M. Ashraf Kammaje |
Updated on: Jul 11, 2023 | 6:44 PM

ಕೇಂದ್ರ ಮತ್ತು ಗೂಗಲ್‌ನೊಂದಿಗೆ ಸಮಸ್ಯೆಯನ್ನು ಪ್ರಸ್ತಾಪಿಸಲಾಗಿದೆ. ಈಗಾಗಲೇ ಅಂತಹ 42 ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್ನಿಂದ ತೆಗೆದುಹಾಕಲಾಗಿದೆ ಎಂದು ಸರ್ಕಾರ ತಿಳಿಸಿದೆ
ಬೆಂಗಳೂರು: ಜನರಿಗೆ ಕಿರುಕುಳ ನೀಡುತ್ತಿರುವ 42 ಸಾಲ ನೀಡುವ ಮೊಬೈಲ್ ಅಪ್ಲಿಕೇಶನ್‌ಗಳನ್ನು (Lending Apps)ಗೂಗಲ್ ಪ್ಲೇ ಸ್ಟೋರ್ ನಿಂದ (Google Play store) ಗೆದುಹಾಕಲು ಕ್ರಮಕೈಗೊಳ್ಳಲಾಗಿದೆ ಎಂದು ಕರ್ನಾಟಕ ಸರ್ಕಾರ (Karnataka) ವಿಧಾನ ಪರಿಷತ್ತಿಗೆ ಮಾಹಿತಿ ನೀಡಿದೆ. ಆನ್‌ಲೈನ್ ಗೇಮಿಂಗ್ ಮತ್ತು ಆನ್‌ಲೈನ್ ಸಾಲ ನೀಡುವ ಮೊಬೈಲ್ ಆ್ಯಪ್‌ಗಳ ಬಗ್ಗೆ ಬಿಜೆಪಿ ಎಂಎಲ್‌ಸಿ ಡಿಎಸ್ ಅರುಣ್ ಪ್ರಸ್ತಾವಿಸಿದ್ದು, ಇದಕ್ಕೆ ಸರ್ಕಾರ ಉತ್ತರ ನೀಡಿದೆ. ಆನ್‌ಲೈನ್ ಗೇಮಿಂಗ್ ಮತ್ತು ಆನ್‌ಲೈನ್ ಸಾಲ ನೀಡುವ ಆ್ಯಪ್‌ಗಳು ಜನರಿಗೆ ಕಿರುಕುಳ ನೀಡುತ್ತಿವೆ ಮತ್ತು ವಿಶೇಷವಾಗಿ ಗೇಮಿಂಗ್ ಅಪ್ಲಿಕೇಶನ್‌ಗಳು ಯುವಕರ ಶಿಕ್ಷಣ ಮತ್ತು ಜೀವನವನ್ನು ಹಾಳು ಮಾಡುತ್ತಿವೆ ಎಂದು ಅವರು ಡಿಎಸ್ ಅರುಣ್ ಆರೋಪಿಸಿದ್ದಾರೆ. ಸೆಲೆಬ್ರಿಟಿಗಳು ಇಂತಹ ಗೇಮಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರೆ ಜತೆಗೆ, ಇದು ಯುವಜನರನ್ನು ಆನ್‌ಲೈನ್ ಜೂಜಿನಲ್ಲಿ ತೊಡಗಿಸಿಕೊಳ್ಳಲು ಆಮಿಷವೊಡ್ಡುತ್ತದೆ ಎಂದು ಅವರು ಪರಿಷತ್ತಿನಲ್ಲಿ ಹೇಳಿದ್ದಾರೆ.

ಇದಕ್ಕೆ ಗೃಹ ಸಚಿವರ ಪರವಾಗಿ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇಂತಹ ಆ್ಯಪ್‌ಗಳ ಹಾವಳಿಯನ್ನು ತಡೆಯಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಕೇಂದ್ರ ಮತ್ತು ಗೂಗಲ್‌ನೊಂದಿಗೆ ಸಮಸ್ಯೆಯನ್ನು ಪ್ರಸ್ತಾಪಿಸಲಾಗಿದೆ. ಈಗಾಗಲೇ ಅಂತಹ 42 ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್ನಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಇನ್ನೂ ಸುಮಾರು 800 ಅಕ್ರಮ ಆ್ಯಪ್‌ಗಳು ಸಕ್ರಿಯವಾಗಿವೆ ಎಂದು ಅರುಣ್ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರವು ಅಂತಹ ಅಪ್ಲಿಕೇಶನ್‌ಗಳನ್ನು ನಿಯಂತ್ರಿಸುವುದರಿಂದ ರಾಜ್ಯ ಸರ್ಕಾರವೊಂದರಿಂದಲೇ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರವು ಈ ವಿಷಯವನ್ನು ಕೇಂದ್ರದೊಂದಿಗೆ ಚರ್ಚಿಸಲಿದೆ ಎಂದು ತಿಳಿಸಿದ್ದಾರೆ.