
ಜ್ಞಾನವಾಪಿ ಮಸೀದಿ ಪ್ರಕರಣದ ಮುಖ್ಯ ದಾವೆದಾರರಾದ ರಾಖಿ ಸಿಂಗ್ ಅವರು ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ತಮ್ಮ ಸಹವರ್ತಿ ಅರ್ಜಿದಾರರು ತಮ್ಮ ವಿರುದ್ಧ ಸುಳ್ಳು ಪ್ರಚಾರ ಮಾಡಿದ್ದಾರೆ, ಇದು ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ರಾಖಿ ಸಿಂಗ್ ಅವರು ವಾರಣಾಸಿಯ ಜ್ಞಾನವಾಪಿ ಮಸೀದಿಯೊಳಗೆ ದೈನಂದಿನ ಪೂಜೆಯ ಹಕ್ಕಿನ ಪ್ರಮುಖ ಅರ್ಜಿದಾರರಾಗಿದ್ದಾರೆ. ಅವರು, ”ಮಾನಸಿಕ ಒತ್ತಡದಿಂದಾಗಿ ದಯಾಮರಣವನ್ನು ಕೋರುತ್ತಿದ್ದೇನೆ. ತಾವು ಇದನ್ನು ಪರಿಗಣಿಸಿ ಅನುಮತಿ ನೀಡಬೇಕು” ಎಂದು ತನ್ನ ಪತ್ರದಲ್ಲಿ ಹೇಳಿರುವುದಾಗಿ .ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ವಾರಣಾಸಿಯ ನ್ಯಾಯಾಲಯದಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಮಾ ಶೃಂಗಾರ್ ಗೌರಿ ಸ್ಥಳದಲ್ಲಿ ದೈನಂದಿನ ಪೂಜೆಯ ಹಕ್ಕನ್ನು ಕೋರಿ ಮೊಕದ್ದಮೆ ಹೂಡಿರುವ ನಾಲ್ವರು ಅರ್ಜಿದಾರರಲ್ಲಿ ರಾಖಿ ಸಿಂಗ್ ಒಬ್ಬರಾಗಿದ್ದಾರೆ
ಈ ಪ್ರಕರಣದಲ್ಲಿ ನನ್ನ ಸಹಚರರಾದ ಲಕ್ಷ್ಮೀದೇವಿ, ಸೀತಾ ಸಾಹು, ಮಂಜು ವ್ಯಾಸ್, ರೇಖಾ ಪಾಠಕ್, (ಹಿರಿಯ) ವಕೀಲ ಹರಿಶಂಕರ್ ಜೈನ್, ಅವರ ಪುತ್ರ ವಕೀಲ ವಿಷ್ಣು ಶಂಕರ್ ಜೈನ್ ಮತ್ತು ಅವರ ಕೆಲವು ಸಹೋದ್ಯೋಗಿಗಳು ಸುಳ್ಳು ಪ್ರಚಾರ ಮಾಡಿ ನನ್ನ ಮತ್ತು ನನ್ನ ಮಾನಹಾನಿ ಮಾಡಿದ್ದಾರೆ” ಎಂದು ಜ್ಞಾನವಾಪಿ ಮಸೀದಿ ಅರ್ಜಿದಾರ ರಾಖಿ ಸಿಂಗ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ರಾಖಿ ಸಿಂಗ್ ತನ್ನ ಪತ್ರದಲ್ಲಿ ತನ್ನ ಪ್ರಕರಣವನ್ನು ಹಿಂಪಡೆಯುತ್ತಿರುವುದಾಗಿ ಸಹ ಅರ್ಜಿದಾರರು ವದಂತಿಯನ್ನು ಹರಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ “ನನ್ನ ಕಡೆಯಿಂದ ಅಂತಹ ಯಾವುದೇ ಹೇಳಿಕೆ ಅಥವಾ ಮಾಹಿತಿ ನೀಡಲಾಗಿಲ್ಲ ಅಥವಾ ಈ ಪ್ರಕರಣದಲ್ಲಿ ನನ್ನ ಪರವಾಗಿ ವಾದಿಸಿದ ನನ್ನ ಚಿಕ್ಕಪ್ಪ ಜಿತೇಂದ್ರ ಸಿಂಗ್ ವಿಸೇನ್ ಅಂತಹ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಜೂನ್ 4 ರಂದು, ರಾಖಿ ಸಿಂಗ್ ಅವರ ಚಿಕ್ಕಪ್ಪ ಹಿಂದೂ ಪಕ್ಷದ ಪ್ರಮುಖ ವ್ಯಾಜ್ಯಗಳಲ್ಲಿ ಒಬ್ಬರಾದ ಜಿತೇಂದ್ರ ಸಿಂಗ್ ವಿಸೇನ್ ಅವರು ತಾವು ಮತ್ತು ಅವರ ಕುಟುಂಬವು “ಕಿರುಕುಳ” ಆರೋಪದ ಕಾರಣ ಜ್ಞಾನವಾಪಿ ಸಮಸ್ಯೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಿಂದ ಹಿಂದೆ ಸರಿಯುತ್ತಿದೆ ಎಂದು ಘೋಷಿಸಿದರು.

ನಾನು ಮತ್ತು ನನ್ನ ಕುಟುಂಬ (ಪತ್ನಿ ಕಿರಣ್ ಸಿಂಗ್ ಮತ್ತು ಸೊಸೆ ರಾಖಿ ಸಿಂಗ್) ದೇಶ ಮತ್ತು ಧರ್ಮದ ಹಿತದೃಷ್ಟಿಯಿಂದ ನಾವು ವಿವಿಧ ನ್ಯಾಯಾಲಯಗಳಲ್ಲಿ ಸಲ್ಲಿಸಿದ್ದ ಎಲ್ಲಾ ಜ್ಞಾನವಾಪಿ ಸಂಬಂಧಿತ ಪ್ರಕರಣಗಳಿಂದ ಹಿಂದೆ ಸರಿಯುತ್ತಿದ್ದೇವೆ” ಎಂದು ವಿಶ್ವ ವೈದಿಕ ಸನಾತನ ಸಂಘದ ಮುಖ್ಯಸ್ಥ ವಿಸೇನ್ ಅವರ ಒಂದು ಹೇಳಿಕೆಯಲ್ಲಿ ಹೇಳಿದ್ದಾರೆ.
ಹೀಗಾಗಿ ಇಡೀ ದೇಶದಲ್ಲಿ ನಮ್ಮ ಬಗ್ಗೆ ಗೊಂದಲ ಸೃಷ್ಟಿಸುವ ಮೂಲಕ ಇಡೀ ಹಿಂದೂ ಸಮಾಜ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಎತ್ತಿಕಟ್ಟಿದೆ, ಇದರಿಂದಾಗಿ ನಾನು ಮತ್ತು ವಿಸೇಂಜಿಯ ಇಡೀ ಕುಟುಂಬ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇವೆ ಎಂದು ಅವರು ಬರೆದಿದ್ದಾರೆ.

”ಆದ್ದರಿಂದ, ನೀವು ನನಗೆ ದಯಾಮರಣದ ಅನುಮತಿಯನ್ನು ನೀಡುವಂತೆ ಮತ್ತು ಈ ಅಗಾಧವಾದ ಮಾನಸಿಕ ನೋವು ಮತ್ತು ಸಂಕಟವನ್ನು ತೊಡೆದುಹಾಕಲು ದಾರಿ ಮಾಡಿಕೊಡಬೇಕೆಂದು ವಿನಂತಿಸುತ್ತಿದ್ದೇನೆ. ಇದರಿಂದ ನಾನು ಶಾಶ್ವತವಾಗಿ ಮಲಗುವ ಮೂಲಕ ಅಂತಿಮ ಶಾಂತಿಯನ್ನು ಪಡೆಯಬಹುದು. ನಿಮ್ಮ ಉತ್ತರಕ್ಕಾಗಿ ನಾನು 9 ಜೂನ್ 2023 ರವರೆಗೆ ಬೆಳಿಗ್ಗೆ 9:00 ಗಂಟೆಗೆ ಕಾಯುತ್ತೇನೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
”ನಿಮ್ಮಿಂದ ಯಾವುದೇ ಆದೇಶ ಬರದಿದ್ದರೆ, ಅದರ ನಂತರ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಪತ್ರವನ್ನು ಮುಕ್ತಾಯಗೊಳಿಸಲಾಗಿದೆ.
ಗಮನಾರ್ಹವಾಗಿ, ರಾಖಿ ಸಿಂಗ್ ತನ್ನ ಮತ್ತು ಇತರ ಮೂವರು ಫಿರ್ಯಾದಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸಾರ್ವಜನಿಕವಾಗಿ ಪ್ರಸಾರ ಮಾಡಿದ್ದು ಇದೇ ಮೊದಲಲ್ಲ. ಸೆಪ್ಟೆಂಬರ್ 2022 ರಲ್ಲಿ, ಜ್ಞಾನವಾಪಿ ಮಸೀದಿಯೊಳಗೆ ಪತ್ತೆಯಾದ ವಿವಾದಿತ ರಚನೆಯ ಕಾರ್ಬನ್ ಡೇಟಿಂಗ್ ಅರ್ಜಿಯನ್ನು ಅವರು ವಿರೋಧಿಸಿದ್ದರು. ಹಿಂದೂ ಪಕ್ಷವು ಶಿವಲಿಂಗವೆಂದು ಹೇಳಿಕೊಂಡರೆ ಮುಸ್ಲಿಂ ಕಡೆಯವರು ಕಾರಂಜಿ ಎಂದು ಹೇಳುತ್ತಾರೆ.
ಮೇ 23ರಂದು, ವಾರಣಾಸಿ ಜಿಲ್ಲಾ ನ್ಯಾಯಾಲಯವು ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ರೀತಿಯ ಎಲ್ಲಾ ಏಳು ಪ್ರಕರಣಗಳನ್ನು ಕ್ರೋಢೀಕರಿಸಿ ಒಟ್ಟಿಗೆ ವಿಚಾರಣೆ ನಡೆಸುವಂತೆ ಆದೇಶಿಸಿತು. ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣವು ಪ್ರಮುಖ ಪ್ರಕರಣವಾಗಿದೆ.
ಕೃಪೆ :ನಾನು ಗೌರಿ