
ಕಾಂಗ್ರೆಸ್ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆ ಅನ್ನಭಾಗ್ಯ 2.0 ಈಗಾಗಲೇ ಜಾರಿಯಾಗಿದ್ದು ಫಲಾನುಭವಿಗಳ ಅಕೌಂಟ್ಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಆಗಲಿದೆ.
- ಕರ್ನಾಟಕ ರಾಜ್ಯದಲ್ಲಿ ಒಟ್ಟು 128 ಮಿಲಿಯನ್ ಪಡಿತರ ಚೀಟಿದಾರರು ಅನ್ನಭಾಗ್ಯ ಯೋಜನೆಯ ನಗದು ವರ್ಗಾವಣೆಗೆ ಅರ್ಹರಾಗಿದ್ದಾರೆ.
- ಇದೀಗ ರಾಜ್ಯ ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 34 ರೂ. ಗಳಂತೆ ಐದು ಕೆಜಿ ಅಕ್ಕಿದೆ ಒಟ್ಟು 170 ರೂಪಾಯಿಗಳನ್ನು ಖಾತೆಗೆ ವರ್ಗಾಯಿಸುತ್ತದೆ.
- ಈ ಹಣವನ್ನು ಬಿಪಿಎಲ್ ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ

AnnaBhagya Yojane: ಭಾರತೀಯ ಆಹಾರ ನಿಗಮದಿಂದ ರಾಜ್ಯ ಸರ್ಕಾರಗಳಿಗೆ ಧಾನ್ಯ ಮಾರಾಟವನ್ನು ಸ್ಥಗಿತಗೊಳಿಸುವ ಮೂಲಕ ಕೇಂದ್ರ ಸರ್ಕಾರ ಕರ್ನಾಟಕದ ನೂತನ ಸರ್ಕಾರ ಜಾರಿಗೆ ತರಲು ಹೊರಟಿರುವ “ಅನ್ನಭಾಗ್ಯ” ಯೋಜನೆಗೆ ಅಡ್ಡಿಯಾಗಿದೆ ಎಂದು ಟೀಕಿಸಿರುವ ಕಾಂಗ್ರೆಸ್ ಸರ್ಕಾರ, ಇದೀಗ ಐದು ಕೆಜಿ ಅಕ್ಕಿ ಜೊತೆಗೆ ಇನ್ನುಳಿದ ಐದು ಕೆಜಿ ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆಯನ್ನು ಪ್ರಾರಂಭಿಸಿದೆ.
ಹೌದು, ರಾಜ್ಯ ಸರಕಾರದ ಭರವಸೆ ಗಳಲ್ಲಿ ಒಂದಾದ ಅನ್ನ ಭಾಗ್ಯ 2.0, ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಿಂಗಳಿಗೆ 10ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ರಾಜ್ಯ ಸರ್ಕಾರಗಳಿಗೆ ಅಕ್ಕಿ ಮತ್ತು ಗೋಧಿ ಮಾರಾಟವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದ ನಂತರ ಪರ್ಯಾಯ ವಿಧಾನವನ್ನು ಅನುಸರಿಸುತ್ತಿದ್ದು, ಅನ್ನಭಾಗ್ಯ ಫಲಾನುಭವಿಗಳ ಅಕೌಂಟ್ಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ.

ಅನ್ನಭಾಗ್ಯ ಯೋಜನೆಯಡಿ ಆಕೌಂಟ್‌ಗೆ ದುಡ್ಡು ಹಾಕುವ ಯೋಜನೆ ಈಗಾಗಲೇ ಆರಂಭವಾಗಿದೆ. ಮೈಸೂರು, ಕೋಲಾರ ಬೆಂಗಳೂರು ಗ್ರಾಮಂತರ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಯಲ್ಲಿ ಆರಂಭವಾಗಿದೆ. ಇನ್ನು ಫಲಾನುಭವಿಗಳಿಗೆ ಆಕೌಂಟ್‌ಗೆ ದುಡ್ಡು ಬಂದಿದ್ಯಾ ಇಲ್ವಾ ಅನ್ನೋದನ್ನು ಚೆಕ್ ಮಾಡೋಕೆ ಪ್ರತ್ಯೇಕ ಲಿಂಕ್ ಬಿಡಲಾಗಿದೆ. ಹಾಗಿದ್ರೆ ಇದನ್ನು ಹೇಗೆ ಚೆಕ್ ಮಾಡಬೇಕು ಅನ್ನೋದ್ರ ಬಗ್ಗೆ ಆಹಾರ ಇಲಾಖೆ ಎಂಡಿ ಜ್ಙಾನೇಂದ್ರ ಗೆ ಮಾಹಿತಿ ನೀಡಿದ್ದಾರೆ.
ಅನ್ನಭಾಗ್ಯ ದುಡ್ಡು ಆಕೌಂಟ್ ಸೇರಿದ್ಯಾ ಚೆಕ್ ಮಾಡೋದು ಹೇಗೆ..!?
– ಆಹಾರ ಇಲಾಖೆಯ ವೆಬ್ ಸೈಟ್ ಗೆ ಲಾಗಿನ್ ಆಗಬೇಕು
– ಇ- ಸರ್ವಿಸ್ ಪೋರ್ಟಲ್‌ನಲ್ಲಿ ಡಿಬಿಟಿ ಅನ್ನುವ ಲಿಂಕ್ ಕಾಣಿಸಲಿದೆ ಇದರ ಮೇಲೆ ಕ್ಲಿಕ್ ಮಾಡಿ.
– ಇದರಲ್ಲಿ ಸ್ಟೇಟಸ್ ಆಫ್ ಡಿಬಿಟಿ ಅನ್ನುವ ಆಯ್ಕೆ ಗೋಚರಿಸುತ್ತದೆ, ಅದನ್ನು ಆಯ್ಕೆ ಮಾಡಿ.
– ಮುಂದಿನ ಪುಟದಲ್ಲಿ ನಿಗದಿತ ಕಾಲಂನಲ್ಲಿ ರೇಷನ್ ಕಾರ್ಡ್ ನ ನಂಬರ್ ಅಂದ್ರೆ ಆರ್ ಸಿ ನಂಬರ್‌ನ್ನು ಭರ್ತಿಮಾಡಬೇಕು.
– ನಿಮ್ಮ ರೇಷನ್ ಕಾರ್ಡ್ನ ಮೇಲ್ಬಾಗದಲ್ಲಿ ಕಾಣುವ ಆರ್ ಸಿ ನಂಬರ್ ಅನ್ನು ಇಲ್ಲಿ ನಮೂದಿಸಿ ಮುಂದುವರೆಯಿರಿ ಎಂಬ ಆಯ್ಕೆಯನ್ನು ಆರಿಸಿ.
– ಮುಂದಿನ ಪುಟದಲ್ಲಿ ನಿಮ್ಮ ಅಕೌಂಟ್‌ಗೆ ದುಡ್ಡು ಜಮೆ ಆಗಿದ್ಯಾ, ಒಂದೊಮ್ಮೆ ಖಾತೆಗೆ ಹಣ ಕ್ರೆಡಿಟ್ ಆಗದಿದ್ದಲ್ಲಿ ಅದು ಯಾವ ಕಾರಣಕ್ಕೆ ಕ್ರೆಡಿಟ್ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಲಿದೆ.
