
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು ರಾಜ್ಯ ಸರಕಾರದ ಉಚಿತ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದು ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಭಾಗ್ಯವನ್ನು ಕಲ್ಪಿಸಿದ್ದಾರೆ. ಈ ಯೋಜನೆ ಇಡೀ ರಾಜ್ಯಕ್ಕೆ ಖುಷಿಯನ್ನು ಕೊಟ್ಟರೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಹಿಳೆಯರಿಗೆ ಪ್ರಯೋಜನಕ್ಕೆ ಸಿಗುತ್ತಿಲ್ಲ ಎಂದು ಸ್ವತಃ ಜನರೇ ಹೇಳಿಕೊಳ್ಳುತ್ತಿದ್ದು ತಕ್ಷಣ ಎರಡೂ ಜಿಲ್ಲೆಗಳಿಗೆ ಸರಕಾರಿ ಬಸ್ ಗಳ ಓಡಾಟವನ್ನು ಆರಂಭಿಸಬೇಕು ಒತ್ತಾಯ ಹೆಚ್ಚಾಗಿದ್ದು ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.


ದಕ್ಷಿಣ ಕನ್ನಡಜಿಲ್ಲೆಯಲ್ಲಿ ಖಾಸಗಿ ಬಸ್ಸಿನ ಝಮಾನ ಅಂತ್ಯ ವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಜಿಲ್ಲೆಯಲ್ಲಿ ನಡೆದ ಅನೇಕ ಕೋಮು ಗಲಭೆ, ಗುಂಪು ಹತ್ಯೆ, ಹೆಣ್ಣಿನ ವಿಚಾರಕ್ಕೆ ಗಲಭೆ ಈ ಎಲ್ಲಾ ಘಟನೆ ಗಳಿಗೆ ಖಾಸಗಿ ಬಸ್ಸಿನ ಕೆಲವೊಂದು ಚಾಲಕ ನಿರ್ವಾಹಕರು ಕಾರಣ ವಾಗಿರುವುದು ಹೆಚ್ಚಿನ ಸಂದರ್ಭದಲ್ಲಿ ಕಂಡು ಬಂದಿದೆ ಈ ಸರಕಾರ ಗಂಭೀರ ವಾಗಿ ಪರಿಗಣಿಸುವ ಸಾಧ್ಯತೆ ಇದೆ

KSRTC ಬಸ್ ಸೌಲಭ್ಯದಿಂದ ವಂಚಿತವಾಗಿವೆ ದಕ್ಷಿಣ ಕರ್ನಾಟಕದ ಸಾವಿರಾರು ಗ್ರಾಮಗಳು

ರಾಜ್ಯ ಸರ್ಕಾರದ ಶಕ್ತಿ ಯೋಜನೆ ಅಡಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಕರ್ನಾಟಕದ ಅದೆಷ್ಟೋ ಹಳ್ಳಿಗಳು ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಾಣದೆ ವಂಚಿತವಾಗಿವೆ. ದಕ್ಷಿಣ ಕರ್ನಾಟಕದ 15 ಜಿಲ್ಲೆಗಳ ಸಾವಿರಾರು ಊರುಗಳು ಇನ್ನುವರೆಗು ಕೆಎಸ್‌ಆರ್‌ಟಿಸಿ ಬಸ್ ಕಂಡಿಲ್ಲ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಲವಾರು ವರ್ಷಗಳಿಂದ ಖಾಸಗಿ ಬಸ್ ಗಳ ದರ್ಬಾರ್ ನಡೆಯುತ್ತಿದೆ. ಮಂಗಳೂರಿನಲ್ಲಿ ಹಾಗೂ ಉಡುಪಿಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸರಕಾರಿ ಬಸ್ಗಳಿವೆ. ಇದೀಗ ಶಕ್ತಿಯೋಜನೆ ಜಾರಿ ಘೋಷಣೆಯಾಗುತ್ತಿದ್ದಂತೆ ಸರಕಾರಿ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ವಿವಿಧ ವರ್ಗದ ಜನರಿಂದ ಒತ್ತಾಯ ಕೇಳಿ ಬರುತ್ತಿದೆ. ಇದೀಗ ರಾಜಕೀಯ ಪಕ್ಷದ ನಾಯಕರೂ ಕೂಡ ಶಕ್ತಿ ಯೋಜನೆಯನ್ನು ಖಾಸಗಿ ಬಸ್ ಗಳಿಗೂ ವಿಸ್ತರಿಸಬೇಕು ಅನ್ನುವಂತಹ ಒತ್ತಾವನ್ನು ಮಾಡುತ್ತಿದ್ದಾರೆ.ಆದರೆ ಸರಕಾರ ಖಾಸಾಗಿ ಬಸ್ಸಿನಲ್ಲಿ ಫ್ರೀ ಕೊಡುವುದಿಲ್ಲವೆಂದು ಈಗಾಗಲೇ ಸ್ಪಷ್ಟ ಪಡಿಸಿದೆ. ಆದುದರಿಂದ ಸುಮಾರು 350 ಸರಕಾರಿ ಬಸ್ಸುಗಳು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಸಂಚರಿಸಲು ಅನುಮತಿ ಸಿಗುವ ಸಾಧ್ಯತೆ ಇದೆ.

ಸರಕಾರಿ ಉಚಿತ ಬಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದರೆ ಖಾಸಗಿ ಬಸ್ ನ ಮಾಲೀಕರಿಗೆ ದೊಡ್ಡ ಹೊಡೆತ ಬೀಳುವುದಂತೂ ಗ್ಯಾರಂಟಿ. ಸರಕಾರ ಲಾಭಿಗಳಿಗೆ ಮಣಿಯದೇ ದಿಟ್ಟ ತೀರ್ಮಾನವನ್ನು ತೆಗೆದುಕೊಳ್ಳುವುದೇ ಅನ್ನುವುದನ್ನು ಕಾದು ನೋಡಬೇಕಿದೆ.
ಕೆಎಸ್‌ಆರ್‌ಟಿಸಿ ವ್ಯಾಪ್ತಿಗೆ ಒಳಪಡುವ ದಕ್ಷಿಣ ಕರ್ನಾಟಕದ 15 ಜಿಲ್ಲೆಗಳ 17,794 ಗ್ರಾಮಗಳ ಪೈಕಿ 2,570 ಗ್ರಾಮಗಳಿಗೆ ಇನ್ನೂ ಕೆಎಸ್‌ಆರ್‌ಟಿಸಿ ಬಸ್ ಸೇವೆ ದೊರೆತಿಲ್ಲ. ಇದರಿಂದಾಗಿ ಈ ಗ್ರಾಮಗಳ ಮಹಿಳೆಯರು ಶಕ್ತಿ ಯೋಜನೆಯಿಂದ ವಂಚಿತರಾಗಿದ್ದು, ಶೀಘ್ರದಲ್ಲೇ ನಮ್ಮ ಹಳ್ಳಿಗಳಿಗೂ ಬಸ್ ಸೇವೆ ಒದಗಿಸಿ ಎಂದು ಒತ್ತಾಯಿಸಿದ್ದಾರೆ.
2023ರ ಫೆ.24ರಂದು ಶಿವಮೊಗ್ಗ ಎಂಎಲ್‌ಸಿ ಡಿ.ಎಸ್ ಅರುಣ ಅವರು ಅಧಿವೇಶನದಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಾರಿಗೆ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು ಚಿತ್ರದುರ್ಗ ಜಿಲ್ಲೆಯ 600 ಹಳ್ಳಿಗಳು, ತುಮಕೂರು ಜಿಲ್ಲೆಯ 484, ಶಿವಮೊಗ್ಗ ಜಿಲ್ಲೆಯ 434, ದಾವಣಗೆರೆ ಜಿಲ್ಲೆಯ 356, ಚಿಕ್ಕಮಗಳೂರು ಜಿಲ್ಲೆಯ 331, ಉಡುಪಿ ಜಿಲ್ಲೆಯ 101, ದಕ್ಷಿಣ ಕನ್ನಡ ಜಿಲ್ಲೆಯ 99, ಮಂಡ್ಯ ಜಿಲ್ಲೆಯ 53, ಕೊಡಗು ಜಿಲ್ಲೆಯ 45 ಹಳ್ಳಿಗಳು ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಹೊಂದಿಲ್ಲ ಎಂದು ತಿಳಿಸಿದ್ದರು.