
M. Ashraf Kammaje |
Updated on: Jun 28, 2023 | 9:17 AM
ಏಕರೂಪ ನಾಗರೀಕ ಸಂಹಿತೆ (ಯುಸಿಸಿ) ಕುರಿತು ಪ್ರಧಾನಿ (Narendra Modi)ಯವರ ಹೇಳಿಕೆಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಮತ್ತು ಜಮೀಯತ್ ಉಲೇಮಾ-ಎ-ಹಿಂದ್ ಆಕ್ಷೇಪ ವ್ಯಕ್ತಪಡಿಸಿದೆ. ಜೂನ್ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೋಪಾಲ್ನಲ್ಲಿ, ಏಕರೂಪ ನಾಗರಿಕ ಸಂಹಿತೆಯ ಮೇಲೆ ಜನರನ್ನು ಪ್ರಚೋದಿಸಲಾಗುತ್ತಿದೆ ಎಂದು ಹೇಳಿದ್ದರು. ಈ ಭ್ರಮೆಯನ್ನು ಬಿಜೆಪಿ ತೊಲಗಿಸುತ್ತದೆ. ಎಂದಿದ್ದರು

ಇಡೀ ದೇಶಕ್ಕೆ ಏಕರೂಪದ ಕಾನೂನು ರೂಪಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಮುಸ್ಲಿಂ ಮಂಡಳಿ ಹೇಳಿದೆ. ಪ್ರತಿಯೊಬ್ಬರಿಗೂ ಅವರವರ ಧರ್ಮ ಮತ್ತು ಸಂಸ್ಕೃತಿಯನ್ನು ಅನುಸರಿಸುವ ಹಕ್ಕಿದೆ ಎಂದಿದೆ. ಏತನ್ಮಧ್ಯೆ, ಮಂಗಳವಾರ ಸಂಜೆ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಯುಸಿಸಿಗೆ ಸಂಬಂಧಿಸಿದಂತೆ ಸಭೆ ನಡೆಸಿತು. ಈ ಸಮಯದಲ್ಲಿ, ಅವರು ಷರಿಯತ್ ಕಾನೂನುಗಳನ್ನು ಉಲ್ಲೇಖಿಸುವ ಕರಡನ್ನು ಸಿದ್ಧಪಡಿಸಿದರು. ಶೀಘ್ರದಲ್ಲೇ ಕಾನೂನು ಆಯೋಗಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ

ಆಯೋಗವು ಯುಸಿಸಿ ಬಗ್ಗೆ ಸಾಮಾನ್ಯ ಜನರ ಅಭಿಪ್ರಾಯವನ್ನೂ ಕೇಳಿದೆ. ಮುಸ್ಲಿಂ ಧರ್ಮಗುರುಗಳ ಸಂಘಟನೆಯಾದ JUH ನ ಕಾರ್ಯದರ್ಶಿ ನಿಯಾಜ್ ಅಹ್ಮದ್ ಫಾರೂಕಿ, ಯುಸಿಸಿ ಕುರಿತು ಪ್ರಧಾನಿ ಹೇಳಿಕೆಗಳು ಕಾನೂನು ಆಯೋಗದ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿದ್ದಾರೆ.
ದೇಶದ ಪ್ರಧಾನಿಯಾಗಿರುವುದು ಅವರ ಸ್ಥಾನಮಾನಕ್ಕೆ ತಕ್ಕುದಲ್ಲ ಮತ್ತು ಯುಸಿಸಿ ಕುರಿತು ಇಂತಹ ಬಹಿರಂಗ ಹೇಳಿಕೆ ನೀಡುವ ಮುನ್ನ ಕಾನೂನು ಆಯೋಗದ ಸಲಹೆ ಪಡೆಯಬೇಕಿತ್ತು ಎಂದಿದ್ದಾರೆ.
ಯುಸಿಸಿ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಪ್ರತಿಕ್ರಿಯಿಸಿದ್ದಾರೆ. ಭಾರತದ ಪ್ರಧಾನಿಗೆ ಆರ್ಟಿಕಲ್ 29 ಅರ್ಥವಾಗುತ್ತಿಲ್ಲ ಎಂದು ಓವೈಸಿ ಹೇಳಿದ್ದಾರೆ. ಯುಸಿಸಿ ಹೆಸರಿನಲ್ಲಿ ದೇಶದ ವೈವಿಧ್ಯತೆಯನ್ನು ಕಿತ್ತುಕೊಳ್ಳಬಾರದು. ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಧರ್ಮವನ್ನು ಪ್ರಚಾರ ಮಾಡುವ ಹಕ್ಕನ್ನು ನೀಡಿದೆ ಎಂದು ಎಸ್ಪಿ ಸಂಸದ ಎಸ್ಟಿ ಹಸನ್ ಹೇಳಿದ್ದಾರೆ.