Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಮಾಹಿತಿ ಹಕ್ಕು ಕಾಯ್ದೆ | ತುಮಕೂರು ಜಿಲ್ಲೆಯಲ್ಲಿ 1,323 ಮೇಲ್ಮನವಿ ಬಾಕಿ: ಬದ್ರುದ್ದೀನ್ ಕೆ.ಮಾಣಿ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

    ಸೋಲುವ ಭಯ.. ಒಮಾನ್​ ವಿರುದ್ಧ ಗೆಲ್ಲಲು ಹರಸಾಹಸಪಟ್ಟ ಸೂರ್ಯಕುಮಾರ್​ ಪಡೆ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಷ್ಟ್ರೀಯ

Sandesara Brothers: ಭಾರತದಲ್ಲಿ ವಂಚಕರು, ನೈಜೀರಿಯಾದಲ್ಲಿ ಹೀರೋಗಳು… 14,000 ಕೋಟಿ ಪಂಗನಾಮಿ ಹಾಕಿ ಪರಾರಿಯಾದ ಸಂದೇಸರ ಸಹೋದರರ ಕರ್ಮಕಾಂಡ

editor tv by editor tv
June 7, 2023
in ರಾಷ್ಟ್ರೀಯ
0
Sandesara Brothers: ಭಾರತದಲ್ಲಿ ವಂಚಕರು, ನೈಜೀರಿಯಾದಲ್ಲಿ ಹೀರೋಗಳು… 14,000 ಕೋಟಿ ಪಂಗನಾಮಿ ಹಾಕಿ ಪರಾರಿಯಾದ ಸಂದೇಸರ ಸಹೋದರರ ಕರ್ಮಕಾಂಡ
1.9k
VIEWS
Share on FacebookShare on TwitterShare on Whatsapp

Story Of Indian Businessmen In Nigeria: ಗುಜರಾತ್ ಮೂಲದ ಸಂದೇಸರ ಸಹೋದರರು ಭಾರತದ ಬ್ಯಾಂಕುಗಳಿಂದ ಅಕ್ರಮವಾಗಿ 14,000 ಕೋಟಿ ರೂ ಸಾಲ ಪಡೆದು ತೀರಿಸದೇ ನೈಜೀರಿಯಾಗೆ ಹೋಗಿ ದೊಡ್ಡ ಉದ್ಯಮಿಗಳಾಗಿ ಬೆಳೆದಿದ್ದಾರೆ. ಈ ಬಗ್ಗೆ ಒಂದು ವರದಿ….

ನವದೆಹಲಿ: ಇವರ ಹೆಸರು ನಿತಿನ್ ಸಂದೇಸರ ಮತ್ತು ಚೇತನ್ ಸಂದೇಸರ (Sandesara Brothers). ನೈಜಿರಿಯಾ ದ ಅತಿದೊಡ್ಡ ಸ್ವತಂತ್ರ ತೈಲ ಉತ್ಪಾದಕ (Oil Producing Company) ಸಂಸ್ಥೆಯ ಒಡೆಯರು. ಹೆಚ್ಚಿನ ಮಂದಿಗೆ ಇವರ ಹೆಸರು ಗೊತ್ತಿರುವುದಿಲ್ಲ. ಸದ್ದಿಲ್ಲದೇ ಭಾರತ ಬಿಟ್ಟು ಪರಾರಿಯಾದವರ ಪೈಕಿ ಈ ಸಹೋದರರೂ ಇದ್ದಾರೆ. ನೈಜೀರಿಯಾದಲ್ಲಿ ಇವರ ಅದ್ಧೂರಿ ಪಾರ್ಟಿಗಳು ಎಲ್ಲರ ಕಣ್ಮನ ಸೆಳೆಯುತ್ತವೆ. ದೀಪಾವಳಿ ಹಬ್ಬವನ್ನು ಇವರು ಪ್ರತೀ ವರ್ಷ ಧಾಂ ಧೂಂ ಎಂದು ಆಚರಿಸುತ್ತಾರೆ. ಇವರು ಆಯೋಜಿಸುವ ಪಾರ್ಟಿಗಳಿಗೆ ಭಾರತದಿಂದ ಬಾಲಿವುಡ್ ಸಿಂಗರ್​ಗಳು ಹೋಗಿ ಹಾಡುವುದುಂಟು. ಇದೆಲ್ಲಕ್ಕಿಂತ ಹೆಚ್ಚಾಗಿ ನೈಜೀರಿಯಾದ ಆರ್ಥಿಕ ದುಸ್ಥಿತಿಯಲ್ಲಿ ಆ ದೇಶಕ್ಕೆ ಸಂದೇಸರ ಸಹೋದರರು ಪುಷ್ಟಿ ಕೊಡುವ ಆಪದ್ಬಾಂಧವರಂತೆ ಕಾಣುತ್ತಾರೆ. ಭಾರತದಲ್ಲಿ ಇವರ ವಿರುದ್ಧ 14,000 ಕೋಟಿ ರೂ ವಂಚನೆಯ ಹಗರಣ ಇದೆಯಾದರೂ ನೈಜೀರಿಯಾಗೆ ಇವರು ಹೀರೋಗಳಾಗಿ ಹೋಗಿದ್ದಾರೆ.

ನೈಜೀರಿಯಾದ ಮರುಭೂಮಿಯಲ್ಲಿ 1 ಬಿಲಿಯನ್ ಬ್ಯಾರಲ್​ಗಳಿಷ್ಟಿರುವ ತೈಲನಿಕ್ಷೇಪ ಸಿಕ್ಕಿರುವುದು ಸಂದೇಸರ ಸಹೋದರರಿಗೆ ಸುಗ್ಗಿ ತಂದಿದೆ. ಶೆಲ್ ಮತ್ತು ಎಕ್ಸಾನ್ ಮೋಬಿಲ್ ಸಂಸ್ಥೆಗಳು ನೈಜೀರಿಯಾ ಬಿಟ್ಟು ಹೋಗುತ್ತಿರುವ ಹಿನ್ನೆಲೆಯಲ್ಲಿ ಸಂದೇಸರರ ಪ್ರಾಮುಖ್ಯತೆ ನೈಜೀರಿಯಾಗೆ ಇನ್ನಿಲ್ಲದಷ್ಟು ಹೆಚ್ಚಾಗಿದೆ

ಚೇತನ್ ಮತ್ತು ನಿತಿನ್ ಸಂದೇಸರ ಅವರಿಬ್ಬರನ್ನು ಬಂಧಿಸಿ ಅಥವಾ ತಮಗೆ ಒಪ್ಪಿಸಿ ಎಂದು ಭಾರತ ಸರ್ಕಾರ ಮಾಡಿಕೊಂಡ ಮನವಿಯನ್ನು ನೈಜೀರಿಯಾ ಸಾರಾಸಗಟಾಗಿ ತಿರಸ್ಕರಿಸಿದೆ. ಸಂದೇಸರರ ವಿರುದ್ಧ ಭಾರತ ಮಾಡುತ್ತಿರುವ ಆರೋಪದಲ್ಲಿ ಪ್ರಾಮಾಣಿಕತೆ ಇಲ್ಲ ಎಂಬುದು ನೈಜೀರಿಯಾದ ವಾದ. ಅಷ್ಟರಮಟ್ಟಿಗೆ ಸಂದೇಸರರು ನೈಜೀರಿಯಾದಲ್ಲಿ ಛಾಪು ಮೂಡಿಸಿದ್ದಾರೆ. ನೈಜೀರಿಯಾ ಸರ್ಕಾರಕ್ಕೆ ಬರುವ ಆದಾಯದಲ್ಲಿ ಶೇ. 2ರಷ್ಟು ಮೊತ್ತವು ಸಂದೇಸರರ ಕಂಪನಿ ಕಟ್ಟುವ ತೆರಿಗೆಯೇ ಸೇರಿದೆ. ಅಂದರೆ ನೈಜೀರಿಯಾ ಬೊಕ್ಕಸ ತುಂಬಲು ಸಂದೇಸರರ ಪಾತ್ರ ಮಹತ್ವದ್ದು. ಹೀಗಾಗಿ, ಚಿನ್ನದ ಮೊಟ್ಟೆಯನ್ನು ಯಾರು ತಾನೇ ಕಳೆದುಕೊಳ್ಳಲು ಸಾಧ್ಯ?

ಸಂದೇಸರ ಬ್ರದರ್ಸ್ ಭಾರತದಲ್ಲಿ ಮಾಡಿದ ಕರ್ಮಕಾಂಡಗಳೇನು?

ಗುಜರಾತ್ ಮೂಲದ ಚೇತನ್ ಮತ್ತು ನಿತಿನ್ ಸಂದೇಸರರು ಎಂಬತ್ತರ ದಶಕದಲ್ಲಿ ಚಹಾ ವ್ಯವಹಾರ ಮಾಡಿಕೊಂಡಿದ್ದರು. ನಂತರ ತೈಲ ಮತ್ತು ಅನಿಲ, ಆರೋಗ್ಯ, ನಿರ್ಮಾಣ ಕ್ಷೇತ್ರಗಳಲ್ಲಿ ಉದ್ಯಮ ಬೆಳೆಸಿದರು. 2010ರಷ್ಟರಲ್ಲಿ ಇವರ ಗ್ರೂಪ್​ನ ಮೌಲ್ಯ 7 ಬಿಲಿಯನ್ ಡಾಲರ್ ಆಗಿತ್ತು. ಆದರೆ, ಇಷ್ಟು ಬ್ರಹ್ಮಾಂಡ ಬೆಳವಣಿಗೆಯಲ್ಲಿ ಅಕ್ರಮಗಳು ಮಡುಗಟ್ಟಿದ್ದವು ಎಂಬ ಆರೋಪ ಇದೆ. ಅಂದರೆ, ಸಂದೇಶರ ಸಹೋದರರು ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಣೆಗೆ ಮನಬಂದತೆ ಸಾಲ ಮಾಡಿದ್ದರು. ಎಸ್​ಬಿಐ, ಬ್ಯಾಂಕ್ ಆಫ್ ಬರೋಡ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳಿಂದ ಇವರು 14,000 ಕೋಟಿ ರೂ ಸಾಲ ಪಡೆದಿದ್ದರು. ಅದಾಗಿದ್ದರೆ ವ್ಯವಹಾರ ನಿಮಿತ್ತ ಎನ್ನಬಹುದು. ಆದರೆ, ಇವರು ಸುಳ್ಳು ದಾಖಲೆ ಸೃಷ್ಟಿಸಿ ಬ್ಯಾಂಕುಗಳಲ್ಲಿ ಸಾಲ ಪಡೆದು ವಂಚಿಸಿದ್ದು ಬೆಳಕಿಗೆ ಬಂದಿತ್ತು. ಈ ಸಾಲದಲ್ಲಿ ಒಂದಷ್ಟು ಹಣವನ್ನು ವಿದೇಶಗಳಿಗೆ ಸಾಗಿಸಿದ್ದರು.

ಇವರ ಅಕ್ರಮ ಬೆಳಕಿಗೆ ಬರುತ್ತಲೇ ಇಡಿ, ಸಿಬಿಐ ತನಿಖೆ ಕೈಗೊಂಡವು. 2017ರಲ್ಲಿ ಇವರು ದೇಶಬಿಟ್ಟು ಓಡಿಹೋಗಿ ನೈಜೀರಿಯಾ ಸೇರಿಕೊಂಡರು. 20 ವರ್ಷದ ಹಿಂದೆಯೇ ಇವರು ನೈಜೀರಿಯಾದಲ್ಲಿ ತೈಲ ವ್ಯವಹಾರ ಆರಂಭಿಸಿದ್ದರು. ಅದೇ ವ್ಯವಹಾರ ಸಂದೇಸರರ ಕೈಹಿಡಿಯಿತು. ಭಾರತದ ಕಾನೂನು ಕೈಗಳಿಂದ ತಪ್ಪಿಸಿಕೊಳ್ಳಲು ಇದೇ ಉದ್ಯಮವು ಸಂದೇಸರರಿಗೆ ಸಹಾಯವಾಗಿದೆ. ಚೇತನ್ ಮತ್ತು ನಿತಿನ್ ಸಂದೇಸರರು ಭಾರತ ಸರ್ಕಾರಕ್ಕೆ ವಿಲನ್ ಆದರೆ, ನೈಜೀರಿಯಾ ಪಾಲಿಗೆ ಹೀರೋಗಳಾಗಿ ಹೋಗಿದ್ದಾರೆ.

Previous Post

ನೂತನ ಸಂಸತ್ ಭವನದ ಮೊದಲ ಫೋಟೊದಲ್ಲಿದ್ದು ಚುನಾಯಿತ ಸದಸ್ಯರಲ್ಲ, ಕೇಸರಿ ಬಟ್ಟೆ ತೊಟ್ಟವರು: ಶರದ್ ಪವಾರ್

Next Post

Gruha jyothi scheme: ಫ್ರೀ ವಿದ್ಯುತ್ ಯೋಜನೆ ಬಗ್ಗೆ ಮತ್ತಷ್ಟು ವಿವರಣೆ ನೀಡಿದ ಸಚಿವ  ಕೆಜೆ ಜಾರ್ಜ್

Next Post
Gruha jyothi scheme: ಫ್ರೀ ವಿದ್ಯುತ್ ಯೋಜನೆ ಬಗ್ಗೆ ಮತ್ತಷ್ಟು ವಿವರಣೆ ನೀಡಿದ ಸಚಿವ  ಕೆಜೆ ಜಾರ್ಜ್

Gruha jyothi scheme: ಫ್ರೀ ವಿದ್ಯುತ್ ಯೋಜನೆ ಬಗ್ಗೆ ಮತ್ತಷ್ಟು ವಿವರಣೆ ನೀಡಿದ ಸಚಿವ  ಕೆಜೆ ಜಾರ್ಜ್

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.