
ಕಳ್ಳನು ಪಿಎಸ್ ಐ ಗನ್ ಕಿತ್ತುಕೊಂಡು ಓಡಿ ಹೋಗಿ ಮರವೇರಿ ಕುಳಿತಿರುವ ಘಟನೆ ಕಲಬುರಗಿಯ ಅಫಜಲಪೂರದಲ್ಲಿ ನಡೆದಿದೆ
- ಅಫಜಲಪೂರ ಪೊಲಿಸ್ ಠಾಣೆ ಪಿಎಸ್ ಐ ಭೀಮರಾಯ್ ಬಂಕಲಿ ಎಂಬುವವರ ನಗ್ ಕಿತ್ತು ಪರಾರಿಯಾಗಿದ್ದಾನೆ.
- ತಾಲ್ಲೂಕಿನ ಸೊನ್ನ ಬಳಿ ಬಂದಿಸಲು ಹೋದಾಗ ಈ ಘಟನೆ ನಡೆದಿದೆ.
- ಆರೋಪಿಯ ಕಾರಿನ ಗ್ಲಾಸ್ ಒಡೆದು ಬಂಧಿಸಲು ಯತ್ನಸುವಾಗ ಪಿಎಸ್ ಐ ಗನ್ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಕಲಬುರಗಿ:ಕಳ್ಳನು ಪಿಎಸ್ ಐ ಗನ್ ಕಿತ್ತುಕೊಂಡು ಓಡಿ ಹೋಗಿ ಮರವೇರಿ ಕುಳಿತಿರುವ ಘಟನೆ ಕಲಬುರಗಿಯ ಅಫಜಲಪೂರದಲ್ಲಿ ನಡೆದಿದೆ.
ಗನ್ ಕಿತ್ತುಕೊಂಡು ಹೋಗಿರುವ ವ್ಯಕ್ತಿಯನ್ನು ಖಾಜಪ್ಪ ಎಂದು ಗುರುತಿಸಲಾಗಿದೆ,ಆತನ ವಿರುದ್ಧ ಬೆಂಗಳೂರು, ಕಲಬುರಗಿ, ಅಫಜಲಪೂರ ಸೇರಿ ವಿವಿಧೆಡೆ 20 ಕ್ಕೂ ಅಧಿಕ ಕಳ್ಳತನ ಪ್ರಕರಣಗಳಿವೆ.
ಅಫಜಲಪೂರ ಪೊಲಿಸ್ ಠಾಣೆ ಪಿಎಸ್ ಐ ಭೀಮರಾಯ್ ಬಂಕಲಿ ಎಂಬುವವರ ಗನ್ ಕಿತ್ತು ಕೊಂಡು ಪರಾರಿಯಾಗಿದ್ದಾನೆ. ಆಫ್ಜಲ್ಪುರ್ ತಾಲೂಕು ಸೊನ್ನ ಬಳಿ ಬಂದಿಸಲು ಹೋದಾಗ ಈ ಘಟನೆ ನಡೆದಿದೆ.ಆರೋಪಿಯ ಕಾರಿನ ಗ್ಲಾಸ್ ಒಡೆದು ಬಂಧಿಸಲು ಯತ್ನಸುವಾಗ ಪಿಎಸ್ ಐ ಗನ್ ಕಿತ್ತುಕೊಂಡು ಪರಾರಿಯಾಗಿದ್ದಾನೆ.ಪುಲ್ ಲೋಡೆಡ್ ಗನ್ ಕಿತ್ತುಕೊಂಡು ಪರಾರಿಯಾಗಿದ್ದರಿಂದ ಸ್ಥಳದಲ್ಲಿ ಒಂದು ರೀತಿಯ ಆತಂಕ ಸೃಷ್ಟಿಯಾಗಿತ್ತು.

ಅಫಜಲಪುರ ಪಟ್ಟಣದ ದುದನಿ ರಸ್ತೆಯಲ್ಲಿರುವ ಲಕ್ಷ್ಮಿ ದೇವಸ್ಥಾನದ ಹತ್ತಿರ ಇರುವ ಮರವೇರಿ ಆರೋಪಿ ಕುಳಿತಿದ್ದಾನೆ.ತದನಂತರ ಕಲಬುರಗಿ ಎಸ್ಪಿ ಕಲಬುರಗಿ ಎಸ್ ಪಿ ಇಶಾಪಂತ ಸ್ಥಳಕ್ಕೆ ಭೇಟಿ ಕಳ್ಳನ ಮನವೊಲಿಸಿ ಮರದಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳನು ಮರದಿಂದ ಕೆಳಗೆ ಇಳಿದ ನಂತರ ತಕ್ಷಣ ವಶಕ್ಕೆ ತೆಗೆದುಕೊಂಡ ಪೋಲಿಸ್ ಸಿಬ್ಬಂದಿಯು ಆತನನ್ನು ಅಫಜಲಪುರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.