M. Ashraf Kammaje| Edited by kammaje
Updated on:Jul 15, 2023 | 8:26 PM

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಗಾಗಿ NIA ತಲಾಶ್ ನಡೆಸುತ್ತಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಆ.18ರೊಳಗೆ ಶರಣಾಗುವಂತೆ ಎರಡನೇ ಭಾರಿ ಎಚ್ಚರಿಕೆ ನೀಡಿದೆ. ಎನ್‌ಐಎ ಕೋರ್ಟ್‌ನ ಆದೇಶದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಕನ್ನಡ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಗಾಗಿ NIA ತಲಾಶ್ ನಡೆಸುತ್ತಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಆ.18ರೊಳಗೆ ಶರಣಾಗುವಂತೆ ಎರಡನೇ ಭಾರಿ ಎಚ್ಚರಿಕೆ ನೀಡಿದೆ. ಎನ್‌ಐಎ ಕೋರ್ಟ್‌ನ ಆದೇಶದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅದೇ ರೀತಿಯಾಗಿ ಆರೋಪಿಗಳ ಸುಳಿವು ನೀಡಿದರೆ ಬಹುಮಾನ ನೀಡುವುದಾಗಿ ಸಹ NIA ಘೋಷಿಸಿದೆ. ಈ ಹಿಂದೆ ಜೂನ್ 30ರಂದು ಶರಣಾಗುವಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಶರಣಾಗದೆ ತಲೆಮರೆಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಕೊಡಗು ಭಾಗದಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಆಗಸ್ಟ್ 18ರೊಳಗೆ ಶರಣಾಗುವಂತೆ ಧ್ವನಿವರ್ಧಕ ಮೂಲಕ ಅನೌನ್ಸ್ ಮಾಡಿದ್ದಾರೆ. ಶರಣಾಗದಿದ್ರೆ ಆರೋಪಿಗಳ ಮನೆ, ಆಸ್ತಿಪಾಸ್ತಿ ಮುಟ್ಟುಗೋಲು ಎಚ್ಚರಿಕೆ ನೀಡಲಾಗಿದೆ.

ಆರೋಪಿಗಳ ಮನೆಗೆ ಭೇಟಿ ನೀಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಜೊತೆಗೆ ಆರೋಪಿಗಳ ಮನೆಗೆ ಕೋರ್ಟ್‌ನ ಆದೇಶ ಪ್ರತಿ ಕೂಡ ಅಂಟಿಸಿದ್ದಾರೆ. ಮುಸ್ತಫಾ ಪೈಚಾರ್, ಅಬೂಬಕ್ಕರ್ ಸಿದ್ದಿಕ್, ಉಮ್ಮರ್ ಫಾರೂಕ್ ತುಫೇಲ್, ಮಸೂದ್ ಅಗ್ನಾಡಿ ಸೇರಿ ಇನ್ನಿತರ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ

ಜುಲೈ 26, 2022 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನಡೆದ ಒಂದು ಕೊಲೆ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಪ್ರಕರಣದ ಬಿಸಿಗೆ ಬಿಜೆಪಿ ರಾಜ್ಯ ಸರ್ಕಾರದ ಬುಡವೇ ಅಲುಗಾಡಿತ್ತು. ನಂತರ ಸರ್ಕಾರ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿತ್ತು.