
ಹೈದರಾಬಾದ್: ಅರ್ಚಕ (Priest) ನೊಬ್ಬ ಯುವತಿಯನ್ನು ಕ್ಲಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಗೈದು ಬಳಿಕ ಶವವನ್ನು ಮ್ಯಾನ್‍ಹೋಲ್ (Manhole) ಗೆ ಬಿಸಾಕಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.ಮೃತಳನ್ನು ಕುರುಗಂಟಿ ಅಪ್ಸರಾ (Kuruganti Apsara) ಎಂದು ಗುರುತಿಸಲಾಗಿದೆ. ಈಕೆಯನ್ನು ಅಯ್ಯಗಿರಿ ವೆಂಕಟ್ ಸೂರ್ಯ ಸಾಯಿ ಕೃಷ್ಣ (36) (Ayyagari Venkat Surya Sai Krishna) ಕೊಲೆ ಮಾಡಿದ್ದಾನೆ.

ನಡೆದಿದ್ದೇನು..?: ಆರೋಪಿ ಅಯ್ಯಗಾರಿ ವೆಂಕಟ್ ಸೂರ್ಯ ಸಾಯಿಕೃಷ್ಣಗೆ ಈಗಾಗಲೇ ಮದುವೆಯಾಗಿತ್ತು. ಈ ವಿಚಾರ ಗೊತ್ತಿದ್ದರೂ ಅಪ್ಸರಾ ತನ್ನನ್ನು ಮದುವೆಯಾಗುಂತೆ ಪೀಡಿಸಿದ್ದಾಳೆ. ಒಂದು ವೇಳೆ ನೀನು ನನ್ನ ಮದುವೆಯಾಗಲು ಒಪ್ಪಿಕೊಳ್ಳದೇ ಇದ್ದರೆ ನಮ್ಮಿಬ್ಬರ ಸಂಬಂಧದ ಬಗ್ಗೆ ಬಹಿರಂಗಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ.

ಅಕ್ರಮ ಸಂಭಂದ ಬಯಲು ಗೊಳ್ಳುವ ಭೀತಿಯಿಂದ , ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದಾನೆ. ಅಂತೆಯೇ ಜೂನ್ 3ರಂದು ರಾತ್ರಿ ಅಪ್ಸರಾಳನ್ನು ಆಕೆಯ ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಿದ್ದಾನೆ. ನಂತರ ಆಕೆಯನ್ನು ಕೊಲೆ ಮಾಡಿದ್ದಾನೆ. ಅಲ್ಲದೆ ಶವವನ್ನು ತನ್ನ ಕಾರಿನಲ್ಲಿ ತೆಗೆದುಕೊಂಡು ಹೋಗಿ ಮ್ಯಾನ್‍ಹೋಲ್‍ನಲ್ಲಿ ಬಿಸಾಕಿದ್ದಾನೆ. ನಂತರ ಪೊಲೀಸ್ ಠಾಣೆಗೆ ಬಂದು ಅಪ್ಸರಾ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ.

ಜೂ.6ರಂದು ಎರಡು ಟಿಪ್ಪರ್ ಲೋಡ್ ಕೆಂಪು ಮಣ್ಣು ತಂದು ಮ್ಯಾನ್ ಹೋಲ್ ಮುಚ್ಚಿದ್ದರು. ಆಕೆಯ ಬ್ಯಾಗ್ ಹಾಗೂ ಚಪ್ಪಲಿ ಮೊದಲಾದವುಗಳನ್ನೆಲ್ಲ ಸುಟ್ಟು ಹಾಕಿದ್ದಾನೆ. ಇತ್ತ ಕಾರನ್ನು ವಾಶ್ ಮಾಡಿ ತನ್ನ ಅಪಾರ್ಟ್‍ಮೆಂಟ್ ಮುಂದೆ ನಿಲ್ಲಿಸಿದ್ದಾನೆ. ಮರುದಿನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಮ್ಯಾನ್‍ಹೋಲ್ ಪರಿಶೀಲನೆ ನಡೆಸಲು ಮುಂದಾದಾಗ ಘಟನೆ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಸ್ಥಳೀಯ ಸಿಸಿಟಿವಿ ಪರಿಶೀಲನೆ ನಡೆಸಿದರು. ಈ ವೇಳೆ ವ್ಯಕ್ತಿಯೊಬ್ಬ ಶವವನ್ನು ತಂದು ಮ್ಯಾನ್‍ಹೋಲ್‍ಗೆ ಹಾಕಿರುವುದು ಬಯಲಾಗಿದೆ. ಅಂತೆಯೇ ದೂರು ಕೊಟ್ಟ ಸಾಯಿಕೃಷ್ಣನನ್ನೇ ವಿಚಾರಣೆಗೆ ಒಳಪಡಿಸಿದಾಗ ಆತ ಯುವತಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ