವಳಿಕೆಯ ನಿಯಮಾವಳಿ ಅನ್ವಯ ಅಮಾನತುಗೊಳಿಸಲಾಗುತ್ತದೆ ಎಂದು ಹೇಳಿದರು.

ಕಾನೂನು ಸಚಿವರಿಂದ ನಿರ್ಣಯ ಮಂಡನೆ: ಬಿಜೆಪಿ ಸದಸ್ಯರು ಸ್ಪೀಕರ್ ಅವರತನ್ನು ಮಾನತು ಮಾಡಲು ಅವಿಶ್ವಾಸ ನಿರ್ಣಯವನ್ನು ಕೈಗೊಳ್ಳುತ್ತಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರೂ ಕೇಳಿಸದಂತೆ ಗದ್ದಲ ಉಂಟಾಗುತ್ತದೆ. ಈ ವೇಳೆ ವಿಧಾನಸಭೆಯಲ್ಲಿ ಅಶಿಸ್ತು ತೋರಿದ 10 ಬಿಜೆಪಿ ಶಾಸಕರನ್ನು ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಇದಾದ ನಂತರ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್ ಅವರು ಸದನದಲ್ಲಿ ಮಂಡಿಸುತ್ತಾರೆ. ಕೂಡಲೇ ಆಡಳಿತ ಪಕ್ಷದ ನಾಯಕರು ಇದಕ್ಕೆ ಅನುಮೋದನೆ ನೀಡುತ್ತಾರೆ.