
ಬಕ್ರೀದ್ ಹಬ್ಬದ ಪ್ರಯುಕ್ತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸಿಎಂ ಸಿದ್ದರಾಮಯ್ಯ, ಸಹಸ್ರಾರು ಮುಸ್ಲಿಂ ಬಂಧುಗಳಿಗೆ ಹಬ್ಬದ ಶುಭ ಹಾರೈಕೆ, ಸಿಎಂಗೆ ಸಚಿವ ಜಮೀರ್ ಅಹಮದ್ ಸಾಥ್ ನೀಡಿದರು.

ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರು ಇಂದು (ಜೂನ್ 29) ರಾಜ್ಯದೆಲ್ಲಡೆ ಸಾಮೂಹಿಕ ಪ್ರಾರ್ಥನೆ ಮಾಡಿದರು. ಇತ್ತ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದನದಲ್ಲಿ ನಡೆದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದರು. ಸಚಿವ ಜಮೀರ್ ಅಹಮದ್ ಖಾನ್ ಜೊತೆ ಈದ್ಗಾ ಮೈದಾನಕ್ಕೆ ಆಗಮಿಸಿದ ಸಿದ್ದರಾಮಯ್ಯ ಮುಸ್ಲಿಂ ಸಮುದಾಯದ ಜನರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು. ಈ ವೇಳೆ ಸಿದ್ದರಾಮಯ್ಯನವರು ಮುಸ್ಲಿಂ ಸಮುದಾಯದ ಜನರಿಗೆ ಕಿವಿಮಾತೊಂದನ್ನು ಹೇಳಿದರು.


ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಈ ಹಬ್ಬದ ದಿನ ಮುಸ್ಲಿಂ ಭಾಂದವರೆಲ್ಲ ಸೇರಿದೀರಿ. ಇದು ಭಾಷಣ ಮಾಡುವ ಸಭೆಯಲ್ಲ. ನಾನು ಕೂಡ ಇವತ್ತು ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ. ನಾವೆಲ್ಲರು ಕೂಡ ಮನುಷ್ಯರು ಪರಸ್ಪರ ಪ್ರೀತಿಯಿಂದ ಇರಬೇಕು. ನಮ್ಮಲ್ಲೇ ಕೆಲ ಶಕ್ತಿಗಳಿವೆ, ಇದಕ್ಕೆ ಅಡ್ಡಿಪಡಿಸಲು ಪ್ರಯತ್ನ ಮಾಡುತ್ತವೆ.ಇವುಗಳಿಗೆ ಸೊಪ್ಪು ಹಾಕಬಾರದು ಎಂದು ಕಿವಿಮಾತು ಹೇಳಿದರು.

ಬಕ್ರೀದ್ ಹಬ್ಬ ತ್ಯಾಗ, ಬಲಿದಾನದ ಸಂಕೇತವಾಗಿದೆ. ಬಕ್ರೀದ್ ಹಬ್ಬ ನಾಡಿನಲ್ಲಿ ಸ್ನೇಹ, ಸೌಹಾರ್ದತೆ ನೆಲೆಸಲು ಪ್ರೇರಣೆಯಾಗಬೇಕು. ನಾವೆಲ್ಲರೂ ಮನುಷ್ಯರು, ಪರಸ್ಪರ ಪ್ರೀತಿ, ವಿಶ್ವಾಸದಿಂದ ಇರಬೇಕು ಎಂದರು.
ನಾವೆಲ್ಲರೂ ಮನುಷ್ಯರು, ಪರಸ್ಪರ ಪ್ರೀತಿ, ವಿಶ್ವಾಸದಿಂದ ಇರಬೇಕು. ಸೌಹಾರ್ದತೆಗೆ ಅಡ್ಡಿಪಡಿಸುವ ಕೆಲಶಕ್ತಿಗಳಿವೆ, ಅದಕ್ಕೆಲ್ಲ ಕಿವಿಗೊಡಬಾರದು. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಇದ್ದರೆ ರಾಜ್ಯ ಅಭಿವೃದ್ಧಿಯಾಗುತ್ತೆ ಎಂದು ಹೇಳಿದರು

ಇದು ಭಾಷಣ ಮಾಡುವ ಸಭೆಯಲ್ಲ. ಇಲ್ಲಿ ಎಲ್ಲರು ಸೇರಿರುವುದು ಪ್ರಾರ್ಥನೆಗೆ. ಒಳ್ಳೇದಾಗಲಿ ಎಂದು ದೇವರಲ್ಲಿ ಎಂದು ಕೇಳುವುದಕ್ಕೆ ಸೇರಿದ್ದೀರಿ ಎಂದು ಹೇಳಿ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿದರು