
ಮಂಗಳೂರು ಜೂ 26: ಉಪ್ಪಿನಂಗಡಿ ಮಾಲಿಕ್ ದಿನಾರ್ ಜುಮ್ಮಾ ಮಸೀದಿಯ ಅಧ್ಯಕ್ಷರು ಹಾಗೂ ಸಾಮಾಜಿಕ ಮುಖಂಡರು ಆದ ಕೆಂಪಿ ಮುಸ್ತಫಾ ಹಾಜಿಯವರ ನಿದನಕ್ಕೆ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ
ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡ ಇವರ ಅಗಲುವಿಕೆಯು ಸಮಾಜ ಹಾಗೂ ಸಮುದಾಯಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ . ಇವರ ಮರಣದ ದುಖಃವನ್ನು ಸಹಿಸುವ ಶಕ್ತಿಯನ್ನು ಶೃಷ್ಟಿಕರ್ತ ಅವರ ಕುಟುಂಬಕ್ಕೆ ನೀಡಲಿ , ಹಾಗೂ ಅವರ ಸತ್ಕರ್ಮ ಗಳನ್ನು ಜಗದೊಡೆಯ ಸ್ವೀಕರಿಸಿ ಪರಲೋಕದ ಜೀವನವನ್ನು ಉನ್ನತ ದರ್ಜೆಯಲ್ಲಿ ನೀಡಲಿ ಎಂದು ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಸಂತಾಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

