
ಕಂಪಾಲ: ಉಗ್ರರು ಹಾಸ್ಟೆಲ್ (Hostel) ಒಂದರ ಮೇಲೆ ದಾಳಿ ನಡೆಸಿ 37 ವಿದ್ಯಾರ್ಥಿಗಳನ್ನು ಬೆಂಕಿ ಹಾಕಿ ಸಾಯಿಸಿರುವ ಭೀಕರ ಘಟನೆ ಪಶ್ಚಿಮ ಉಗಾಂಡಾದಲ್ಲಿ (Uganda) ನಡೆದಿದೆ. ಕಳೆದ ಹತ್ತು ವರ್ಷಗಳಲ್ಲಿ ನಡೆದ ಭೀಕರ ಘಟನೆ ಇದಾಗಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎಂಪಾಂಡ್ವೆಯ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮಾಧ್ಯಮಿಕ ಶಾಲೆಯ ಮೇಲೆ ಈ ದಾಳಿ ನಡೆದಿದೆ. ಸೇನೆಯಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.37 ಶವಗಳು ಪತ್ತೆಯಾಗಿದ್ದು ಅವುಗಳನ್ನು ಗುರುತಿಸಲಾರದಷ್ಟು ಸುಟ್ಟು ಕರಕಲಾಗಿವೆ. ಅಲ್ಲದೇ ಕೆಲವು ಮೃತ ದೇಹಗಳ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಶವಗಳನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಗುರುತು ಪತ್ತೆಗೆ ಡಿಎನ್ಎ ಪರೀಕ್ಷೆ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯಲ್ಲಿ 8 ಮಂದಿ ಗಾಯಗೊಂಡಿದ್ದು, 6 ಇತರರನ್ನು ದಾಳಿಕೋರರು ಅಪಹರಿಸಿದ್ದಾರೆ. ಸೇನೆ ಉಗ್ರರನ್ನು ಹಿಂಬಾಲಿಸಿ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಆರ್ ಕಾಂಗೋದಲ್ಲಿ ಕಲಹ ಪೀಡಿತ ಪ್ರದೇಶದಲ್ಲಿ ಸಕ್ರಿಯವಾಗಿರುವ ಉಗ್ರ ಗುಂಪುಗಳಲ್ಲಿ ಒಂದಾದ ADF ಶಾಲೆ ಮೇಲೆ ಆಕ್ರಮಣ ವಿದ್ಯಾರ್ಥಿ ನಿಲಯಗಳನ್ನು ಸುಟ್ಟು ಹಾಕಿದ್ದು ಮಾತ್ರವಲ್ಲದೆ ವಿದ್ಯಾರ್ಥಿಗಳ ಮೇಲೆ ಕತ್ತಿಯಿಂದ ದಾಳಿ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಒಂದು ದಶಕದಲ್ಲಿ ದೇಶದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ಸೇನೆ ಮತ್ತು ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಬಳಿಯ ಕಸೆಸೆ ಜಿಲ್ಲೆಯ ಎಂಪಾಂಡ್ವೆಯಲ್ಲಿರುವ ಮಾಧ್ಯಮಿಕ ಶಾಲೆಯ ಮೇಲೆ ಶುಕ್ರವಾರ ತಡರಾತ್ರಿ ನಡೆದ ಗಡಿಯಾಚೆಗಿನ ದಾಳಿಯ ನಂತರ ಮಿತ್ರರಾಷ್ಟ್ರಗಳ ಪ್ರಜಾಸತ್ತಾತ್ಮಕ ಪಡೆಗಳು(ಎಡಿಎಫ್) ಬಂಡುಕೋರರ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿವೆ